ಮಾನ್ವಿ: ಪಟ್ಟಣದ ಧ್ಯಾನ ಮಂದಿರದಲ್ಲಿ ಡಿ. 27 ರಿಂದ ಜ. 4 ರವರೆಗೆ ಗಂಗಾವತಿ ಯಿಂದ ಮಂತ್ರಾಲಯದ ವರೆಗೆ ನಡೆಯಲಿರುವ ಮೂರನೇ ಹಂತದ ನಿರ್ಮಲಾ ತುಂಗಭದ್ರಾ ಪಾದಯಾತ್ರೆಯು ಜ.1 ರಂದು ಮಾನ್ವಿ ತಾಲೂಕಿಗೆ ಆಗಮಿಸಲಿರುವುದರ ಹಿನ್ನೆಲೆಯಲ್ಲಿ ಡಿ.18 ರಂದು ಮಾನ್ವಿ ಮತ್ತು ಸಿರವಾರ ತಾಲೂಕಿನ ವಿವಿಧ ಮಠಗಳ ಶ್ರೀಗಳು, ಶಾಸಕರು, ಸಚಿವರು, ಸಾರ್ವಜನಿಕರ ಹಾಗೂ ವಿವಿಧ ಜನಪ್ರತಿನಿಧಿಗಳ,ಗಣ್ಯರ, ರೈತರ, ಪೂರ್ವಭಾವಿ ಸಭೆಯನ್ನು ಅಯೋಜಿಸಲಾಗಿದ್ದು ಸಭೆಯಲ್ಲಿ ವಿವಿಧ ಸಮಿತಿಗಳನ್ನು ಕೂಡ ರಚಿಸಬೇಕಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಈ ಕುರಿತು ಸಲಹೆ,ಸೂಚನೆಗಳನ್ನು ನೀಡುವಂತೆ ನಿರ್ಮಲ ತುಂಗಭದ್ರಾ ಅಭಿಯಾನ ರಾಯಚೂರು ಜಿಲ್ಲಾ ಸಂಚಾಲಕರಾದ ಎನ್. ಉದಯ ಸಾಹುಕಾರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a Reply

Your email address will not be published. Required fields are marked *