ಗುರುಗುಂಟಾ:
ಸಮಾಜ ಹೆಣ್ಣನ್ನು ಸಂಸ್ಕಾರವೆಂಬ ಚೌಕಟ್ಟಿನಲ್ಲಿ ಬಂಧಿಸಿ ಅವಳ ಕನಸನ್ನ ಬದುಕಿನ ಗುರಿಯನ್ನು ಕಸಿದುಕೊಳ್ಳುತ್ತಾ ಬರುತ್ತಿದೆ ಆದರೆ ನಿಜವಾದ ಸಂಸ್ಕಾರ ಎನ್ನುವುದು ತಡೆಗೋಡೆಗಳನ್ನು ಕಟ್ಟುವುದಲ್ಲ ಅವಳ ಜೀವನಕ್ಕೆ ಸಮಾನತೆ ಮತ್ತು ಸ್ವಾತಂತ್ರ್ಯದ ಅವಕಾಶಗಳನ್ನ ಕಲ್ಪಿಸುವುದಾಗಿದೆ ಹಿಂದಿನ ಆಧುನಿಕ ಜೀವನದಲ್ಲಿ ಹೆಣ್ಣಿಗೆ ಶಿಕ್ಷಣ ಜೊತೆಗೆ ಅವಕಾಶಗಳು ಮಹತ್ವವಾಗಿದ್ದು ಏಕೆಂದರೆ ಮಹಿಳೆಯರು ಶಿಕ್ಷಣ ಮತ್ತು ಸಂಸ್ಕಾರದಿಂದ ಮಾತ್ರ ಸಶಕ್ತಬದುಕನ್ನ ರೂಪಿಸಿಕೊಳ್ಳಲು ಸಾಧ್ಯ, ಅದರಿಂದ ಶಿಕ್ಷಣ ಮತ್ತು ಸಂಸ್ಕಾರ ಹೆಣ್ಣಿಗೆ ಎರಡು ಕಣ್ಣುಗಳಿದ್ದಂತೆ ಎಂದು ನ್ಯೂಸ್ -18 ಎರಡು ಎಂದು ಜಿಲ್ಲಾ ವರದಿಗಾರರ ಶ್ರೀ ವಿಶ್ವನಾಥ್ ಹೂಗಾರ ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು
ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಡಾ. ಸುಧಾ ಮೂರ್ತಿ ಇನ್ಫೋ ಮಹಿಳಾ ಪದವಿ ಕಾಲೇಜಿನ 2026-27ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ 7 ನೇ ದಿನದ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಸುಕ್ಷೇತ್ರ ಅಮರೇಶ್ವರ ಬ್ರಹನ್ಮಠ ದೇವರಭೂಪುರದಲ್ಲಿ ನಡೆಯಿತು ಈ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಲು ಆಗಮಿಸಿದ್ದ ಶ್ರೀ ವಿಶ್ವನಾಥ ಹೂಗಾರ್ ಅವರು “ಹೆಣ್ಣಿಗೆ ಶಿಕ್ಷಣ ಒಂದೇ ಸಾಕೆ ಸಂಸ್ಕಾರವು ಬೇಕೆ” ಎನ್ನುವ ಉಪನ್ಯಾಸದಲ್ಲಿ ಶಿಕ್ಷಣವಿಲ್ಲದ ಹೆಣ್ಣು ಮಗಳ ಜೀವನ ದಿಕ್ಕಿಲ್ಲದ ದೀಪದಂತೆ ಆದ್ದರಿಂದ ಶಿಕ್ಷಣ ಅವಳಿಗೆ ಬದುಕು ಕೊಟ್ಟರೆ ಸಂಸ್ಕಾರ ಗೌರವ ಹೆಚ್ಚಾಗುವಂತೆ ಮಾಡುತ್ತದೆ ಹಾಗಾಗಿ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಸಂಸ್ಕಾರವನ್ನು ಜೀವನದಕ್ಕೂ ಅಳವಡಿಸಿಕೊಂಡು ಆದರ್ಶ ಬದುಕು ನಿರ್ಮಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ ಶ್ರೀ ಅಮರೇಶ್ವರ ಗುರು ಷ.ಬ್ರ ಶ್ರೀ ಗಜಗಂಡ ಶಿವಾಚಾರ್ಯ ಮಹಾಸ್ವಾಮಿಜಿಯವರು ತಮ್ಮ ಆಶೀರ್ವಚನದಲ್ಲಿ ಶಿಕ್ಷಣ ಮತ್ತು ಸಂಸ್ಕಾರ ಎರಡು ಮೂಲ ಭಾರತೀಯ ಸಂಸ್ಕೃತಿ ಯ ಪರಂಪರೆ ಯಾಗಿದೆ ಶಿಕ್ಷಣ ಅವಳ ಬದುಕಿಗೆ ಬೆಳಕಾದರೆ ಸಂಸ್ಕಾರ ಅವಳ ಹೃದಯಕ್ಕೆ ಬೆಳಕಾಗುತ್ತದೆ ಇವೆರಡು ಇದ್ದಾಗ ಅವಳು ಸಮಾಜದ ಮತ್ತು ಕುಟುಂಬದ ಶಕ್ತಿಯಾಗಲು ಸಾಧ್ಯ. ಆದರಿಂದ ನಿಮ್ಮ ಬಾಳಲ್ಲಿ ಇವೆರಡು ಮುಖ್ಯವಾಗಲಿ ಎಂದರು. ಮತ್ತಷ್ಟು ಬೆಳಕು ಚೆಲ್ಲುತ್ತ ಜ್ಞಾನ ಮತ್ತು ಸಂಸ್ಕಾರ ಎರಡು ಪಕ್ಷಿಯ ರೆಕ್ಕೆಗಳಿದ್ದಂತೆ ಎರಡು ಇದ್ದಾಗ ಮಾತ್ರ ಹೆಣ್ಣಿನ ವ್ಯಕ್ತಿತ್ವ ಪರಿಪೂರ್ಣತೆ ಹೊಂದಿ ಬೆಳಕು ನೀಡುವ ಶಕ್ತಿಯಾಗುತ್ತಿರಿ ಎಂದು ಆಶೀರ್ವದಿಸಿದರು ಡಾಕ್ಟರ್ ಸುಧಾ ಮೂರ್ತಿ ಇನ್ಫೋ ಮಹಿಳಾ ಕಾಲೇಜಿನ ಈ ಕಾರ್ಯಕ್ರಮ ನಮ್ಮ ಶ್ರೀ ಮಠದಲ್ಲಿ ನಡೆದದ್ದು ಮತ್ತು ನೂರಾರು ವಿದ್ಯಾರ್ಥಿಗಳು ಭಾಗಿಯಾದದ್ದು ನೋಡಿ ಖುಷಿಯಾಯಿತು ಎಂದರು
ಪ್ರಾಸ್ತವಿಕವಾಗಿ ಮಾತನಾಡಿದ ಕಾಲೇಜಿನ ಅರ್ಥಶಾಸ್ತ್ರದ ಅರ್ಥಶಾಸ್ತ್ರದ ಉಪನ್ಯಾಸಕರಾದ ಮಾರುತಿ. ಎಸ್ ಅವರು ಮಾತನಾಡಿ ಶ್ರೀ ಮಠದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗುರುಗಳ ಮುಂದೆ ಮಾತನಾಡಲು ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ ಧನ್ಯತಾ ಭಾವ ಮೂಡಿಸಿತು ಎಂದರು ಈ ಶಿಬಿರವು ನಮಗೆ ಕೇವಲ ಕೆಲಸ ಮಾಡಲು ಕಲಿಸಲಿಲ್ಲ ಸಮಾಜವನ್ನು ನೋಡುವ ದೃಷ್ಟಿ ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವ ಮತ್ತು ಆರೋಗ್ಯ ಮಾನವೀಯ ಮೌಲ್ಯಗಳನ್ನು ಬಿತ್ತಿತು. ಎಂದರು ಕೊನೆಗೆ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥಾಪಕರಾದ AEE ಶ್ರೀ ಕೆಂಚಪ್ಪ ಬಾವಿಮನಿಯವರು ಮಾತನಾಡಿ ಹೆಣ್ಣು ಮಕ್ಕಳ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಏಕ ಉದ್ದೇಶದಿಂದ ಪ್ರಾರಂಭವಾದ ಈ ಕಾಲೇಜು ಇವತ್ತು ಎಲ್ಲರ ಸಹಕಾರದಿಂದ ಹಿರಿಯರ ಆಶೀರ್ವಾದದಿಂದ ಅತಿ ಹೆಚ್ಚು ವಿದ್ಯಾರ್ಥಿನಿಯರು ಕಲಿಯುವ ಸಂಸ್ಥೆಯಾಗಿದ್ದು ವಯಕ್ತಿಕವಾಗಿ ಖುಷಿ ತಂದಿದೆ ಡಾ. ಸುಧಾ ಮೂರ್ತಿಯವರ ಆದರ್ಶ ಸರಳತೆ ಸೇವಾಮನೋಭಾವನೆಯಂತಹ ಗುಣಗಳನ್ನು ನೀವೆಲ್ಲರೂ ಅಳವಡಿಸಿಕೊಂಡು ಹೆತ್ತವರಿಗೆ ಮತ್ತು ಸಂಸ್ಥೆಗೆ ಕೀರ್ತಿ ತರುವಂತರಾಗಿ ಎಂದು ಭಾವನಾತ್ಮಕವಾಗಿ ಹೇಳಿದರು ಎನ್ಎಸ್ಎಸ್ ಶಿಬಿರಾರ್ಥಿ ಕಿತ್ತೂರು ರಾಣಿ ಚೆನ್ನಮ್ಮ ತಂಡದವರು ನಿರೂಪಿಸಿದರು ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಅರ್ಪಿತ ಕೆ ಬಾವಿಮನಿ ಆಡಳಿತ ಅಧಿಕಾರಿಗಳಾದ ವಿನೋದ್ ಗುಡಿಮನಿ ಪ್ರಾಚಾರ್ಯರಾದ ಶ್ರೀ ರಮೇಶ ವೆಂಕಟಪುರ ಉಪಸ್ಥಿತರಿದ್ದರು ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿನಿಯರು ಸಿಬ್ಬಂದಿ ವರ್ಗದವರು ಮತ್ತು ಗ್ರಾಮಸ್ಥರು ಹಾಜರಿದ್ದರು.


