ಮಾನ್ವಿ: ಪಟ್ಟಣದ ಬಸವ ವೃತ್ತದಲ್ಲಿ ವೀರಶೈವ ಲಿಂಗಾಯತ ಸಮಾಜದ ಹಿರಿಯ ಚೇತನ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷರಾದ ಡಾ.ಶಾಮನೂರ ಶಿವಶಂಕರಪ್ಪ ರವರು ಲಿಂಗೈಕ್ಯರಾಗಿರುವ ಹಿನ್ನೇಲೆಯಲ್ಲಿ ತಾಲೂಕು ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.
ತಾಲೂಕ ವೀರಶೈವ ಸಮಾಜದ ಅಧ್ಯಕ್ಷರಾದ ಹರಿಹರ ಪಾಟೀಲ್ ಮಾತನಾಡಿ ಡಾ.ಶಾಮನೂರ ಶಿವಶಂಕರಪ್ಪ ರವರಂತಹ ಮುತ್ಸದಿಗಳನ್ನು ಹಾಗೂ ಸಮಾಜದ ಹಿತಚಿಂತಕರನ್ನು ಕಳೆದು ಕೊಂಡು ವೀರಶೈವ ಲಿಂಗಾಯತ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಅವರ ಅತ್ಮಕ್ಕೆ ಶಿವ ಶಾಂತಿಯನ್ನು ನೀಡಲಿ ಎಂದು ತಿಳಿಸಿದರು.
ಡಾ.ಶಾಮನೂರ ಶಿವಶಂಕರಪ್ಪನವರ ಅತ್ಮಕ್ಕೆ ಶಾಂತಿ ಕೋರಿ ಸಮಾಜದ ನೂರಾರು ಜನರು ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿ ಮೌನಾಚಾರಣೆ ನಡೆಸಿದರು.
ತಾಲೂಕ ವೀರಶೈವ ಸಮಾಜದ ತಾ. ಕಾರ್ಯಾಧ್ಯಕ್ಷರಾದ ಶ್ರೀಧರ್ ಸ್ವಾಮಿ , ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ಓತೂರ್, ಮುಖಂಡರಾದ ವೀರನಗೌಡ ಸಂಗಪುರ್, ಮಲ್ಲಿಕಾರ್ಜುನ್ ಗೌಡ ಗಣೆಕಲ್, ಬಸವರಾಜಪ್ಪ ಗೌಡ ಚಿಮಲಾಪುರ್, ರಾಮನಗೌಡ ಹೀರಾ,ಅಮರೇಗೌಡ ಉಮಳಿಹೊಸೂರ್,ಜೆ.ಸುಧಾಕರ್, ಶ್ರೀಶೈಲ್‌ಗೌಡ , ಗುರುಸಿದ್ದಪ್ಪಗೌಡ ಕಣ್ಣೂರು, ಹೊಯ್ಸಳ ಸ್ವಾಮಿ, ಲೋಕನಾಥ್ , ವಿರುಪಾಕ್ಷಿಗೌಡ, ಬಸವನಗೌಡ ಕರವೇ, ಹೊಸಕೋಟಿ ಶರಣಪ್ಪ, ಮೌನೇಶ, ಚಂದ್ರಪ್ಪ ಗೌಡ ಚಿಕ್ಕಲಪರವಿ, ವಿರುಪಣ್ಣ ,ಮಲ್ಲಭದ್ರಗೌಡ, ಶಶಿಧರ್ ಗೌಡ, ರುದ್ರಮುನಿ ಸ್ವಾಮಿ, ಸುರೇಶ್ ನಾಡಗೌಡ, ವಿ.ಟಿ. ಶರಣ, ಹಂಪನಗೌಡ, ರಾಜು ಸ್ವಾಮಿ, ವೀರಭದ್ರಪ್ಪ ಬಣಕಾರ್, ಸಿ.ರಾಜು ಸೇರಿದಂತೆ ಇನ್ನಿತರರು ಇದ್ದರು.
ಮಾನ್ವಿ: ಪಟ್ಟಣದ ಬಸವ ವೃತ್ತದಲ್ಲಿ ಡಾ.ಶಾಮನೂರ ಶಿವಶಂಕರಪ್ಪ ನವರಿಗೆ ಭಾವಪೂರ್ಣ ಶ್ರಾದ್ದಂಜಲಿ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *