ಸಿಂಧನೂರು : ಕರ್ನಾಟಕ ರಾಜ್ಯದಲ್ಲಿ ಈಡಿಗ ಬಿಲ್ಲವ, ನಾಮಧಾರಿ, ಧೀವರ, ತೀಯ ಸೇರಿ, 26 ಒಳ ಪಂಗಡಗಳ ಸಮಾಜದ ಬೇಡಿಕೆ ಈಡೇರಿಕೆಗಾಗಿ ಜ.6 ರಿಂದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದಿಂದ ಕರದಾಳದಿಂದ ಬೆಂಗಳೂರಿನವರೆಗೆ 700 ಕಿ.ಮೀ.41ದಿನ ಐತಿಹಾಸಿಕ ಪಾದಯಾತ್ರೆ ನಡೆಯಲಿದೆ ಎಂದು ಡಾ.ಪ್ರಣವಾನಂದ ಪರಮಪೂಜ್ಯ ಸ್ವಾಮಿಜಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ 40 ರಿಂದ 50 ಲಕ್ಷ ಜನರಿದ್ದೇವೆ, ಮಂಗಳೂರು, ಶಿವಮೊಗ್ಗ, ಉಡುಪಿ, ಕಾರವಾರ, ಜಿಲ್ಲೆಗಳಲ್ಲಿ ದೊಡ್ಡಮಟ್ಟದ ಸಮುದಾಯವಿದೆ. 23 ವಿಧಾನಸಭಾ ಕ್ಷೇತ್ರದಲ್ಲಿ 17 ವಿಧಾನಸಭಾ ಕ್ಷೇತ್ರದಲ್ಲಿ 1 ರಿಂದ 1.50 ಲಕ್ಷ ಜನರಿರುವ ಸಮುದಾಯವಾಗಿದೆ. ಈಗಿನ ಆಡಳಿತ ಪಕ್ಷದಲ್ಲಿ 4 ಜನ ಶಾಸಕರು, 2 ಜನ ಎಂಎಲ್ಸಿ, ಜೊತೆಗೆ ಒಬ್ಬರು ಮಂತ್ರಿ ಇದ್ದಾರೆ. ಈಡಿಗ ಸಮುದಾಯದ ಕುಲ ಕಸುಬು ಸೇಂದಿ ಇಳಿಸಿ ಮಾರಾಟ ಮಾಡಿ ಬದುಕುವ ಸಮಾಜ, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿನ ಅಬಕಾರಿ ಸಚಿವರಾಗಿದ್ದಾಗ ಸೇಂದಿಯಲ್ಲಿ ಸಿ.ಎಚ್.ಪೌಡರ್ ಹಾಕಿ ಮಾರಾಟ ಮಾಡುವುದು ಅಪರಾಧವೆಂಬ ಒಂದೇ ನೆಪವೊಡ್ಡಿ ಸಮಾಜದ ಕುಲ ಕಸುಬನ್ನೇ ಬಂದ್ ಮಾಡಿದರು.

ಆದರೆ ಯಾವುದೇ ಪರ್ಯಾಯದ ವ್ಯವಸ್ಥೆ ಮಾಡಲಿಲ್ಲ ರಾಜ್ಯದಲ್ಲಿ ನಿಕ್ಕರ್, ಪಬ್, ಗುಟ್ಕಾ, ಎಲ್ಲವೂ ಇದೆ, ಇದ್ಯಾಯಾವುದನ್ನು ಬಂದ್ ಮಾಡದೇ, ಬರೀ ಸೇಂದಿಯನ್ನಷ್ಟೇ ಬಂದ್ ಮಾಡಿ, ಸಮಾಜವನ್ನು ಆರ್ಥಿಕವಾಗಿ ಕುಗ್ಗುವಂತೆ ಮಾಡಿದರು. ಹೀಗಾಗಿ 2004 ರಿಂದ ಸೇಂದಿ ಮಾರಾಟ ನಿಂತು ಹೋಯಿತು. 2007 ರಲ್ಲಿ ಕುಮಾರಸ್ವಾಮಿ ಸರ್ಕಾರ ಸರಾಯಿ ಕೂಡ ಬಂದ್ ಮಾಡಿತು. ಈ ಕಾರಣದಿಂದ ಕಲ್ಯಾಣ ಕರ್ನಾಟಕದ ಈಡಿಗರು ಸಂಪೂರ್ಣವಾಗಿ ಬಡತನಕ್ಕೆ ಒಳಪಟ್ಟರು.

ಇದಕ್ಕೆಲ್ಲ ಕಾರಣ ಸರ್ಕಾರ ಜೊತೆಗೆ ಒಂದಷ್ಟು ನಮ್ಮ ಸಮುದಾಯದ ಮೇಲ್ವರ್ಗದವರು ಕಾರಣವಾಗಿದ್ದಾರೆ. ಹೀಗಾಗಿ ನಿರಂತರವಾಗಿ 5 ವರ್ಷಗಳಿಂದ ರಾಜ್ಯದಲ್ಲಿ ಅಷ್ಟೇ ಅಲ್ಲದೇ, 6 ರಾಜ್ಯಗಳಲ್ಲಿಯೂ ಸಹ ಹೋರಾಟ ನಡೆಸಿದ್ದೇವೆ, 2023 ರಲ್ಲಿ ಮಂಗಳೂರಿನಿಂದ ಹಿಡಿದು ಬೆಂಗಳೂರಿನವರೆಗೆ ಐತಿಹಾಸಿಕ ಪಾದಯಾತ್ರೆಯನ್ನು ಕೂಡ ನಡೆಸಿದ್ದೇವು,

ಈ ನಿಟ್ಟಿನಲ್ಲಿ ಮತ್ತೆ ಈಡಿಗ ಸೇರಿದಂತೆ ಎಲ್ಲಾ ಒಳ ಪಂಗಡಗಳ ಏಳ್ಗೆಗಾಗಿ ಜ.6 ರಿಂದ ಐತಿಹಾಸಿಕ ಪಾದಯಾತ್ರೆ ನಡೆಸಲು ತೀರ್ಮಾನಿಸಿದ್ದೇವೆ, ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಬಿಡುಗಡೆ ಮಾಡಬೇಕು, ಈಡಿಗ ಸಮಾಜಕ್ಕೆ 5 ಎಕರೆ ಜಮೀನು ಪ್ರತಿ ಕೊಡಬೇಕು, 2ಎ ಯಿಂದ ಎಸ್.ಟಿ ಮೀಸಲಾತಿಗೆ ಸೇರಿಸಬೇಕು, ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿ ವಿಧಾನಸೌಧದ ಎದುರುಗಡೆ ಸ್ಥಾಪಿಸಬೇಕು, ಮದ್ಯ ಮಾರಾಟದಲ್ಲಿ ಈಡಿಗ ಸಮಾಜದ ಸೇರಿದಂತೆ 26 ಪಂಗಡಗಳಿಗೆ ಶೇ.50 ರಷ್ಟು ಮಿಸಲಾತಿ ನೀಡಬೇಕು ಹಾಗೂ ಶಿವಮೊಗ್ಗ ಜಿಲ್ಲೆಯ ಮುಳಗುಡೆ ಸಂತ್ರಸ್ತರಿಗೆ ಸೂಕ್ತ ಪರಿಹಾರವಾಗಿ ಮನೆ ಹಾಗೂ ಜಮೀನು ನೀಡುವುದು ಸೇರಿದಂತೆ ಒಟ್ಟು 18 ಬೇಡಿಕೆಗಳು ಈಡೇರಿಕೆಗಾಗಿ ಒತ್ತಾಯಿಸಿ ಮನವಿ ಸಲ್ಲಿಸಿದರು.
ಈ ವೇಳೆ: ಪವನ್ ಕುಮಾರ, ರಾಮಕೃಷ್ಣ, ಸುರೇಂದ್ರ, ಎಮ್.ಎನ್.ರಾಜಶೇಖರ್, ಪದ್ಮನಾಭ, ಶ್ರೀನಿವಾಸ, ಸೇರಿದಂತೆ ಪತ್ರಿಕಾಗೋಷ್ಠಿಯಲ್ಲಿ ಅನೇಕರಿದ್ದರು.

Leave a Reply

Your email address will not be published. Required fields are marked *