ಮಾನ್ವಿ: ಪಟ್ಟಣದ ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಯ ಬಸ್ ನಿಲ್ದಾಣದ ಆವರಣದಲ್ಲಿ ಸರ್ವಧರ್ಮ ಸೇವಾ ವೆಲ್ಪೇರ್ ಟ್ರಸ್ಟ್ ವತಿಯಿಂದ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ನಡೆದ ಸಮಾಜಸೇವ ಕಾರ್ಯಕ್ರಮಕ್ಕೆ ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಚಾಲನೆ ನೀಡಿ ಮಾತನಾಡಿ ಜಗತ್ತಿನ ಎಲ್ಲಾ ಧರ್ಮಗಳು ಮನುಷ್ಯರನ್ನು ದುಖಃದಿಂದ ಪಾರು ಮಾಡುವುದಕ್ಕಾಗಿಯೇ ವಿವಿಧ ಧರ್ಮಗಳು ಹುಟ್ಟಿದವು ನಾಡಿನ ಅನೇಕ ಮಹಾತ್ಮರು ತಮಗಾಗಿ ಬದುಕದೆ ಜಾತಿ,ಧರ್ಮ,ಬೇದವಿಲ್ಲದೆ ಎಲ್ಲಾ ಧರ್ಮದ ದಿನದಲಿತರ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ಅದರಂತೆ ಸರ್ವಧರ್ಮ ಸೇವಾ ವೆಲ್ಪೇರ್ ಟ್ರಸ್ಟ್ ವತಿಯಿಂದ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಬಡವರಿಗೆ ಅನ್ನದಾನ ಹಾಗೂ ಬೆಡ್ ಶೀಟ್ ಗಳನ್ನು ವಿತರಿಸುವ ಮೂಲಕ ಸಂಸ್ಥೆಯ ಅಧ್ಯಕ್ಷರಾದ ಹನುಮಂತಕೋಟೆಯವರು ನಿರಂತರವಾಗಿ ಜನಸೇವೆಯನ್ನು ಮಾಡುತ್ತ ಬಂದಿದ್ದಾರೆ ಅವರಿಗೆ ಶ್ರೀಮಠದ ವತಿಯಿಂದ ನಿರಂತರವಾಗಿ ಸಹಕಾರವನ್ನು ನೀಡುತ್ತ ಬಂದಿದೇವೆ ಪ್ರತಿಯೊಬ್ಬರು ಕೂಡ ಧರ್ಮದ ಹೆಸರಿನಲ್ಲಿ ಸಮಾಜದ ಸ್ವಸ್ಥö್ಯವನ್ನು ಕದಡುವ ಕೇಲಸವನ್ನು ಮಾಡದೆ ಎಲ್ಲಾ ಜನರು ಕೂಡಿ ಕೊಂಡು ಸಮಾಜ ಮುಖಿಯಾದ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದಲ್ಲಿ ಶಾಂತಿ ಸೌಹಾರ್ಧತೆ ಮೂಡಿಸುವ ಕಾರ್ಯವನ್ನು ಮಾಡಬೇಕು ಎಂದು ತಿಳಿಸಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿನ ವೃದ್ದರಿಗೆ ಹಾಗೂ ಅಂಗವಿಕಲರಿಗೆ , ಆನಾಥರಿಗೆ ಚಳಿ ಹೆಚ್ಚಾಗಿರುವ ಕಾರಣ ಬೆಡ್ ಶೀಟ್ ಗಳನ್ನು , ವಸ್ತçಗಳನ್ನು ವಿತರಿಸಲಾಯಿತು. ಬಡಜನರಿಗೆ ಅನ್ನದಾನ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮುಸ್ಲಿಂ ಧರ್ಮದ ಗುರುಗಳಾದ ಸೈಯದ್ ಶಾಹ ಸಜ್ಜದ್ ಹುಸೇನಿ ಮತ್ವಲೇ, ತುಮಕುರಿನ ಫಾ.ಜಾಯ್ ಕೆ.ಪೀಟರ್ ಮಾರೇಶ ಫಾಸ್ಟರ್, ಸರ್ವಧರ್ಮ ಸೇವಾ ವೆಲ್ಪೇರ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ಹನುಮಂತ ಕೋಟೆ, ಈರೇಶ್ ಹುಲಿಗುಂಚಿ,ಹನುಮಣತ ಜೆ.ಸಿರವಾರ, ಶರಣು ಮುದ್ದನಗುಡ್ಡಿ,ಭಾರತೀಯ ಸೇವಾ ಸಮಿತಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಸಾಹೀರಭಾನು, ಗುಲಾಂ ಹುಸೇನ್, ತಾ. ಟೈಲರ್ ಸಂಘದ ಅಧ್ಯಕ್ಷರಾದ ಮೆಹಬೂಬ್‌ಸೇರಿದಂತೆ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *