ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ನವದೆಹಲಿ, ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ (ರಿ) ಕರ್ನಾಟಕ, ಪರ್ಯಾವರಣ ಟ್ರಸ್ಟ್ (ರಿ) , ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಪಾಟೀಲ್ ಮಹಿಳಾ ಪದವಿ ಕಾಲೇಜಿನಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಪಾದಯಾತ್ರೆ ಪೂರ್ವಭಾವಿ ಸಭೆ ನಡೆಸಲಾಯಿತು. ಸಭೆಯಲ್ಲಿ ಬಾಲಕೃಷ್ಣ ಅವರು ಮಾತನಾಡಿ ನಿರ್ಮಲ ತುಂಗಭದ್ರಾ ಅಭಿಯಾನ ಮೂರನೇ ಹಂತದ ಜಲ ಜಾಗೃತಿ ಜನ ಜಾಗೃತಿ, ತುಂಗಭದ್ರಾ ಉಳಿಸಿ ಜಾಗೃತಿ ಪಾದಯಾತ್ರೆ ಕಿಷ್ಕಿಂದೆಯಿಂದ ಮಂತ್ರಾಲಯದ ವರೆಗೆ ಪಾದಯಾತ್ರೆ ದಿನಾಂಕ 27.12.2025 ರಿಂದ 4. 1.2026 ರವರೆಗೆ ಹಮ್ಮಿಕೊಂಡಿದ್ದು ದಿನಾಂಕ 30.12.2025 ರಂದು ಸಿಂಧನೂರಿನಲ್ಲಿ ಬೃಹತ್ ತುಂಗಭದ್ರಾ ಉಳಿಸಿ ಜಾಗೃತಿ ಪಾದಯಾತ್ರೆ ನಡೆಯಲಿದ್ದು ಬೆಳಗ್ಗೆ 9:00 ರಿಂದ 12 ರವರೆಗೆ ಸಿಂಧನೂರಿನಲ್ಲಿ ಸಾರ್ವಜನಿಕ ಸಭಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಿಂಧನೂರಿನ ಎಲ್ಲಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಗೆ ಈ ಪಾದಯಾತ್ರೆಯಲ್ಲಿ ಭಾಗವಹಿಸಿ ಮತ್ತು ಪ್ರೋತ್ಸಾಹಿಸಲು ಕರೆ ನೀಡಲಾಯಿತು. ಡಾ ಶಿವಕುಮಾರ್ ಅವರು ಮಾತನಾಡಿ ಪಶ್ಚಿಮಘಟ್ಟದ ದಟ್ಟ ಅರಣ್ಯಗಳ ಒಡಲಿನಲ್ಲಿ ಹುಟ್ಟುವ ತುಂಗಭದ್ರೆ ನದಿಯು ತನ್ನ ಉಪನದಿ, ಕಿರುತರೆ, ಹಳ್ಳಗಳ ಮೂಲಕವೂ ಸದಾಕಾಲ ಹರಿದು ಮಲೆನಾಡು ಬಯಲು ಸೀಮೆ ಭಾಗಗಳಿಗೆ ನೀರುಣಿಸುವ ಮೂಲಕ ಜೀವ ನದಿಯಾಗಿದೆ ಇತ್ತೀಚಿನ ವರ್ಷಗಳಲ್ಲಿ ತುಂಗಭದ್ರೆಯ ಒಡಲಿಗೆ ಭಾರಿ ಪ್ರಮಾಣದಲ್ಲಿ ವಿವಿಧ ರೀತಿಯ ತ್ಯಾಜ್ಯಗಳು ಸೇರುತ್ತಿದ್ದು ನದಿಯ ನೀರನ್ನು ನೇರವಾಗಿ ಬಳಕೆ ಮಾಡದಂತಾಗಿದೆ,
ಅಲ್ಲದೆ ಪಶ್ಚಿಮ ಘಟ್ಟಗಳಲ್ಲಿ ಧಾರಣ ಶಕ್ತಿಗೆ ಮೀರಿ ವಿವಿಧ ಯೋಜನೆ ಕಾಮಗಾರಿಗೆ ಬೃಹತ್ ಪ್ರಮಾಣದ ಅರಣ್ಯ ನಶವಾಗುತ್ತಿದ್ದು ಇದರಿಂದ ಬಯಲು ಸೀಮೆಯು ಬರುಡಾಗಬಹುದು ಎಂದು ಎಚ್ಚರಿಸಿದರು ನದಿಯ ಪವಿತ್ರತೆ ಕಾಪಾಡಲು ಹಾಗೂ ಜಲ ಮೂಲಗಳ ಸಂರಕ್ಷಣೆಗಾಗಿ ಅರಣ್ಯನಾಶ ತಡೆಯಲು ಒತ್ತಾಯಿಸುವುದೇ ತುಂಗಭದ್ರ ಜಲ ಜಾಗೃತಿ, ಜನ ಜಾಗೃತಿ, ಪಾದಯಾತ್ರೆಯ ಮುಖ್ಯ ಉದ್ದೇಶ ವಾಗಿದೆ ಎಂದು ಹೇಳಿದರು. ಹಾಗೂ ವಿವಿಧ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ಇಂದ ತುಂಗಭದ್ರ ಉಳಿಸಿ ಜಾಗೃತಿ ಪಾದಯಾತ್ರೆಯಲ್ಲಿ ನಮ್ಮ ಸಮಸ್ತ ಸಹಯೋಗ ಇರುತ್ತದೆ ಎಂದು ಭರವಸೆ ನೀಡಿದರು. ಈ ಪೂರ್ವಭಾವಿ ಸಭೆಯಲ್ಲಿ ಬಾಲಕೃಷ್ಣ ಮೂರನೇ ಹಂತದ ನಿರ್ಮಲ ತುಂಗಭದ್ರ ಅಭಿಯಾನದ ಸಂಚಾಲಕರು ಮತ್ತು ಡಾ. ಶಿವರಾಜ್ ಮಾಲಿ ಪಾಟೀಲ್, ಈರೇಶ್ ಇಲ್ಲೂರ್ ವಕೀಲರು, ಡಾ ಚನ್ನನಗೌಡ ಪಾಟೀಲ್ ಹಾಗೂ ಸಿಂಧನೂರು ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರು ಹಾಗೂ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.


