ಮಾನ್ವಿ: ತಾಲೂಕಿನ ಬೈಲಮರ್ಚೆಡ್ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಗ್ರಾಮದ ರೈತರಾದ ಬಸವರಾಜ, ಚಂದ್ರ.ಅನುಸೂಯಮ್ಮ, ಆಂಜನೇಯ,ಈಶಪ್ಪ,ಮೌನೇಶ ರವರ ಮನೆ ಹತ್ತಿರ ತಮ್ಮ ಜಾನುವಾರುಗಳಿಗಾಗಿ ಬಯಲು ಪ್ರದೇಶದಲ್ಲಿ ಸಂಗ್ರಹಿಸಿದ ಭತ್ತದ ಮೇವಿನ ಎರಡು ಬಣವೆಗಳು ಹಾಗೂ ಜೋಳದ ಸಪ್ಪೆಯ ಬಣವೇ ಒಂದು ಹಾಗೂ ರೈತರು ತಮ್ಮ 20 ಎಕರೆಯಲ್ಲಿ ಬೆಳೆದು ಸಂಗ್ರಹಿಸಿದ ಹತ್ತಿಗೆ ಆಕಸ್ಮಿಕ ಬೆಂಕಿ ಅಪಘಾತದಿಂದಾಗಿ ಸಂಪೂರ್ಣವಾಗಿ ಸುಟ್ಟು ನಾಶವಾಗಿದ್ದು ಅಂದಾಜು ರೈತರಿಗೆ ನಾಲ್ಕು ಲಕ್ಷದವರೆಗೂ ನಷ್ಟವಾಗಿರಬಹುದಾಗಿ ಅಂದಾಜಿಸಲಾಗಿದೆ ಎಂದು ಮಾನ್ವಿ ಆಗ್ನಿಶಾಮಕ ಠಾಣಾಧಿಕಾರಿ ರಂಗಪ್ಪ ಮಾಹಿತಿ ನೀಡಿದರು.
ಆಗ್ನಿಅನಾಹುತವಾಗಿರುವ ಕುರಿತು ಮಾಹಿತಿ ತಿಳಿಯುತ್ತಲೇ ಮಾನ್ವಿ ಆಗ್ನಿಶಾಮಕ ಇಲಾಖೆಯ ಸಹಾಯಕ ಠಾಣಾಧಿಕಾರಿಗಳಾದ ಹಾಜಿಮೀಯ ಹಾಗೂ ಸಿಬ್ಬಂದಿಗಳು ಗ್ರಾಮಕ್ಕೇ ಆಗಮಿಸಿ ಬೆಂಕಿಯನ್ನು ನಂದಿಸುವ ಮೂಲಕ ಗ್ರಾಮದಲ್ಲಿ ಇನ್ನೂ ಹೆಚ್ಚಿನ ಇತರ ಜನವಸತಿ ಪ್ರದೇಶಗಳಿಗೆ ವ್ಯಾಪಿಸದಂತೆ ತಡೆಯುವ ಮೂಲಕ ಹೆಚ್ಚಿನ ಹಾನಿಯುಂಟಾಗುವುದನ್ನು ತಪ್ಪಿಸಿದರು.
ಗ್ರಾಮಸ್ಥಾರು ಬಣವೆ ಹತ್ತಿರ ಕಟ್ಟಿ ಹಾಕಲಾದ ಎಮೆಗಳನ್ನು ರಕ್ಷಿಸುವುದಕ್ಕೆ ಸಹಕಾರ ನೀಡಿದರು.


