ಅರಕೇರಾ : ದೇಶವನ್ನು ಪೋಲಿಯೋ ರೋಗದಿಂದ ಸಂಪೂರ್ಣ ಮುಕ್ತವಾಗಿರಿಸಲು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಲ್ಸ್ ಪೋಲಿಯೋ ಅಭಿಯಾನವನ್ನು ಜಾರಿಗೆ ತಂದಿದೆ ಎಂದು ಗ್ರಾಪಂ ಅಧ್ಯಕ್ಷ ಮಹೇಶ ನಾಯಕ ಹೇಳಿದರು.
ತಾಲೂಕಿನ ಆಲ್ಕೋಡ ಗ್ರಾಪಂ ಆವರಣದಲ್ಲಿ ಜಿಪಂ, ಆರೋಗ್ಯ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಪಲ್ಸ್ ಪೋಲೀಯೋ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಪೋಲಿಯೋ ರೋಗ ದೇಶದಿಂದ ಸಂಪೂರ್ಣವಾಗಿ ನಿರ್ಮೂಲನೆ ಆಗಿದೆ‌. ಆದರೆ ವಿದೇಶಗಳಲ್ಲಿ ಈ ರೋಗ ಇನ್ನು ಸಕ್ರಿಯವಾಗಿರುವುದರಿಂದ ನಮ್ಮ ದೇಶದಲ್ಲಿ ಸೋಂಕು ಮರಳದಂತೆ ಎಚ್ಚರ ವಹಿಸಬೇಕು. ಆದ್ದರಿಂದ 0 ರಿಂದ 5 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೋಲೀಯೊ ಲಸಿಕೆ ಹಾಕಿಸಬೇಕು. ಕೇವಲ ಎರಡು ಹನಿ ಲಸಿಕೆ ಸದೃಢ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ ಎಂದರು.
ಗ್ರಾಪಂ ಸದಸ್ಯ ಅಮರೇಶ ಕುಂಬಾರ, ಎಎನ್ಎಮ್ ಹುಲಿಗೆಮ್ಮ, ಅಂಗನವಾಡಿ ಕಾರ್ಯಕರ್ತೆ ಶಕುಂತಲಾ, ರೇಣುಕಾ ಪ್ರಮುಖರಾದ ಭುವನೇಶ, ಅಮರೇಶ ಅಕ್ಕರಕಿ ಇತರರಿದ್ದರು.

Leave a Reply

Your email address will not be published. Required fields are marked *