ಮಸ್ಕಿ: ಮಸ್ಕಿ ವಿಧಾನಸಭಾ ಕ್ಷೆತ್ರ ವ್ಯಾಪ್ತಿಯ ಹಾಲಾಪುರ ಗ್ರಾಮ ಪಂಚಾಯತಿ ತಾಲೂಕಿನಲ್ಲಿಯೇ ಅತಿದೊಡ್ಡ ಗ್ರಾಪಂ ಆಗಿದೆ ಅದಕ್ಕೆ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದ್ದು ಆದ್ದರಿಂದ ಹಾಲಾಪುರು ಗ್ರಾಪಂ ವಿಭಜಿಸಿ, ಹೊಸ ಗ್ರಾಪಂ ರಚಿಸಿ ಇಲ್ಲದಿದ್ದರೆ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿತ್ತೇವೆ ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಮಸ್ಕಿ ಪಟ್ಟಣದ ತಾಲೂಕು ಪಂಚಾಯತ್ ಕಚೇರಿಯಲ್ಲಿ ತಾಪಂ ಇಒ ಅಮರೇಶ ಯಾದವ ಅವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು
ಮಸ್ಕಿ ತಾಲೂಕಿನ ಹಾಲಾಪುರ ಗ್ರಾಮ ಪಂಚಾಯತಿಯು
ಒಟ್ಟು 26 ಸದಸರನ್ನು ಒಳಗೊಂಡಿದ್ದು, 16 ಗ್ರಾಮ, ಕ್ಯಾಂಪಗಳನ್ನು , ಅಂದಾಜು 18000 ಸಾವಿರ ಜನಸಂಖ್ಯೆಯನ್ನು ಹೊಂದಿದ್ದು .ಭೌಗೋಳಿಕವಾಗಿ ವಿಶಾಲವಾಗಿರುತ್ತದೆ.ಕೆಲವು ಗ್ರಾಮಗಳಿಗೆ ಬಸ್ ಸೌಕರ್ಯ ಇರುವುದಿಲ್ಲ,ಗ್ರಾಮ ಪಂಚಾಯತಿ ಕೆಲಸ ಕಾರ್ಯಗಳಿಗೆ ತುಂಬಾ ತೊಂದರೆಯಾಗಿರುತ್ತದೆ,ಆಡಳಿತಾತ್ಮಕ ಹಿತದೃಷ್ಟಿಯಿಂದ ಹಾಲಾಪೂರ ಗ್ರಾಪಂ ಯನ್ನು ವಿಭಜಿಸಿ ಹೊಸ ಗ್ರಾಪಂ ಮಾಡಲು ಅವಶ್ಯಕತೆ ಇದೆ ಅದುಕೊಸ್ಕರ ಮಾಡಬೇಕು ಇಲ್ಲವಾದರೆ ಮುಂಬರುವ ಚುನಾವಣೆಯನ್ನು ಬಹಿಷ್ಕಾರ ಮಾಡಲಾಗುವುದು, ಈ ಬಗ್ಗೆ ತುಗ್ಗಲದಿನ್ನಿ,ಶಂಕರನಗರಕ್ಯಾಂಪ, ಹಿರೆಕಡಬೂರು,ಹಂಚಿನಾಳ, ಎಸ್ ರಾಮಲದಿನ್ನಿ ಯಿಂದ ಗ್ರಾಪಂ ಗೆ ಹನ್ನೆರಡು ಕಿಲೊಮೀಟರ್ ಇದ್ದು ಇದರಿಂದ ಸಕಾಲಕ್ಕೆ ಪಂಚಾಯತಿಗೆ ಬರಲು ಆಗುತ್ತಿಲ್ಲ, ಸರಿಯಾದ ವ್ಯವಸ್ಥೆ ಇಲ್ಲ,ಮಹಿಳೆಯರು, ವೃದ್ಧರು ಪಂಚಾಯತ ಕೆಲಸಕ್ಕೆ ಬರಲು ಆಗದೆ ಕೆಲಸಕಾರ್ಯಗಳಿಂದ ದೂರ ಉಳಿಯುವ ತಾಪತ್ರಯ ಎದ್ದು ಕಾಣುತ್ತದೆ ಎಂದು ಅನೇಕ ಮಹಿಳೆಯರು, ಗ್ರಾಮಸ್ಥರು ಸುದ್ದಿಯೊಂದಿಗೆ ತಮ ನೋವು,ಅಳಲನ್ನು ಹಂಚಿಕೊಂಡಿದೆ . ನಂತರ ಗ್ರಾಪಂ ವಿಭಜಿಸಿ ಹೊಸ ಪಂಚಾಯತ ಮಾಡುವಂತೆ ಒತ್ತಾಯಿಸಿ ಮನವಿ ಪತ್ರವನ್ನು ಗ್ರಾಪಂ ಪಿಡಿಒ ವಿಶ್ವನಾಥ ಹೂಗಾರ,ತಾಪಂ ಇಒ ಅಮರೇಶ ಯಾದವ,ಮಾನ್ಯ ತಹಶಿಲ್ದಾರರಿಗೆ,ಶಾಸಕರ ಆಪ್ತ ಕಾರ್ಯದರ್ಶಿ ಶರಣೆಗೌಡ ಅವರಿಗೆ ಗ್ರಾಪಂ ವ್ಯಾಪ್ತಿಯ ಮುಖಂಡರು,ನಾಗರಿಕರು,ಗ್ರಾಪಂ ಸದಸ್ಯರು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯ ಕರಿಯಪ್ಪ, ಬಿ. ಕರಿಯಪ್ಪ, ಕೃಷಿ ಪ್ರಾಥಮಿಕ ಕೇಂದ್ರ ಹಾಲಾಪುರ ಅಧ್ಯಕ್ಷ ಜಗದೀಶಸ್ವಾಮಿ, ಯರ್ರಿ ತಾತ ಪಾಟೀಲ್, ಬಸ್ಸಪ್ಪ ಜೆ, ಬಸವರಾಜ್ ಆರ್, ಗ್ಯಾರಂಟಿ ಸಮಿತಿ ಸದಸ್ಯ ಪೌಲರಾಜ್, ರವಿ ದೇಸಾಯಿ, ಬಾಲ ಸ್ವಾಮಿ, ಬಸ್ಸಪ್ಪ ನಾಯಕ, ಸಿದ್ದಾರ್ಥ್ ಪೊಲೀಸ್ ಪಾಟೀಲ್ , ಅಮರೇಶ ಮಲ್ಲಟ, ಅಮರೇಶ್ ಕಡಬುರು ಸೇರಿದಂತೆ ಇನ್ನಿತರರು ಇದ್ದರು

