ಸಿಂಧನೂರು : ಡಿ 12 ರಂದು ಸಂಜೆ ಬಾಲಕಿಯರ ಅಂಬೇಡ್ಕರ್ ವಸತಿ ನಿಲಯ ಸಿಂಧನೂರು ನಡೆದ ಜಿಲ್ಲೆ ಕ.ಸಾ.ಪ ರಾಯಚೂರು
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಸಿಂಧನೂರು
೨೦೨೫-೨೬ ನೇ ಸಾಲಿನ ದತ್ತಿ ಉಪನ್ಯಾಸ ಮಾಲಿಕೆ
ದಿ.ಶ್ರೀ ಬಸಪ್ಪ ಪಿ.ಸಿಂಧನೂರು
ದಿ.ಶ್ರೀ ಚನ್ನನಗೌಡ ಪಾಟೀಲ್ ಸಿಂಧನೂರು, ದತ್ತಿ ಉಪನ್ಯಾಸ ಮಾಲಿಕೆ
ಹಾಗೂ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಮತ್ತು ಕೋಮು ಸೌಹಾರ್ದತೆ ಹಾಗೂ ರಾಷ್ಟ್ರಪ್ರೇಮ. ಕಾರ್ಯಕ್ರಮವನ್ನು ಉದ್ಘಾಟಕರಾದ ವೆಂಕಟೇಶ್ ಅವರು ಉದ್ಘಾಟಿಸಿದರು
ಶ್ರೀ ವೀರೇಶ್ ನಾಯಕ್ ಕನ್ನಾರಿ ಕಸಾಪ ಸದಸ್ಯರು ಸ್ವಾಗತ ಮತ್ತು
ದತ್ತಿ ದಾನಿಗಳು ಪರಿಚಯ ಮಾಡಿ ವೇದಿಕೆಗೆ ಮುಖ್ಯ ಅತಿಥಿಗಳನ್ನು ಹೆಗಲುಪಟ್ಟಿ ಮತ್ತು ಪುಸ್ತಕ ಪ್ರತಿ ನೀಡುವುದರ ಮೂಲಕ ಸ್ವಾಗತಿಸಿ
ಶ್ರೀ ಭರತ್ ತಂದೆ ನಾಗರಾಜ ಸಿಂಧನೂರು ಶ್ರೀ ಅಂಬರೇಶ್ ಪಾಟೀಲ್ ಬಡಿಬೇಸ್ ,ಸಿಂಧನೂರು ದತ್ತಿ ದಾನಿಗಳ ಪರಿಚಯ ಮಾಡಿದರು.
ಕಾರ್ಯಕ್ರಮದ ನಿರೂಪಣೆ ಶ್ರೀ ನಾಗರಾಜ ಅರಳಿಮರ ಗೌರವ ಕಾರ್ಯದರ್ಶಿಗಳು ಕ,ಸಾ,ಪ ಸಿಂಧನೂರು ಇವರು ನಡೆಸಿಕೊಟ್ಟರು.
ಪ್ರಾಸ್ತವಿಕ ನುಡಿಯಲ್ಲಿ ಶ್ರೀಮತಿ ಶಾಂತ ಒಳಗಿನಮನಿ ಗೌರವ ಕೋಶಾಧ್ಯಕ್ಷರು ಕ,ಸಾ,ಪ ಸಿಂಧನೂರು ತಾಲೂಕು ಘಟಕ ವತಿಯಿಂದ ನಡೆಸಿದ ವಿವಿಧ ಕಾರ್ಯಕ್ರಗಳ ಬಗ್ಗೆ ಸಂಕ್ಷಿಪ್ತವಾದ ವಿವರಣೆಯನ್ನು ನೀಡಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹೆಚ್.ಎಫ್. ಮಸ್ಕಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಸಿಂಧನೂರು
ಇವರು ಮಾತನಾಡಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಸತತ ಪರಿಶ್ರಮದ ಪ್ರಯತ್ನಗಳ ಫಲಿತಾಂಶ ಸಾಧನೆ ಸಾಧ್ಯವಿದೆ. ಅಕ್ಷರವೆಂಬ ಬೀಜ ಬಿತ್ತಿದ ಭೂಮಿಯು ಎಂದು ಬರುಡಾಗದು. ಸೃಜನಾತ್ಮಕ ಚಟುವಟಿಕೆ ಪ್ರವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ತಿಳಿಸಿದರು.
ಶ್ರೀ ಮಮ್ಮದ್ ಅಲಿ ಮುರ್ತುಜಾ ಉಪನ್ಯಾಸಕರು ಬಿ.ಆರ್ ವಿಷಯ ಮಂಡನೆ ನುಡಿಯಲ್ಲಿ ಮಾತಾಡಿ ನಾವೆಲ್ಲರೂ ಭಾರತೀಯರು ಸಮಾನತೆ,ಪ್ರಜಾಸತಾತ್ಮಕ ,ಭಾತೃತ್ವಭಾವನೆ ಸೌಹಾರ್ದತೆ ಮತ್ತು ರಾಷ್ಟ್ರಪ್ರೇಮ ಮಾನವ ಅಳವಡಿಸಿಕೊಳ್ಳಬೇಕು ಅಂದಾಗ ಸಮೃದ್ಧದೇಶ ನಿರ್ಮಾಣವಾಗುತ್ತದೆ. ಕೋಮು ಸಂಘರ್ಷದ ಭಾವನೆ ದೇಶಕ್ಕೆ ಮಾರಕವಾದೆ ಮತ್ತು ಮೂಡತೆಯು ದೇಶವನ್ನು ಹಾಳುಮಾಡುತ್ತದೆ. ತಿಳಿಹೇಳಿದರು.
