ಮಾನ್ವಿ ಸಮೀಪದ ನೀರಮಾನ್ವಿ ಸರಕಾರಿ ಪಿಎಂ ಶ್ರೀ ಶಾಲೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಅಳ್ಳಮ್ಮ ನರಸಿಂಹಮೂರ್ತಿ ರವರು ಮಗುವಿಗೆ ಎರಡು ಪೋಲಿಯೋ ಹನಿ ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು 5 ವರ್ಷದ ಒಳಗಿನ ಎಲ್ಲ ಮಕ್ಕಳಿಗೂ ಮೊದಲು ತಾವು ಪೋಲಿಯೋ ಹನಿ ಹಾಕಿಸಿದರು ಕೂಡ ಈ ಬಾರಿಯೂ ಎರಡು ಹನಿ ಹಾಕಿಸಿ ಪೋಲಿಯೋ ಮುಕ್ತ ರಾಷ್ಟ್ರ ಮಾಡಬೇಕೆಂದು ಕರೆ ನೀಡಿದರು
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ರಾಜೇಶ್ವರಿ ಗಂಗಾಧರ ಮಾತನಾಡಿ ಈ 2 ಹನಿಗಳಿಂದ ನಾವು ಮಕ್ಕಳನ್ನು ಅಂಗವಿಕಲತೆಯಿಂದ ಕಾಪಾಡಬಹುದು ಈ ಒಂದು ಕಾರಣಕ್ಕಾಗಿ ಗ್ರಾಮ ಪಂಚಾಯತಿಯವರು ಗ್ರಾಮದಲ್ಲಿ ಪ್ರಚಾರಕೂಡ ಮಾಡಿದ್ದಾರೆ ಇಂದಿನ ದಿನ ಎಲ್ಲಾ ತಾಯಂದಿರು ತಮ್ಮ ಮಕ್ಕಳಿಗೆ ಎರಡು ಹನಿ ಪೊಲಿಯೋ ಹಾಕಿಸಬೇಕೆಂದರು
ಈ ಕಾರ್ಯಕ್ರಮದಲ್ಲಿ ಅಮೃತ ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಜೆಲ್ಲಿ ನರಸಮ್ಮ ಆಶಾಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಗ್ರಾಮ ಪಂಚಾಯತಿಯ ಸದಸ್ಯರು ಕರ್ನಾಟಕ ರಾಜ್ಯ ಬೇಡರ ಸಮಿತಿ ಬೆಂಗಳೂರು ಗ್ರಾಮ ಘಟಕದ ಅಧ್ಯಕ್ಷರಾದ ಜಲ್ಲಿ ಗೊಟ್ಟಪ್ಪ ಮುಖಂಡರಾದ ಗಂಗಾಧರ ಉಪ್ಪಾರ್ ಇವರೆಲ್ಲರೂ ಈ ಒಂದು ಕಾರ್ಯಕ್ರಮದಲ್ಲಿ ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು

Leave a Reply

Your email address will not be published. Required fields are marked *