ಸಿಂಧನೂರು : ಸಿಂಧನೂರು ತಾಲೂಕಿನ ಅಲಬನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕನ್ನಾರಿ ಗ್ರಾಮದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಗ್ರಾಮದ ನರೇಗಾ ಯೋಜನೆಯ ಕೂಲಿ ಕಾರ್ಮಿಕರೊಂದಿಗೆ ರೋಜ್ ಗಾರ್ ದಿವಸ ಆಚರಣೆ ಜೊತೆಗೆ ಎನ್.ಎಮ್.ಎಮ್.ಎಸ್.  ತಂತ್ರಾಂಶದಲ್ಲಿ ಕಡ್ಡಾಯವಾಗಿ ಎರಡು ಬಾರಿ ಹಾಜುರಾತಿ ದಾಖಲಿಸುವ ಕುರಿತು ಮಾಹಿತಿ ನೀಡಲಾಯಿತು.

ನರೇಗಾ ಯೋಜನೆಯಡಿ ದಿನದ ಕೂಲಿ ದರವನ್ನು 370ಕ್ಕೆ ಹೆಚ್ಚಳ ಮಾಡಿ, ಅದೇಶ ಹೊರಡಿಸಿ ಸರ್ಕಾರ ಕೂಲಿಕಾರರಿಗೆ ಸಿಹಿ ಸುದ್ದಿ ನೀಡಿದೆ. ಸ್ತ್ರೀ ಚೇತನ ಅಭಿಯಾನದಡಿ ಗಂಡು ಮತ್ತು ಹೆಣ್ಣಿಗೆ 370 ರೂ. ಸಮಾನ ಕೂಲಿ ಇದ್ದು, ಗ್ರಾಮೀಣ ಪ್ರದೇಶದ ಪ್ರತಿ ಅರ್ಹ ಕುಟುಂಬಕ್ಕೂ ಒಂದು ಅರ್ಥಿಕ ವರ್ಷದಲ್ಲಿ 100 ದಿನ ಕೆಲಸ ಕೊಡಲಾಗುತ್ತದೆ. ಒಂದು ಕುಟುಂಬ ವರ್ಷದಲ್ಲಿ ನೂರು ದಿನ ಕೆಲಸ ಮಾಡಿದರೆ, 37 ಸಾವಿರ ರೂ.ಗಳ ಕೂಲಿ ಹಣ ಪಡೆದುಕೊಳ್ಳಬಹುದಾಗಿದೆ.

ಇದೇ ವೇಳೆ ಪ್ರಧಾನ ಮಂತ್ರಿ ಭೀಮಾ ಸುರಕ್ಷಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆಯ ಕುರಿತು ಮಾಹಿತಿ ನೀಡಲಾಯಿತು,
ಸಾಮಾಜಿಕ ಭದ್ರತೆ ಕಲ್ಪಿಸಲು ಯೋಜನೆಯಡಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಶೇಷ ಚೇತನರು ಹಾಗೂ ಗರ್ಭಿಣಿಯರಿಗೆ ಶೇ.50 ರಷ್ಟು ಕೆಲಸ ಮಾಡಿದರೂ ಪೂರ್ತಿ ಪ್ರಮಾಣದ ಕೂಲಿ ನೀಡಲಾಗುತ್ತದೆ. 3 ವರ್ಷದೊಳಗಿನ ಮಕ್ಕಳನ್ನು ಶಿಶು ಪಾಲನಾ ಕೇಂದ್ರದಲ್ಲಿ ಬಿಟ್ಟು ಬರಬೇಕು. 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಬರಬಾರದೆಂಬ ಮಾಹಿತಿ ನೀಡಲಾಯಿತು.

ಎನ್.ಎಂ.ಎಂ.ಎಸ್ ಹಾಜರಾತಿಯನ್ನು ಎರಡು ಬಾರಿ  ಕಡ್ಡಾಯವಾಗಿ ತೆಗೆದುಕೊಳ್ಳಲು ಸಿಬ್ಬಂದಿಗಳಿಗೆ ತಿಳಿಸಿ, ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರಿಂದ 317 ಕೂಲಿಕಾರರು ಹಾಜರಿದ್ದರು, ಜನರಿಗೆ ಕೆಲಸ ಮುಗಿದ ಕೂಡಲೇ ನಮೂನೆ 6 ನ್ನು ಕೊಟ್ಟು ಮತ್ತೆ ಕೆಲಸ ಕೊಡುತ್ತೇವೆ ಎಂದು ತಿಳಿಸಿ, ಇಕೆವೈಸಿ ಮಾಹಿತಿ ಪಡೆದು ಶೇ. 93 ರಷ್ಟು ಈಗಾಗಲೇ ಪ್ರಗತಿ ಸಾಧಿಸಿದ್ದು, ಉಳಿದಂತೆ ತಮ್ಮ ಗುರಿಗನುಗುಣವಾಗಿ ಪ್ರಗತಿ ಸಾಧಿಸಿ, ಬಾಕಿ ಉಳಿಯಲು ಕಾರಣಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ವರದಿ ನೀಡಲು ತಿಳಿಸಲಾಯಿತು.
ಈ ಸಂದರ್ಭದಲ್ಲಿ: ಥಾಮಸ್ ತಾಲೂಕು ಐಇಸಿ ಸಂಯೋಜಕರು, ರಾಜೀವ್ ಗಾಂಧಿ ಫೆಲೋ ಧನ್ಯ ಪ್ರಭು, ಗ್ರಾಮ ಪಂಚಾಯತಿ ಡಿ.ಇ.ಓ, ಶರಣಪ್ಪ ಹಾಗೂ ಕೂಲಿ ಕಾರ್ಮಿಕರು ಹಾಜರಿದ್ದರು.

Leave a Reply

Your email address will not be published. Required fields are marked *