ಸಿಂಧನೂರು: ನಗರದ ಜ್ಞಾನ ಜ್ಯೋತಿ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಕಾಲೇಜಿಗೊಂದು ಜಾನಪದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಸಿ ಜನರ ಅನುಭವವೇ ಜಾನಪದ ಸಾಹಿತ್ಯ ಎಂದರು.ಒಬ್ಬರ ಬಾಯಿಂದ ಮತ್ತೊಬ್ಬರ ಬಾಯಿಗೆ ಮೌಖಿಕವಾಗಿ ಹರಿದುಬಂದ ಜನಸಾಹಿತ್ಯವೆ ಜನಪದ.ಇದೊಂದು ಗಟ್ಟಿ ಸಾಹಿತ್ಯ ಎಂದು ಅಭಿಪ್ರಾಯ ಪಟ್ಟರು. ಜನಪದ ಗೀತೆಗಳಲ್ಲಿ ಲೋಕನೀತಿ ವಿಷಯ ಕುರಿತು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಿಂಧನೂರು ಸ್ನಾತಕೋತ್ತರ ಕೇಂದ್ರದ ಕನ್ನಡ ಅಧ್ಯಾಪಕರಾದ ಡಾ. ಗುರುರಾಜ ಅವರು
ನೆಲಮೂಲ ಸಂಸ್ಕೃತಿಯೇ ಜನಪದ ಸಾಹಿತ್ಯದ ಮೂಲಗುಣ ಮತ್ತು ವೖಶಿಷ್ಟ್ಯ ಎಂದರು.ಇದು ಪ್ರಕೃತಿ ಮಡಿಲಿನ ಸಾಹಿತ್ಯ. ಯಾಂತ್ರಿಕ ಬದುಕಿನಲ್ಲಿ ಇದರ ಅಧ್ಯಯನ ಅಗತ್ಯವಾಗಿದೆ. ಜೀವನ ಮೌಲ್ಯಗಳನ್ನು ಕಲಿಸುವ ಗುಣ ಹೊಂದಿದೆ.ಆಧುನಿಕತೆಯ ಹೆಸರಿನಲ್ಲಿ ಆಹಾರವೂ ಕಲುಷಿತವಾಗುತ್ತಿದೆ. ಜನರ ಬದುಕೇ ಒಂದು ವಿಶ್ವವಿದ್ಯಾನಿಲಯ. ಜನಪದ ಗೀತೆಗಳು ಬದುಕುವುದನ್ನು ಕಲಿಸುತ್ತದೆ. ಸಾಕಷ್ಟು ಜನಪರ ನಿಲುವುಗಳಿವೆ. ಆಧುನಿಕತೆಯ ಪ್ರಭಾವಕ್ಕೆ ಒಳಗಾಗಿ ಅವಲಂಬಿತ ಕೃಷಿ ಬದುಕು ಕುಸಿತವಾಗುತ್ತಿದೆ. ಎಳ್ಳು ಜೀರಿಗೆ ಬೆಳೆಯೋಳೆ ಭೂತಾಯಿ ಎಂದು ಹೇಳುತ್ತ ವರ್ತಮೌನದ ಬದುಕನ್ನು ವಿಶ್ಲೇಷಿಸಿದರು.ತಾತ್ವಿಕತೆಯನ್ನು ಕಟ್ಟಿಕೊಟ್ಟವರು. ಜನಪದರು ಪ್ರಕೃತಿಯ ಮಕ್ಕಳು. ಹತ್ತಿಕಟಿಗಿ ಬಿತ್ತಿಕಟಿಗಿ ಬಾವನೂರು. ಹಾಡನ್ನು ಮೆಲುಕು ಹಾಕಿದರು. ಜೀವನಮೌಲ್ಯವೇ ಹಾಡಾಗಿ ರೂಪುಗೊಂಡಿವೆ. ಒಳ್ಳೆಯವರ ಗೆಳೆತನ ಕಲ್ಲು ಸಕ್ಕರೆಯಂತೆ ಎಂದರು. ಆನೆ ಬಂತೊಂದು ಆನೆ, ಇಲ್ಲಿಗ್ಯಾಕ ಬಂತು ಎಂದು ಹೇಳುವ ಮೂಲಕ ಇತಿಹಾಸ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜ್ಞಾನ ಜ್ಯೋತಿ ಕಾಲೇಜಿನ ಪ್ರಾಂಶುಪಾಲರಾದ ಎನ್. ಪಿ. ವಿಷ್ಣುವರ್ಧನ ರೆಡ್ಮಿ ಅವರು ಒಗಟು ಹೇಳಿಕೊಳ್ಳುವ, ಹಾಡುವ ಮೂಲಕವೇ ನಮ್ಮ ತಲೆಮಾರು ಬೆಳೆದಿದೆ. ಆದರೆ ಇಂದಿನ ವಿದ್ಯಾರ್ಥಿಗಳು ಮೊಬೖಲುಗಳ ಗೀಳಾಗಿರುವುದನ್ನು ವಿಷಾದಿಸಿದರು. ಸಮಾಜಕ್ಕೆ ಮಾರ್ಗದರ್ಶನ ನೀಡುವುದೆ ಜನಪದ ಸಾಹಿತ್ಯ ಎಂದರು.ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಡಾ. ಬಸವರಾಜ. ಪಿ. ನಾಯಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಜನಪದ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ದುರ್ಗಮ್ಮ ಪ್ರಥಮ, ಅಪೂರ್ವ ದ್ವಿತೀಯ, ತೃತೀಯ ಸ್ಥಾನ ಫಕೀರಮ್ಮ, ಮತ್ತು ವರ್ಷಿಣಿ ಅವರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.ಜ್ಞಾನ ಜ್ಯೋತಿ ಪದವಿ ಪೂರ್ವಕಾಲೇಜಿನ ಉಪನ್ಯಾಸಕರಾದ ಬಸವರಾಜ, ಜ್ಞಾನೇಶ್ವರ, ಲಿಂಗಸಗೂರು ಸರಕಾರಿ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಸಂಗನಗೌಡ, ಹಾಗೂ ಸರಕಾರಿ ಪದವಿ ಕಾಲೇಜಿನ ಉಪನ್ಯಾಸಕರಾದ ಡಾ. ಮರಿಲಿಂಗಪ್ಪ ಉಪಸ್ಥಿತರಿದ್ದರು.ಜ್ಞಾನ ಜ್ಯೋತಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ನೂರ್ ಮಹ್ಮದ್, ಗಿರೀಶ, ವೆಂಕಟೇಶ್ ಮತ್ತು ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜನಪದ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ದುರ್ಗಮ್ಮ ಪ್ರಾರ್ಥಿಸಿದರು. ಡಾ. ಧರ್ಮಣ್ಣ ಗೋನಾಳ ನಿರೂಪಿಸಿದರು. ಮಲ್ಲಯ್ಯ ಹಿರೇಮಠ ಸ್ವಾಗತಿಸಿದರು. ಶೋಭಾ ತೋರಗಲ್ ವಂದಿಸಿದರು.

