ಸಿರವಾರ :ಇತ್ತೀಚಗೆ ಪಂಚಾಯತನ ಅಧಿಕಾರಿಗಳು ಹಾಗೂ ತಾಲೂಕು ಆಡಳಿತ ವತಿಯಿಂದ ನೂರಾರು ಜನ ಪೊಲೀಸರ ಸರ್ಪಗಾವಲಿನಲ್ಲಿ ಪಟ್ಟಣದಲ್ಲಿನ ಅತಿಕ್ರಮಿತ ಫುಟ್ ಪಾತ್ ತೆರವು ಕಾರ್ಯಾಚರಣೆಗೆ ಪ್ರಾರಂಭಿಸಿ ಮುಗಿಸಿದ್ದು
ಮಾನ್ವಿ ವೃತ್ತದಿಂದ ಬಸವ ವೃತ್ತ ದವರೆಗಿನ ವ್ಯಾಪಾರಿಗಳು ತಮ್ಮ ಅಂಗಡಿ ಮುಂಗಟ್ಟುಗಳನ್ನು ಫುಟ್ ಪಾತ್ ತನಕ ಅತಿಕ್ರಮಿಸಿದ್ದಾರೆ ಎಂದು ಹಲವು ಪ್ರಗತಿಪರ ಸಂಘಟನೆಗಳು ತೆರವುಗೊಳಿಸಲು ಮನವಿ ಮಾಡಿದ್ದರು.ಇದರನ್ವಯ ಕಳೆದ ಫೆಬ್ರವರಿ ತಿಂಗಳಿನಿಂದ ತೆರವುಗೊಳಿಸಲೇ ಬೇಕು ಎಂಬ ಪಟ್ಟಣ ಪಂಚಾಯತತಯು ಆದೇಶವನ್ನುವ ನೀಡುತ್ತಾ ಬಂದಿದ್ದರು ಜನರು ಕ್ಯಾರೆಯನ್ನದೆ ಕುಳಿತಿದ್ದರು ಆದ್ದರಿಂದ ಇತ್ತೀಚಗೆ ತಾಲೂಕ ಆಡಳಿತ ತೆರವು ಕಾರ್ಯ ಪ್ರಾರಂಭಿಸಿ,ಬೆಳಿಗ್ಗೆ ಯಿಂದಲೇ ಕಾರ್ಯಾಚರಣೆಗಿಳಿದ ಜೆ.ಸಿ.ಬಿ. ಗಳು ಫುಟ್ ಪಾತ್ ಗೆ ಹೊಂದಿಕೊಂಡ ಟಿನ್ ಶೆಡ್ ಗಳು , ಕಬ್ಬಿಣದ ಕಂಬಗಳು, ಗೋಡೆಗಳನ್ನು
ತೆರವುಗೊಳಿಸಿದ್ದಾರೆ.ಸಾರ್ವಜನಿಕ ರಿಂದ ವಾದ-ವಿವಾದಗಳು ಬಂದರು ಸರಿಪಡಿಸುತ್ತ ತೆರವು ಕಾರ್ಯಾಚರಣೆ ಮಾಡಿದರು.
ಇದರಿಂದ ಸಣ್ಣ ಸಣ್ಣ ಫುಟ್ ಪಾತ್ ವ್ಯಾಪಾರಿಗಳಿಗೆ ತೊಂದರೆ ಯಾಗಿದೆ. ಆದರೆ ಬಸ್ಟ್ಯಾಂಡ್ ಸುತ್ತ ಮುತ್ತ ಮುಂದೆ,ವಾಹನಗಳು ನಿಲ್ಲಲು ಅನುಕೂಲವಾಗಿದೆ,ಹಾಗೂ ಮರೆಯಾಗಿದ್ದ ಇಂದಿರಾ ಕ್ಯಾಂಟಿನ್ ಈಗ ಸಾರ್ವಜನಿಕರಿಗೆ ಕಾಣುವಂತಾಗಿದೆ.ಆದರು ಯಾವುದೆ ಪ್ರಯೋಜನೆವಾಗಿಲ್ಲ ಯಾಕಂದ್ರೆ ಅಲ್ಲಿ ಆಡಳಿತವರ್ಗ ರುಚಿಕರವಾದ ಅಡಿಗೆ ಮಾಡುತ್ತಿಲ್ಲ,ಎನ್ನುತ್ತಿದ್ದಾರೆ ಜನರು.ಇನ್ನು ಮುಂದೆಯಾದರು ಇಂದಿರಾ ಕ್ಯಾಂಟಿನಗೆ ಸಂಭಂದ ಪಟ್ಟ ಅಧಿಕಾರಿಗಳು ಜಾಗ್ರತರಾಗಿ ರುಚಿಕರವಾದ ಆಹಾರ ನೀಡುವರೋ ಎಂದು ಕಾದು ನೋಡಬೇಕಾಗಿದೆ.
