ಮಸ್ಕಿ : ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಮೊನ್ನೆ ತಾನೇ ನೂತನ ಯೋಜನಾ ಪ್ರಾಧಿಕಾರ ಆರಂಭವಾಯಿತು ನಗರಾಭಿವೃದ್ಧಿ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಸುರೇಶ್ ಅವರು ಮಸ್ಕಿ ನಗರ ಯೋಜನ ಪ್ರಾಧಿಕಾರ ನೂತನ ಅಧ್ಯಕ್ಷರನ್ನಾಗಿ ಮಸ್ಕಿ ಕ್ಷೇತ್ರದ ಜನಪ್ರಿಯ ಶಾಸಕರಾದ ಆರ್ ಬಸನಗೌಡ ತುರವಿಹಾಳ ಅವರ ಸಹೋದರರಾದ ಆರ್ ಸಿದ್ದನಗೌಡ ತುರುವಿಹಾಳ ಇವರನ್ನು ನೇಮಕ ಮಾಡಿ ಆದೇಶ ಪತ್ರ ವಿತರಿಸಿದರು ಆರ್ ಸಿದ್ದನಗೌಡ ತುರ್ವಿಹಾಳ ಅವರು ಮಸ್ಕಿ ಯೋಜನಾ ಪ್ರಾಧಿಕಾರದ ಮೊದಲ ಅಧ್ಯಕರು ಕೂಡಾ ಹೌದು

