ಸಿಂಧನೂರು : ಸ್ವದೇಶಿ ವಸ್ತುಗಳ ಬಳಕೆಯಿಂದ ಕೇವಲ ಆರ್ಥಿಕ ವಿಷಯವಲ್ಲ,ಇದು ದೇಶಭಕ್ತಿಯ ಸಂಕೇತ,ದೇಶದ ಉತ್ಪನ್ನಗಳನ್ನು ಬೆಂಬಲಿಸುವುದರಿಂದ ನಮ್ಮ ಆರ್ಥಿಕತೆ,ಉದ್ಯೋಗ ಮತ್ತು ಸ್ವಾವಲಂಬನೆ ಬಲಗೊಳ್ಳುತ್ತದೆ ಎಂದು ಕೆ.ಕರಿಯಪ್ಪ ಹೇಳಿದರು.
ತಾಲೂಕಿನ ಜಾಲಿಹಾಳ ಗ್ರಾಮದ ಎಸ್ ಎಂ ಪಬ್ಲಿಕ್ ಶಾಲೆಯಲ್ಲಿ ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನ ಕಾರ್ಯಗಾರವು ಸಿಂಧನೂರು ತಾಲೂಕಿನ ಗ್ರಾಮೀಣ ಮಹಿಳಾ ಮಂಡಲದ ನೇತೃತ್ವದಲ್ಲಿ ಸ್ವದೇಶಿ ಉತ್ಪನ್ನಗಳನ್ನು ಬಳಸಲು ನರೇಂದ್ರ ಮೋದಿ ಅವರು ನೀಡಿದ ಕರೆ ಹಿನ್ನೆಲೆಯಲ್ಲಿ ಕೆ.ಕರಿಯಪ್ಪ ನವರು ಭಾಗವಹಿಸಿ ಭಾರತಾಂಬೆ,ಪಂಡಿತ್ ದೀನದಯಾಳ್ ಉಪಾಧ್ಯಾಯ,ಹಾಗೂ ಶ್ಯಾಮ್ ಪ್ರಸಾದ್ ಮುಖರ್ಜಿ,ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು .
ಈ ವೇಳೆ,ನಗರ ಮಂಡಲ ಅಧ್ಯಕ್ಷ ಸಿದ್ದರಾಮೇಶ ಮನ್ನಾಪುರ ಹಾಗೂ ಗ್ರಾಮೀಣ ಮಂಡಲದ ಅಧ್ಯಕ್ಷ ಯಂಕೋಬ ನಾಯಕ್ ರಾಮತ್ನಾಳ್,ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಮಹದಾನಂದ,ಸಹನಾ ಹೀರೆಮಠ,ಯುವ ಮೋರ್ಚಾ ಮೂರ್ತಿ ಕೆಂಭಾವಿ,ಮುಖಂಡರಾದ ಯಲ್ಲಪ್ಪ ತೆಲಗರ್,ಶರಣಪ್ಪ ದಳಪತಿ,ಚಿದಾನಂದಪ್ಪ ಜವಳಗೇರಾ,ಎಸ್ ಎಸ್ ಹಿರೇಮಠ,ನರಸಪ್ಪ ಕುರಿ,ಹಾಗೂ ಗಣ್ಯರು ಪದಾಧಿಕಾರಿಗಳು ಶಾಲಾ ಆಡಳಿತ ಮಂಡಳಿ,ಮುದ್ದು ಮಕ್ಕಳು ಉಪಸ್ಥಿತರಿದ್ದರು

