ರಾಯಚೂರು ಡಿಸೆಂಬರ್ 18 (ಕರ್ನಾಟಕ ವಾರ್ತೆ): ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯು ಅರ್ಥಪೂರ್ಣವಾಗಿ ನಡೆಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಡಿಸೆಂಬರ್ 17ರ ಬುಧವಾರ ದಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ 2026ರ ಜನವರಿ 3ರ ಬೆಳಗ್ಗೆ 11:30ಕ್ಕೆ ದಿನಾಚರಣೆ ನಿಗದಿಯಾಗಿದೆ. ಅಂದು 9 ಗಂಟೆಗೆ ನಗರದ ಬೇರೂನ್ ಕಿಲ್ಲಾದ ಶ್ರೀ ಕಾಳಿಕಾದೇವಿ ದೇವಸ್ಥಾನದಿಂದ ರಂಗಮಂದಿರದವರೆಗೂ ಮೆರವಣಿಗೆ ನಡೆಯಲಿದೆ.
ಶಿಷ್ಟಾಚಾರದಂತೆ ಕಾರ್ಯಕ್ರಮ ನಡೆಯಬೇಕು. ಕಾರ್ಯಕ್ರಮದ ಸ್ಥಳದಲ್ಲಿ ಸ್ವಚ್ಛತೆ, ತಳಿರು ತೋರಣ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಅವರು ಸೂಚನೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉತ್ತರಾದೇವಿ, ಈರಣ್ಣ ಬಡಿಗೇರ, ಸಮಾಜದ ಮುಖಂಡರಾದ ಬ್ರಹ್ಮ ಗಣೇಶ್ ವಕೀಲರು, ಕೆ.ರಾಮು ಗಾಣಧಾಳ, ಗಿರೀಶ್ ಆಚಾರಿ, ಡಾ.ವೆಂಕಟೇಶ್ ಅನ್ವರಿ, ಹಿರಿಯ ಪತ್ರಕರ್ತರಾದ ಮಾರುತಿ ಬಡಿಗೇರ, ಬ್ರಹ್ಮಯ್ಯ, ನಾಗರಾಜ ಪತ್ತಾರ, ಕೆ.ನರಸಪ್ಪ, ರಾಮುಲು, ಸುರೇಶ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಸಭೆಯಲ್ಲಿ ಇದ್ದರು.

Leave a Reply

Your email address will not be published. Required fields are marked *