ಕು.ಲವೇಶ ಸಿಂಘ್ವಿ ಜೈನ ತಮ್ಮ 19ನೇ ವಯಸ್ಸಿನಲ್ಲಿ ಸಂಸಾರದ ಆಸಕ್ತಿಯನ್ನು ತೊರೆದು, ಶ್ರೀಮಹಾವೀರ ಸ್ವಾಮಿಯವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇದೇ ತಿಂಗಳು ಡಿಸೆಂಬರ್ 25 ರಂದು ಬೆಂಗಳೂರು ಮಾಗಡಿ ರಸ್ತೆಯಲ್ಲಿರುವ ಹೀಟಾ ಗಾರ್ಡನ್ ನಲ್ಲಿ ದೀಕ್ಷೆ ತೆಗೆದುಕೊಳ್ಳಲಿದ್ದಾರೆ. ಅದಕ್ಕೂ ಮುನ್ನ ಡಿ.21 ಭಾನುವಾರದಂದು ನಗರದ ಹಳೇ ಬಜಾರ್ ನಿಂದ ಹಿಡಿದು ಪ್ರಮುಖ ರಸ್ತೆಗಳ ಮೂಲಕ ಸಾರೋಟ್ ನಲ್ಲಿ ದೀಕ್ಷೆ ಪಡೆಯುವ ಕು.ಲವೇಶ ಸಿಂಘ್ವಿ ಜೈನ ಅವರನ್ನು ಸಮಾಜದ ಬಂಧು-ಬಾಂಧವರು ಒಗ್ಗೂಡಿ ಜೈನ್ ಕಲ್ಯಾಣ ಮಂಟಪದವರೆಗೂ ಭವ್ಯ ಮೆರವಣಿ ಮಾಡಲಾಗುವುದು. ತದನಂತರ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ ಎಂದು ಜೈನ ಸಮಾಜದ ಮುಖಂಡರಾದ ರಾಜೇಂದ್ರಕುಮಾರ ಜೈನ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜೈನ ಧರ್ಮದ ಸಂಜಯ ಸಿಂಘ್ವಿ ಹಾಗೂ ರಚನಾ ಸಿಂಘ್ವಿ ಇವರ ದಂಪತಿಗಳಿಗೆ ಕು.ಲವೇಶ, ಕು.ಜಿತೇಶ, ಕು.ಲೋಕೇಶ, ಎಂಬ 3 ಜನ ಮಕ್ಕಳಿದ್ದು, ಹಿರಿಯ ಮಗ ಕು.ಲವೇಶ ಬಿಕಾಂ ಪದವಿ ಓದುತ್ತಿರುವಾಗಲೇ ಧರ್ಮದ ಬಗ್ಗೆ ಹಲವಾರು ಪ್ರವಚನಗಳನ್ನು ಕೇಳಿ ತಿಳಿದುಕೊಂಡು ಮನ ಪರಿವರ್ತನೆಯಾಗಿ ಪೂಜ್ಯರಾದ ಗುರುದೇವ ಶ್ರೀನರೇಶ ಮುನಿಜೀಯವರ ಶಿಷ್ಯರಾಗಿ ದೀಕ್ಷಾಗ್ರಹಣ ಪಡೆಯಲಿದ್ದಾರೆ.

ಹಿಂದೂ, ಜೈನ, ಬೌದ್ದ ಧರ್ಮಗಳಲ್ಲಿ ಗುರುವಿನಿಂದ ಶಿಷ್ಯನಿಗೆ ಧಾರ್ಮಿಕ ಜ್ಞಾನ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನ ನೀಡುವ ಒಂದು ಪವಿತ್ರ ಆಚರಣೆ, ಇದರಲ್ಲಿ ಮಂತ್ರಗಳನ್ನು ನೀಡುವುದು, ಹೊಸ ಪದ್ದತಿ, ಹೊಸ ಬದ್ದತೆ, ತೆಗೆದುಕೊಳ್ಳುವುದು ಮತ್ತು ಆಧ್ಯಾತ್ಮಿಕ ಬೆಳವಣಿಗಾಗಿ ಪವಿತ್ರೀಕರಣಗೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ. ಇದು ಲೌಕಿಕ, ಅಲೌಕಿಕ, ಜೀವನದಿಂದ ಸಂಪೂರ್ಣವಾಗಿ ಹೊರಬಂದು ಆಧ್ಯಾತ್ಮಿಕತೆಯ ಹಾದಿಯಲ್ಲಿ ಸಾಗಲು ಇದು ಒಂದು ಅವಕಾಶ ಮತ್ತು ಆರಂಭದ ಸಂಕೇತವಾಗಿದೆ.

ಧರ್ಮ ಗುರುಗಳ ಸಮಕ್ಷಮದಲ್ಲಿ ದೀಕ್ಷೆ ಪಡೆಯಲು ಯುವಕ ಉತ್ಸುಕನಾಗಿದ್ದಾನೆ. ಸುಮಾರು 1995 ರಿಂದಲೂ ಸಹ ಸಿಂಧನೂರಿನಲ್ಲಿ ಈ ದೀಕ್ಷೆ ಪಡೆಯುವ ಪ್ರಕ್ರಿಯೆ ಪ್ರಾರಂಭವಾಗಿದೆ. ಇಲ್ಲಿಯವರೆಗೂ 11 ಜನ ಸ್ತ್ರೀಯರು, 3 ಜನ ಪುರುಷರು, ಸೇರಿ ಒಟ್ಟು 14 ನೇ ವ್ಯಕ್ತಿ ದೀಕ್ಷೆ ಪಡೆಯುವರಾಗಿದ್ದಾರೆಂದು ಮಾಹಿತಿ ನೀಡಿದರು.

ದೀಕ್ಷೆ ಪಡೆಯಲು ಮುಂದಾದ ಯುವಕ ಕು.ಲವೇಶ ಮಾತನಾಡಿ, ಸಂಸಾರದಲ್ಲಿ ಸು:ಖ ದುಃಖ ಹಾಗೂ ಜಂಜಾಟಗಳಿವೆ, ಆದರೆ ಆಧ್ಯಾತ್ಮಿಕ ಮತ್ತು ದೀಕ್ಷೆ ಪಡೆದಲ್ಲಿ ಕೇವಲ ಮೋಕ್ಷಕ್ಕೆ ಮಾತ್ರ ದಾರಿ ಎಂದು ತಿಳಿದುಕೊಂಡು ಇಂತಹ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದರು.

ಈ ವೇಳೆ: ಸಮಾಜದ ಮುಖಂಡರಾದ ಸುಭಾಷ್ ಸಕಲೇಚ, ಸಿ.ಎ.ಮಹಾವೀರ, ಜೆಡಿಎಸ್‌ ಯುವ ಮುಖಂಡ ಮಹಾವೀರ ಜೈನ, ಜಿತೇಶ ಜೈನ, ಇದ್ದರು.

Leave a Reply

Your email address will not be published. Required fields are marked *