ಅರಕೇರಾ : ಪಟ್ಟಣದ ಭಕ್ತರ ಆರಾಧ್ಯ ದೈವ ಶ್ರೀ ಸೂಗೂರೇಶ್ವರ ಜಾತ್ರಾ ಮಹೋತ್ಸವ ನ.24 ರಿಂದ ನ.28 ರವರೆಗೆ ಶ್ರೀ ಚಂದ್ರಶೇಖರಯ್ಯ ಸ್ವಾಮಿ ಹಿರೇಮಠ ಸಾನಿಧ್ಯದಲ್ಲಿ ಜರುಗಲಿದೆ.
ನ.24 ರಂದು ಸಾಯಂಕಾಲ ಸಹಸ್ರ ದೀಪೋತ್ಸವ, ನ.25 ಬೆಳಗಿನ ಜಾವ ಊಟಿ ಬಸವೇಶ್ವರದಿಂದ ಮತ್ತು ಗಂಗಾಸ್ಥಳದಿಂದ ಊರ ನಾರಿಯರು ತಂದ ಉದಕದಿಂದ ದೇವರಿಗೆ ಅಭಿಷೇಕ ಮಾಡಲಾಗುವುದು. ಬೆ.11.30 ರಿಂದ ಶಾಲಾ ಮಕ್ಕಳಿಂದ ರಂಗೋಲಿ ಸ್ಪರ್ಧೆ, ಮಧ್ಯಾಹ್ನ ಎಲೆ ಪೂಜೆ, ಗಣಾರಾಧನೆ, ಸಂಜೆ 5 ಗಂಟೆಯಿಂದ ಕಳಸಗಳು ಗಂಗಾ ಸ್ಥಳದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಡವು, ವಚನ, ನಂದಿಕೋಲು ಸೇವೆಯೊಂದಿಗೆ ಮೆರವಣಿಗೆ ನಡೆಸಲಾಗುವುದು. ನಂತರ ಉತ್ಸವ ಜರುಗಲಿದೆ.
ನ.26 ರಂದು ಬೆ.6 ರಿಂದ 8 ಗಂಟೆವರೆಗೆ ಕಳಸದ ಸೇವೆ ಹಾಗೂ ಶಿಖರದ ಮೇಲೆ ಕಳಸಗಳನ್ನು ಕೂಡಿಸಲಾಗುವುದು. ಸಂಜೆ 6.30 ಕ್ಕೆ ಮಹಾರಥೋತ್ಸವ ಜರುಗಲಿದೆ. ನ.27 ರಂದು ಬೆ.8 ಗಂಟೆಯಿಂದ ಶ್ರೀ ಅರಕೇರಾ ಬಸವಣ್ಣ ದೇವರಿಗೆ ಪೂಜೆ ಸಲ್ಲಿಸಿ ಹುಸಿ ಚೆಂಡು ತರುವುದು. ಸಾಯಂಕಾಲ 4.30 ರ ನಂತರ ಕಡುಬಿನ ಕಾಳಗ ಹಾಗೂ ಸಂಗ್ರಹಣೆ ಕಲ್ಲು ಎತ್ತುವ ಸ್ಪರ್ಧೆ ನಡೆಯಲಿದೆ. ನ.28 ರಂದು ಕಳಸದ ಪೂಜೆ ನಡೆಯಲಿದೆ ಎಂದು ದೇವಸ್ಥಾನ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

