ಲಿಂಗಸಗೂರು , ಡಿ 20 . ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನ ದಲ್ಲಿ
ಡಿ.23 ರ ಮಂಗಳವಾರ ದಂದು ಮಂಡಲ ಪೂಜೆ ಹಾಗೂ 9ನೇ ವರ್ಷದ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದೆಂದು ಅಯ್ಯಪ್ಪಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಮನೋಹರ್ ರೆಡ್ಡಿ ಮುನ್ನೂರು ತಿಳಿಸಿದರು.
ಈ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 11.00ರಿಂದ 12.30ರವರೆಗೆ ಮಹಾ ಗಣಪತಿ ಹೋಮ ಹಾಗೂ ದೇವಸ್ಥಾನದ ಅಯ್ಯಪ್ಪಸ್ವಾಮಿ ಮತ್ತು ಉಪದೇವತೆಗಳಿಗೆ ಕಳಸಾಭಿಷೇಕಂ ನಡೆಯಲಿದೆ. ಈ ಧಾರ್ಮಿಕ ವಿಧಿವಿಧಾನಗಳನ್ನು ಕೇರಳದ ಖ್ಯಾತ ಪಂಡಿತರಾದ ಶ್ರೀ ಶ್ರೀ ತಂತ್ರಿ ರತ್ನ, ವೇದ ವಿಭೂಷಣ ಪ್ರಶಾಂತ ನಂಬೋದರಿ ಅವರು ನೆರವೇರಿಸಲಿದ್ದಾರೆ. ಅವರು 1996ರಲ್ಲಿ ಶಬರಿಮಲೈ ಮೇಲ್ ಶಾಂದಿಯಾಗಿ ಸೇವೆ ಸಲ್ಲಿಸಿದವರಾಗಿದ್ದಾರೆ
ಮಧ್ಯಾಹ್ನ 1.00 ಗಂಟೆಗೆ ಈಶ್ವರ ದೇವಸ್ಥಾನದಿಂದ ಅಯ್ಯಪ್ಪಸ್ವಾಮಿ ದೇವಸ್ಥಾನವರೆಗೆ ಭವ್ಯ ಮೆರವಣಿಗೆ ನಡೆಯಲಿದ್ದು, ನಂತರ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಸಂಜೆ 6.00 ಗಂಟೆಗೆ ದೀಪೋತ್ಸವದ ನಂತರ ಭಗವತಿ ಸೇವೆ ನಡೆಯಲಿದೆ. ಸಂಜೆ 7.00 ಗಂಟೆಯಿಂದ ಅಯ್ಯಪ್ಪಸ್ವಾಮಿ ಪಡಿಪೂಜೆ, ಹತ್ತಾಯ ಪೂಜೆ, ಪುಷ್ಪಾಭಿಷೇಕ ಹಾಗೂ ಪಾನಕ ನೈವೇದ್ಯ ಕಾರ್ಯಕ್ರಮಗಳು ಜರುಗಲಿವೆ. ರಾತ್ರಿ 9.00 ಗಂಟೆಗೆ ಹರಿವರಾಸನಂ ನಡೆಯಲಿದೆ.
ಸರ್ವ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಯ್ಯಪ್ಪಸ್ವಾಮಿ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು. ಇರುಮುಡಿ ಕಾರ್ಯಕ್ರಮವು ಜನವರಿ 8, 2026 ಗುರುವಾರ ನಡೆಯಲಿದೆ ಎಂದರು .
ಈ ಸಂದರ್ಭದಲ್ಲಿ ಈರಣ್ಣ ಶೆಟ್ಟಿ, ಸಿದ್ದರಾಮಪ್ಪ ಹಾಗೂ ರಾಜೇಶ್ ಮಾಣಿಕ್ ಉಪಸ್ಥಿತರಿದ್ದರು.
