ಮಾನ್ವಿ : ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಉದ್ಘಾಟನಾ ನುಡಿಯನ್ನು ನೋಡಿದ ಶಾಸಕ ಹಂಪಯ್ಯ ನಾಯಕ್ ರವರು ಹುಟ್ಟಿದ ಮಗುವಿನಿಂದ ಐದು ವರ್ಷದ ಮಗುವಿನವರೆಗೆ ಕಡ್ಡಾಯವಾಗಿ 2 ಹನಿ ಪೋಲಿಯೋ ಲಸಿಕ ಎನ್ನು ಹಾಕಿದಾಗ ಈಗ ನಮ್ಮ ದೇಶದಲ್ಲಿ ಒಂದು ಪ್ರಕರಣವು ಸಹ ಇಲ್ಲ ನೆರೆಯ ರಾಷ್ಟ್ರಗಳಲ್ಲಿ ಈ ಒಂದು ಪೋಲಿಯೋ ಪ್ರಕರಣಗಳು ಇನ್ನೂ ಜೀವಂತವಾಗಿ ಇರುವುದರಿಂದ ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರವು ಈ ನಿರ್ಧಾರಕ್ಕೆ ಬಂದು ಪುನಃ ಮತ್ತೆ ಈ ಲಸಿಕ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಸಹ ನಮ್ಮ ಮನೆಯ ಅಕ್ಕಪಕ್ಕ ಹಾಗೂ ನಮ್ಮ ಮನೆಯವರಿಗೆ ಇದರ ಬಗ್ಗೆ ವಿಚಾರವನ್ನು ತಿಳಿಸಿ ಕಡ್ಡಾಯವಾಗಿ ಈ ಲ ಸಿಕ್ಕಿಯನ್ನು ಹಾಕಿಸಲು ತಿಳಿ ಹೇಳಬೇಕು ಎಂದು ಹೇಳಿದರು.
ನಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 47,000 ಮಕ್ಕಳ ಒಂದು ಟಾರ್ಗೆಟ್ಟನ್ನು ತಾಲೂಕ್ ವೈದ್ಯಾಧಿಕಾರಿಗಳು ಮಾಡಿಕೊಂಡಿದ್ದಾರೆ ಇದರ ಜೊತೆಗೆ 241 ಬೂತ್ ಗಳನ್ನು ಸಹ ಮಾಡಿದ್ದಾರೆ ಈ ದಿನ ಬೂತ್ ಕೇಂದ್ರಗಳಲ್ಲಿ ಲಸಿಕೆ ಹಾಕಿದರೆ ನಾಳೆಯಿಂದ ಮೂರು ದಿನಗಳ ವರೆಗೆ ಮನೆಮನೆಗೆ ತೆರಳಿ ಕಾರ್ಯಕರ್ತರು ಈ ಲಸಿಕೆಯನ್ನು ಹಾಕಲಿದ್ದಾರೆ ಇವರಿಗೆ ಸಾರ್ವಜನಿಕರು ಸಹಕಾರವನ್ನು ನೀಡಬೇಕು ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಲಸಿಕೆ ಕಾರ್ಯಕ್ರಮವನ್ನು ತಾವೆಲ್ಲರೂ ಯಶಸ್ವಿಗೊಳಿಸಬೇಕು ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಹಾಗೂ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಅಬ್ದುಲ್ ಗಪೂರ್ ಸಾಬ್, ತಾಲೂಕ ಪಂಚ ಗ್ಯಾರಂಟಿಗಳ ಅಧ್ಯಕ್ಷರಾದ ಅಧ್ಯಕ್ಷರಾದ ಬಿಕೆ ಅಂಬರೇಶಪ್ಪ
ವಕೀಲರು, ಸತ್ತಾರ್ ಬಂಗಲೆವಾಲೇ, ಕಾಮೇಶ್ ಮಂದಕಲ್,ತಾಲೂಕ ಆರೋಗ್ಯ ಅಧಿಕಾರಿಗಳಾದ ಶರಣಬಸವ ಗೌಡ ಮುಷ್ಟೂರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳಾದ ಗೋಕುಲ್ ಸಬ್, ಪುರಸಭೆಯ ಮುಖ್ಯ ಅಧಿಕಾರಿಗಳಾದ ಪರಶುರಾಮ್ ದೇವಮಾನೇ, ಆಸ್ಪತ್ರೆಯ ಸಿಬ್ಬಂದಿ ವರ್ಗ ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *