ರಾಯಚೂರು ಡಿಸೆಂಬರ್ 17 (ಕರ್ನಾಟಕ ವಾರ್ತೆ): ಇಲ್ಲಿನ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಶಾಖೆ-2 ಹಾಗೂ 1ರಲ್ಲಿ ಎಲ್.ಟಿ ಲೈನ್ ರೋಡ್ ವೈಡ್‌ನಿಂಗ್ ಕಾಮಗಾರಿ ಕೈಗೊಂಡ ಪ್ರಯುಕ್ತ ಡಿಸೆಂಬರ್ 19ರ ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯವರೆಗೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕಾರಿಸುವಂತೆ ಕೋರಲಾಗಿದೆ.
ಅಂದು ಬೆಳಿಗ್ಗೆ 10ರಿಂದ ಅಸ್ಕಿಹಾಳ, ಅಸ್ಕಿಹಾಳ ಮೇನ್ ರೋಡ್, ಕೋಲ್ಡ್ ಸ್ಟೋರೇಜ್ ಎದುರುಗಡೆ, ನಾಗರಕಟ್ಟೆ, ಕೃಷ್ಣ ಮೇಡೌಸ್, ಬೈಪಾಸ್ ರೋಡ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ 08532-226386, 08532-231999, 9480845955 ಮತ್ತು 9448395624ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
