ಸಿಂಧನೂರು : ಸಿಂಧನೂರು ತಾಲೂಕಿನ RH No :4 ಮಾ ಶಾರದಾ ದೇವಿ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ನ್ಯೂ ಮಾ ಶಾರದಾ ಶಾಲೆಯು ತಮ್ಮ 17 ನೇ ವಾರ್ಷಿಕೋತ್ಸವವನ್ನು ಉತ್ಸಾಹದಿಂದ ಆಚರಿಸಲಾಯಿತು… ಶಾಲೆಯ ಮಕ್ಕಳಿಗೆ ಮಾ ಶಾರದಾ ದೇವಿ ಹಾಗೂ ರಾಮಕೃಷ್ಣ ಪರಮಹಂಸ ಹಾಗೂ ಸ್ವಾಮಿ ವಿವೇಕಾನಂದರವರ ಉಡುಪುಗಳನ್ನು ತೊಡಿಸಿ ಜಾಥಾ ಮೂಲಕ ಮೆರವಣಿಗೆ ಮಾಡಿಸಲಾಯಿತು ..ನಂತರ ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ. ನೀಲ್ ಕಮಲ್ ಸ್ವರ್ಣಕರ್ ರವರು ಪ್ರತಿ ವರ್ಷ ನಮ್ಮ ಶಾಲೆಯ ವತಿಯಿಂದ ಮಾ ಶಾರದಾದೇವಿಯರವರ ಜಯಂತಿ ಎಂದು ನಮ್ಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಪ್ರತಿವರ್ಷದಂತೆ ಹಮ್ಮಿಕೊಂಡಿದ್ದು ಮಾ ಶಾರದಾದೇವಿ 1853-1920 ಶ್ರೀರಾಮಕೃಷ್ಣರ ಪತ್ನಿ ಮತ್ತು ಆಧ್ಯಾತ್ಮಿಕ ಸಂಗಾತಿ, ರಾಮಕೃಷ್ಣ ಮಠ ಮತ್ತು ಮિಷನ್‌ಗಳ “ಸಂಘಮಾತೆ” ಎಂದು ಕರೆಯಲ್ಪಡುವವರು; ಬಂಗಾಳದ ಜಯರಾಮವಾಟಿ ಗ್ರಾಮದ ಬಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಇವರು, ತಮ್ಮ ಜೀವನವನ್ನು ಸೇವೆ, ತ್ಯಾಗ ಮತ್ತು ಆಧ್ಯಾತ್ಮಿಕತೆಗೆ ಅರ್ಪಿಸಿ, ಎಲ್ಲರ ತಾಯಿಯಂತೆ ಭಕ್ತರಿಗೆ ಮಾರ್ಗದರ್ಶನ ನೀಡಿದರು, ಮಹಿಳೆಯರಿಗಾಗಿ ಆದರ್ಶಪ್ರಾಯರಾಗಿ ನಿಂತರು. ಇವರ ಜನನ 1853ರ ಡಿಸೆಂಬರ್ 22ರಂದು ಬಂಗಾಳದ ಜಯರಾಮವಾಟಿ ಗ್ರಾಮದಲ್ಲಿ ಜನಿಸಿದರು. ಅವರ ಬಾಲ್ಯದ ಹೆಸರು ಶಾರದಾಮಣಿ ಮುಖೋಪಾಧ್ಯಾಯ.
ಶ್ರೀರಾಮಕೃಷ್ಣರೊಂದಿಗೆ ವಿವಾಹ: 5-6 ವರ್ಷದವರಿದ್ದಾಗ ಶ್ರೀರಾಮಕೃಷ್ಣರೊಂದಿಗೆ ವಿವಾಹವಾಯಿತು, ಆದರೆ ಇದು ಸಾಂಸಾರಿಕ ಸಂಬಂಧವಾಗಿರಲಿಲ್ಲ, ಆಧ್ಯಾತ್ಮಿಕ ಬಾಂಧವ್ಯವಾಗಿತ್ತು.
ಆಧ್ಯಾತ್ಮಿಕ ಗುರು: ರಾಮಕೃಷ್ಣರ ಮಹಾಸಮಾಧಿಯ ನಂತರ, ಅವರ ಶಿಷ್ಯರ ಆಧ್ಯಾತ್ಮಿಕ ಮಾರ್ಗದರ್ಶಕಿಯಾಗಿದ್ದರು. ಸನ್ಯಾಸಿ, ಗೃಹಸ್ಥ, ಬಡ, ಶ್ರೀಮಂತ – ಹೀಗೆ ಎಲ್ಲರಿಗೂ ತಾಯಿಯಂತೆ ವಾತ್ಸಲ್ಯ ನೀಡಿದರು.
ಭಗಿನಿ ನಿವೇದಿತಾ: ಭಗಿನಿ ನಿವೇದಿತಾ (ಮಾರ್ಗರೆಟ್ ಎಲಿಜಬೆತ್ ನೊಬಲ್) ಅವರಿಗೆ ಹಿಂದೂ ಧರ್ಮದ ದೀಕ್ಷೆ ನೀಡಿ, ಅವರ ಕಾರ್ಯಗಳಿಗೆ ಪ್ರೋತ್ಸಾಹ ನೀಡಿದರು. ಅವರು ಯಾವುದೇ ಪುಸ್ತಕ ಬರೆಯದಿದ್ದರೂ, ಅವರ ಮಾತುಗಳನ್ನು ಶಿಷ್ಯರು ದಾಖಲಿಸಿದ್ದಾರೆ. “ಶ್ಶಾಂತಿಗಾಗಿ ಇತರರಲ್ಲಿ ತಪ್ಪು ಹುಡುಕಬೇಡಿ, ನಿಮ್ಮ ತಪ್ಪುಗಳನ್ನು ನೋಡಿ” ಎಂಬುದು ಅವರ ಪ್ರಮುಖ ಬೋಧನೆಯಾಗಿದೆ.
ಕರ್ನಾಟಕದೊಂದಿಗೆ ಸಂಬಂಧ 1911ರಲ್ಲಿ ಬೆಂಗಳೂರಿನ ಶ್ರೀರಾಮಕೃಷ್ಣ ಮಠಕ್ಕೆ ಭೇಟಿ ನೀಡಿ ಭಕ್ತರನ್ನು ಆಶೀರ್ವದಿಸಿದರು. ಅಲ್ಲಿ ಅವರು ಧ್ಯಾನ ಮಾಡಿದ ಸ್ಥಳ ಈಗ ಪವಿತ್ರ ತೀರ್ಥಕ್ಷೇತ್ರವಾಗಿದೆ. ಎಂದು ತಿಳಿಸಿದರು ನಂತರ ಶಾಲೆಯಲ್ಲಿ ಸಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಂಡಿದ್ದರು .. ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಶಾಲೆಯ ಆಡಳಿತ ಮಂಡಳಿಯವರು, ಶಾಲೆಯ ಶಿಕ್ಷಕ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು


