ಲಿಂಗಸಗೂರು : ಡಿ 14 :- ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಯಚೂರು ತಾಲೂಕು ಕಾನೂನು ಸೇವಾ ಸಮಿತಿ, ಲಿಂಗಸಗೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ರಾಷ್ಟೀಯ ಲೋಕ ಅದಾಲತ್ತನ್ನು ಆಯೋಜಿಸಲಾಗಿದ್ದು ಇದರಲ್ಲಿ ಕೌಟುಂಬಿಕ ಕಲಹದಿಂದ ದೂರಸರಿಯಲು ಇಚ್ಚಿಸಿದ ದಂಪತಿಗಳ ಪರವಾಗಿ ಕೆ.ತಸ್ಲೀಮ ವಕೀಲರು ಮತ್ತು ಬಿ.ಬಸವರಾಜ ವಕೀಲರು ನ್ಯಾಯಾಲಕ್ಕೆ ಬಂದಾಗ ಹಿರಿಯ ಶ್ರೇಣಿ ನ್ಯಾಯಧೀಶರಾದ ಶ್ರೀಮತಿ ಉಂಡಿ ಮಂಜುಳಾ ಶಿವಪ್ಪ ಇವರು ಪ್ರಕರಣವನ್ನು ಕೈಗೆತ್ತಿಕೊಂಡು ದಂಪತಿಗಳಿಗೆ ಜೀವನದ ಬಗ್ಗೆ ತಿಳುವಳಿಕೆ ಹೇಳಿ ದಂಪತಿಗಳನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾದರು ಅದರಂತೆ ಲೋಕ ಅದಾಲತ್ತಿನಲ್ಲಿ ರಾಜಿಯಾಗುವ ಮೂಲಕ ಪರಸ್ಪರ ಹೂವಿನ ಹಾರ ಬದಲಿಸಿಕೊಂಡು ಬೇರೆಯಾಗಬೇಕಿದ್ದ ದಂಪತಿಗಳು ಒಗ್ಗೂಡಿಸಿದರು .

5744ಬಾಕಿ ಪ್ರಕರಣಗಳ ಪೈಕಿ 2266 ಪ್ರಕರಣಗಳು ಲೋಕ ಅದಾಲತ್ತಿನಲ್ಲಿ ರಾಜಿಯಾಗುವ ಮೂಲಕ ಇತ್ಯಾರ್ಥವಾಗಿರುತ್ತವೆ. ಇದರ ಒಟ್ಟು ಮೊತ್ತ ರೂ. 2,37,24,547 (ಎರಡು ಕೋಟಿ ಮೂವತ್ತೇಳು ಲಕ್ಷದ ಇಪ್ಪತ್ತು ನಾಲ್ಕು ಸಾವಿರದ ಐದುನೂರ ನಲವತ್ತೇಳು ರೂಪಾಯಿ ) ಆಗಿದ್ದು , ವಾಜ್ಯಪೂರ್ವ ಪ್ರಕರಣ 6949 ಪೈಕಿ 6029 ವಾಜ್ಯಪೂರ್ವ ಪ್ರಕರಣಗಳು ಲೋಕ ಅದಾಲತ್ತಿನಲ್ಲಿ ರಾಜಿಯಾಗುವ ಮೂಲಕ ಇತ್ಯಾರ್ಥವಾಗಿರುತ್ತವೆ. ಇದರ ಒಟ್ಟು ಮೊತ್ತ ರೂ. 1,34,59,724 (ಒಂದು ಕೋಟಿ ಮೂವತ್ತುನಾಲ್ಕು ಲಕ್ಷದ ಐವತ್ರೋಂಬತ್ತು ಸಾವಿರದ ಏಳುನೂರ ಇಪ್ಪತ್ತುನಾಲ್ಕು ರೂಪಾಯಿ ) ಆಗಿರುತ್ತದೆ. ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಧೀಶರಾದ ಅಂಬಣ್ಣ.ಕೆ ಹಾಗೂ ರಾಘವೇಂದ್ರ ಮುತಾಲಿಕ, ಕಲ್ಮಟ ವಕೀಲರು, ವಿಶ್ವನಾಥ, ನಾಗರಾಜ ಏಲಿಗಾರ, ಹಾಜಿಬಾಬು, ಅನೀಲ, ಶಶಿ ಹೊಸಮನಿ, ರವಿ, ಚಂದರಮತಿ, ವಿಜಯಲಕ್ಮೀ, ಪ್ರಮೋಧ, ಶಿವಲಿಂಗಪ್ಪ , ಕರಿಯಪ್ಪ ಇತರೆ ವಕೀಲರು ಹಾಜರಿದ್ದರು.

Leave a Reply

Your email address will not be published. Required fields are marked *