ನಂತರ ಮೊಹಮ್ಮದ್ ಅಲಿ ಮುರ್ತುಜಾ ಅವರು ವಿಷಯ ಮಂಡಿಸಿ ಸಮಾಜದಲ್ಲಿ ಏಕತೆ, ಸೌಹಾರ್ದತೆ ಮರೆಯಾಗುತ್ತಿದೆ. ಅಸಹಿಷ್ಣುತೆ, ಪೂರ್ವಗ್ರಹ, ಹಿಂಸೆಗಳು ತಾಂಡವವಾಡುತ್ತಿವೆ. ಶಾಂತಿ, ನೆಮ್ಮದಿ ಇಲ್ಲದ ಸಮಾಜ ಎಂದಿಗೂ ಆರ್ಥಿಕವಾಗಿ ಪ್ರಗತಿ ಸಾಧಿಸಲಾರದು. ಇಂದು ಭಾರತದಲ್ಲಿ ಧಾರ್ಮಿಕ ಸಾಮರಸ್ಯದ ಸುಂದರ ಉದಾಹರಣೆಗಳನ್ನು ಹುಡುಕಲು ನಾವು ಸುತ್ತಲೂ ನೋಡಬೇಕಾಗಿತ್ತು. ಅಲ್ಲಿ ವಿವಿಧ ಧರ್ಮಗಳ ಜನರು ಮಾನವೀಯತೆಯ ಮನೋಭಾವದಿಂದ ಒಟ್ಟುಗೂಡುತ್ತಾರೆ, ಭಾರತದ ವೈವಿಧ್ಯತೆ ಮತ್ತು ಸಹಿಷ್ಣುತೆಯ ಶ್ರೀಮಂತ ಪರಂಪರೆಯನ್ನು ಆಚರಿಸುತ್ತಾರೆ. ಎಂದು ತಿಳಿಸಿದರು..
ಮುಖ್ಯ ಅತಿಥಿಗಳಾಗಿ
ಶ್ರೀ ಮತಿ ಮಂಜುಳ ಪಾಟೀಲ್ ಮಾಜಿ ನಗರಸಭೆ ಅಧ್ಯಕ್ಷರು ಸಿಂಧನೂರು ಇವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಸಾಧನೆಯ ಸಾಧಕರಾಗಿ ಕಲಿಕೆಯೆ ಸಾಧನೆಯ ಮೂಲ ಭದ್ರತೆ ಬುನಾದಿ ಆಗಿದೆ. ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಕಲಿತು ಸಾಧಕರ ಸಾಲಿಗೆ ಯುವ ಜನಾಂಗ ಮುಂದೆ ಬರಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗ ಈ ಕಾರ್ಯಕ್ರಮದಲ್ಲಿ
ಶ್ರೀ ಗಂಗನಗೌಡ ಪೊಲೀಸ್ ಪಾಟೀಲ್ ಆಡಳಿತ ಅಧಿಕಾರಿಗಳು ಅನ್ವಿತಾ ಕಾಲೇಜ್ ಸಿಂಧನೂರು
ಶ್ರೀ ಅಮರೇಶ ಮಾಡಸಿರವಾರ ವರ್ತಕರು ಸಿಂಧನೂರು
ಶ್ರೀ ಯಮನಪ್ಪ ಪವಾರ ಉದಯವಾಣಿ ವರದಿಗಾರರು ಸಿಂಧನೂರು ಮುಂತಾದವರು ಭಾಗವಹಿಸಿದ್ದರು.
ಶ್ರೀ ವೆಂಕಟೇಶ ನಂಜಲದಿನ್ನಿ ಹಿರಿಯ ಮುಖಂಡರು ಸಿಂಧನೂರು
ಶ್ರೀ ಚಂದ್ರಶೇಖರ ಕಗ್ಗೋಡ ನಿವೃತ್ತ ಶಿಕ್ಷಕರು ಸಿಂಧನೂರು.
ಶ್ರೀ ಬೀರಪ್ಪ ಸಂಭೋಜಿ ನಿವೃತ್ತ ಶಿಕ್ಷಕರು ಸಿಂಧನೂರು
ಶ್ರೀ ಡಾ ಬಸವರಾಜ ಪಿ.ನಾಯಕ ಉಪನ್ಯಾಸಕರು ಸಿಂಧನೂರು ಇನ್ನೀತರರು ಸೇರಿದರು. ಜೊತೆಗೆ
ಹಾಸ್ಟೆಲ್ ಸಿಬ್ಬಂದಿ ವರ್ಗದವರುನ್ನು ಸನ್ಮಾನಿಸಿ ಗೌರವಿಸಲಾಯಿತು.
ವಂದನಾರ್ಪಣೆಯನ್ನು ಹೆಚ್.ಎಂ.ಶ್ರೀಶೈಲ ಸಿಂಧನೂರು ಕಾರ್ಯಕ್ರಮ ಯಶಸ್ವಿಗೊಳ್ಳಲು ಕಾರಣೀಭೂತರಾದ ವೇದಿಕೆಯ ಎಲ್ಲಾ ಮಖ್ಯ ಅತಿಥಿಗಳಿಗೆ ಈ ಕಾರ್ಯಕ್ರಮದ ಕೇಂದ್ರ ಬಿಂದುಗಳಾದ ವಿಧ್ಯಾರ್ಥಿಗಳಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್,ರಾಯಚೂರು. ಮತ್ತು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ, ಸಿಂಧನೂರು. ವತಿಯಿಂದ ಅಭಿನಂದನೆಗಳೊಂದಿಗೆ ಸಲ್ಲಿಸಿ ವಂದಿಸಿದರು.

Leave a Reply

Your email address will not be published. Required fields are marked *