ತಾಳಿಕೋಟಿ: ತಾಲೂಕಿನ ಬ.ಸಾಲವಾಡಗಿ ಗ್ರಾಮದ ಪ್ರಭಾವಿ ರಾಜಕೀಯ ಮುಖಂಡರು ಹಾಗೂ ಸಮಾಜ ಸೇವಕರಾದ ಬಸನಗೌಡ ಪಾಟೀಲ ಯಡಿಯಾಪೂರ ಅವರು ಕರಡಕಲ್ಲ ಕೋರಿ ಸಿದ್ದೇಶ್ವರ ಶಾಖಾ ಮಠದ ಪರಮ ಪೂಜ್ಯರಾದ ಶಾಂತ ರುದ್ರಮುನಿ ಮಹಾಸ್ವಾಮಿಗಳಿಗೆ ಗೌರವ ಸಮರ್ಪಣೆ ಸಲ್ಲಿಸಿದರು. ಶುಕ್ರವಾರ ಶ್ರೀ ಮಠಕ್ಕೆ ಭೇಟಿ ನೀಡಿದ ಅವರು ಶ್ರೀಗಳಿಗೆ ಗೌರವ ಸಮರ್ಪಣೆಯನ್ನು ಸಲ್ಲಿಸಿ ಅವರಿಂದ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಶ್ರೀಗಳು ಸಮಾಜ ಸೇವಕ ಬಸನಗೌಡ ಪಾಟೀಲ ಯಡಿಯಾಪುರ ಅವರ ಸಮಾಜಮುಖಿ ಕಾರ್ಯಗಳಿಗೆ ಮೆಚ್ಚುಗೆ ಸೂಚಿಸಿ ಇನ್ನೂ ಹೆಚ್ಚಿನ ಸೇವೆಯನ್ನು ಮಾಡಿ ಎಂದು ಆಶೀರ್ವಾದ ನೀಡಿದರು. ಈ ಸಮಯದಲ್ಲಿ ಮುಖಂಡ ವಿಶ್ವನಾಥಗೌಡ ಪಾಟೀಲ(ಲಕ್ಕುಂಡಿ) ಹಾಗೂ ರೆಡ್ಡಿ ನಾಯ್ಕಲ್ ಉಪಸ್ಥಿತರಿದ್ದರು.

