ಮಾನ್ವಿ: ಪಟ್ಟಣದ ರೈಸಿಂಗ್ ಸನ್ ಪಬ್ಲಿಕ್ ಸ್ಕೂಲ್ ಹಾಗೂ ರೈಸಿಂಗ್ ಸನ್ ಕಿಂಡರ್ ಗಾರ್ಟನ್ ಆವರಣದಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ನಡೆದ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಪುರಸಭೆ ಹಿರಿಯ ಸದಸ್ಯರಾದ ಲಕ್ಷ್ಮೀ ದೇವಿ ನಾಯಕ ರವರು ಉದ್ಘಾಟಿಸಿ ಮಾತನಾಡಿ ಮಕ್ಕಳಲ್ಲಿನ ಪ್ರತಿಭೆ ಹಾಗೂ ಕೌಶಲ್ಯವನ್ನು ಗುರುತಿಸಿದಾಗ ಮಾತ್ರ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆಯನ್ನು ತೋರುವುದಕ್ಕೆ ಸಾಧ್ಯವಾಗುತ್ತದೆ ವಸ್ತು ಪ್ರದರ್ಶನ ಕಾರ್ಯಕ್ರಮಗಳಿಂದ ಶಾಲೆಯ ಮಕ್ಕಳ ಹಾಗೂ ಶಿಕ್ಷಕರ ನಡುವೆ ಉತ್ತಮ ಭಾಂದವ್ಯ ಬೆಳೆಯುತ್ತದೆ ,ಮತ್ತು ಪಾಲಕರಿಗೆ ಕೂಡ ತಮ್ಮ ಮಕ್ಕಳಲ್ಲಿನ ಕೌಶಲ್ಯವನ್ನು ತಿಳಿಯುವುದಕ್ಕೆ ಉತ್ತಮವಾದ ವೇದಿಕೆಯಾಗುತ್ತದೆ ಎಂದು ತಿಳಿಸಿದರು.
ಶಾಲೆಯ ವಿದ್ಯಾರ್ಥಿಗಳು ವಿಜ್ಞಾನ,ಕೃಷಿ, ಆರೋಗ್ಯ, ಮಾನವ ಅಂಗಗಳು, ಜನಜೀವನ, ಪರಿಸರ,ಗ್ರಾಮೀಣ ಭಾಗದ ಹಳ್ಳಿ ಸೋಗಡಿನ ವಾತಾವರಣವನ್ನು ನೆನಪಿಸುವ ವಿವಿಧ ಮಾದರಿಗಳನ್ನು ಪ್ರದರ್ಶಿಸಿ ಪಾಲಕರಿಗೆ ಅಗತ್ಯ ಮಾಹಿತಿಯನ್ನು ನೀಡುವ ಮೂಲಕ ಗಮನವನ್ನು ಸೇಳೆದರು.
ಶಾಲೆಯ ವ್ಯವಸ್ಥಪಕರಾದ ಹೆನ್ನ ಆಜಮೀರ್, ಪುರಸಭೆ ಸದಸ್ಯರಾದ ಶೇಖ ಫರೀದ್ ಉಮ್ರಿ, ಮುಖಂಡರಾದ ಎಂ.ಎ.ಮುಖೀಮ್, ಶಾಲೆಯ ಶಿಕ್ಷಕರಾದ ಸುಮಲಾತಾ,ಅಕ್ಷರ, ಅಲೋಟೋ,ಶಬಾನಾ,ಝ್ವಿಮಿಂಗ್,ಸ್ಟುತೋಯ್ಸ್,ಸುಕಾನ್ಯ,ಸನಾ,ಆಯೋಶ, ಪಾಲಕರಾದ ಶಬೀನಾ, ನವಿಕಾ, ಶಕೇರ ಸೇರಿದಂತೆ ಇನ್ನಿತರರು ಇದ್ದರು.
ಮಾನ್ವಿ: ಪಟ್ಟಣದ ರೈಸಿಂಗ್ ಸನ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ನಡೆದ ವಸ್ತು ಪ್ರದರ್ಶನವನ್ನು ಪುರಸಭೆ ಹಿರಿಯ ಸದಸ್ಯರಾದ ಲಕ್ಷ್ಮೀ ದೇವಿ ನಾಯಕ ರವರು ವಿಕ್ಷೀಸಿದರು.

