ಲಿಂಗಸಗೂರು : ಡಿ.12 :- ತಾಲ್ಲೂಕಿನ ಬಸವಸಾಗರ ಡ್ಯಾಮ್ ಎಂದೇ ಖ್ಯಾತಿ ಪಡೆದಿದ್ದು, ಡ್ಯಾಮ್ ಸಮೀಪವಿರುವ ಹಿರೇಜಾವುರ ಕ್ರಾಸ್ ನಲ್ಲಿ ನೂತನವಾಗಿ, ಬಸವಸಾಗರ ಡ್ಯಾಮ್ ಮಾರ್ಗವಾಗಿ ಲಿಂಗಸಗೂರು, ಸಿಂಧನೂರು, ಗಂಗಾವತಿ, ಹೋಸಪೇಟೆ, ಹರಿಹರಿ, ಶಿವಮೊಗ್ಗ, ಭದ್ರಾವತಿ ಗೆ ನೂತನ ಮಾರ್ಗವನ್ನು ಪ್ರಾರಂಭ ಮಾಡಲಾಗಿದ್ದು ಈ ಭಾಗದ ಸುತ್ತಮುತ್ತಲಿನ ಪ್ರಯಾಣಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಗ್ಯಾರಂಟಿ ಯೋಜನೆಗಳ ಸದಸ್ಯರಾದ ಗದ್ದೆನಗೌಡ ಪಾಟೀಲ್ ಹೇಳಿದರು.
ತಾಲೂಕಿನ ಬಸವಸಾಗರ ಡ್ಯಾಮ್ ನಿಂದ ( ಜಾವೂರ್ ಕ್ರಾಸ್ ) ಆರಂಭಿಸಲಾದ ಬಸವಸಾಗರ ದಿಂದ ಭದ್ರಾವತಿಗೆ ತೆರಳುವ ನೂತನ ಬಸ್ಸಿಗೆ ಗ್ರಾಮಸ್ಥರೊಂದಿಗೆ ಪೂಜೆ ಸಲ್ಲಿಸಿ ಮಾತನಾಡುತ್ತಾ

ಉತ್ತರ ಕರ್ನಾಟಕ ರೈತರ ಜೀವ ನಾಡಿಯಾದ ಕೃಷ್ಣಾ ನದಿಯ ಅಡಿಯಲ್ಲಿ ಬರುವ ಬಸವಸಾಗರ ಡ್ಯಾಮ್ ( ಆಣೆಕಟ್ಟು ) ನ ಮುಂಭಾಗದಲ್ಲಿ ಈ ಹಿಂದಿನ ಮಾಜಿ ಶಾಸಕರಾದ ಡಿ ಎಸ್ ಹೂಲಗೇರಿ ಅವರ ಪರಿಶ್ರಮದಿಂದಾಗಿ ಜಗಜ್ಯೋತಿ ಬಸವೇಶ್ವರ ಕಂಚಿನ ಮೂರ್ತಿ ಸ್ಥಾಪನೆ ಮಾಡಲಾಗಿದ್ದು, ಈಗಾಗಲೇ ಬಸವಸಾಗರ ಡ್ಯಾಮ್ ( ಆಣೆಕಟ್ಟು ) ಎಂದು ಸರಕಾರವು ನಾಮಕರಣ ಮಾಡಲಾಗಿದ್ದು, ಇದು ಮೂರು ಜಿಲ್ಲೆಯ ವೃತ್ತವಾಗಿದ್ದು ಮುಂದಿನ ದಿನಗಳಲ್ಲಿ ಬಸವಸಾಗರ ಡ್ಯಾಮ್ ( ಆಣೆಕಟ್ಟು ) ಮುಂಭಾಗದಲ್ಲಿ ದೊಡ್ಡ ಪ್ರಮಾಣದ ಉದ್ಯಾನವನ ನಿರ್ಮಾಣ ಮಾಡಲು ಸರಕಾರದ ಮಟ್ಟದಲ್ಲಿ ಚರ್ಚೆ ನಡದಿದೆ, ಇಂದು ನೂತನ ಬಸ್ ಆರಂಭದಿಂದಾಗಿ ಸಿಂಧನೂರು ಗಂಗಾವತಿ ಹೊಸಪೇಟಿ ಹರಿಹರ ಶಿವಮೊಗ್ಗ ಭದ್ರಾವತಿಗಳಿಗೆ ತೆರಳುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದ್ದು ಅಲ್ಲದೆ ಈ ಭಾಗದ ಸಾರ್ವಜನಿಕರು , ಮಹಿಳೆಯರು, ವಿದ್ಯಾರ್ಥಿಗಳಿಗೆ, ಪ್ರವಾಸಿಗಳಿಗೆ ಅನುಕೂಲ ವಾಗುವ ಹಿನ್ನೆಲೆಯಿಂದ ಈ ಮಾರ್ಗವನ್ನು ಪ್ರಾರಂಭ ಮಾಡಲಾಗಿದೆ, ನೂತನವಾಗಿ ಆರಂಭಗೊಂಡ ಈ ಬಸ್ ಮುಂಜಾನೆ ಸಮಯ 8-30 ಕ್ಕೆ ಬಸವಸಾಗರ, ಆನೆಹೊಸೂರು ಲಿಂಗಸಗೂರು, ಸಿಂಧನೂರು, ಗಂಗಾವತಿ, ಹೋಸಪೇಟೆ, ಹರಿಹರಿ ಶಿವಮೊಗ್ಗ ಭದ್ರವತಿ ಗೆ ಬಸ್ ತಲುಪುತ್ತದೆ . ಕೆಲವು ದಿನಗಳ ಹಿಂದೆ ಲಿಂಗಸಗೂರು ಪಟ್ಟಣಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮ ಅದ್ಯಕ್ಷರಾದ ಅರುಣ್ ಕುಮಾರ ಪಾಟೀಲ್ ರವರು ಆಗಮಿಸಿದಾಗ, ನಮ್ಮ ಬಸವಸಾಗರ ಆಣೆಕಟ್ಟು ಇದೆ ಸರಿಯಾದ ಹೆಸರು ಬಳಿಕೆಯಾಗುತ್ತಿಲ್ಲ ಎಂದು ಅವರು ಗಮನಕ್ಕೆ ತರಲಾಗಿತ್ತು, ದಿನನಿತ್ಯ ಸಾರ್ವಜನಿಕರು ವಿದ್ಯಾರ್ಥಿಗಳು, ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣ ಮಾಡುತ್ತಿದ್ದಾರೆ, ಈ ಮಾರ್ಗವನ್ನು ಪ್ರಾರಂಭ ಮಾಡಲು ಮನವಿ‌ ಮಾಡಲಾಗಿತ್ತು ಅದಕ್ಕೆ ಸ್ಪಂದಿಸಿ ಸಾರಿಗೆ ಅಧಿಕಾರಿಗಳಿಗೆ ಬಸ್ ಮಾರ್ಗವನ್ನು ಪ್ರಾರಂಭ ಮಾಡಲು ಸೂಚಿಸಿದರು, ಬಸವಸಾಗರ ಡ್ಯಾಮ್ ( ಆಣೆಕಟ್ಟು ) ರೈತರ ಜೀವನಾಡಿಯಾಗಿದ್ದು ದಿನನಿತ್ಯ ಡ್ಯಾಮ್ ( ಆಣೆಕಟ್ಟು ) ನೋಡಲು ಪ್ರವಾಸಿಗರು ಆಗಮಿಸುತ್ತಿದ್ದಾರೆ, ಸಿಂಧನೂರು ಹಾಗೂ ಹೋಸಪೇಟೆ, ಸುಕ್ಷೇತ್ರ ಹುಲಿಗೇಮ್ಮ ದೇವಸ್ಥಾನ ಕ್ಕೆ ಹೋಗಲು ತೊಂದರೆ ಯಾಗುತ್ತಿತ್ತು, ಈ ಮಾರ್ಗವು ಅನುಕೂಲವಾಗಲಿದೆ
ರಾಜ್ಯ ಸರಕಾರದ ಶಕ್ತಿ ಯೋಜನೆಯ ಸೌಲಭ್ಯದಡಿಯಲ್ಲಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ, ರಾಜ್ಯದಲ್ಲಿ ಶಕ್ತಿ ಯೋಜನೆ ಯಶಸ್ವಿಯಾಗಿ ಈಗಾಗಲೇ 2,5 ವರ್ಷ ಪೂರೈಸಿದೆ,ಈ ಭಾಗವು ನೀರಾವರಿ ಪ್ರದೇಶವಾಗಿರುವುದರಿಂದ ನಿರಂತರವಾಗಿ ಸಿಂಧನೂರು ಹೋಗುವ ಜನರು ಹೆಚ್ಚಾಗಿ ಪ್ರಯಾಣ ಮಾಡುತ್ತಿದ್ದಾರೆ, ವಿದ್ಯಾರ್ಥಿಗಳು ಕಾಲೇಜಗೆ ತೆರಳಲು ಅನುಕೂಲ ವಾಗಿದ್ದು, ಬಸವಸಾಗರ ಡ್ಯಾಮ್ ( ಆಣೆಕಟ್ಟು ) ಹೆಸರು ಉಳಿಸುವ ನಮ್ಮೆಲ್ಲರ ಜವಾಬ್ದಾರಿಯಾಗಿದೆ , ಹೊಸ ಮಾರ್ಗದ ಜನರಿಗೆ ಜಾಗೃತಿ ಮಾಡಿಸಬೇಕು ಎಂದು ತಿಳಿಸಿದರು
ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ (ನಿ) ಜಿಲ್ಲಾಧಿಕಾರಿ ಚಂದ್ರಶೇಖರ್ ರವರಿಗೆ ಹಾಗೂ ಲಿಂಗಸಗೂರು ಘಟಕ ವ್ಯವಸ್ಥಾಪಕ ಪ್ರಕಾಶ ದೊಡ್ಡಮನಿ‌ ರವರಿಗೆ ಮಾರ್ಗ ಪ್ರಾರಂಭ ಮಾಡಿದಕ್ಕೆ ಅಭಿನಂದನೆಗಳು ಸಲ್ಲಿಸುತ್ತೆವೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಗೌಡಪ್ಪ ಕಂಬಳಿ, ಲಿಂಗಸಗೂರು ತಾಲ್ಲೂಕ ಪಂಚಾಯತ ಕೆಡಿಪಿ‌ ಸದಸ್ಯರಾದ ಶರಣಪ್ಪ ಕಟಗಿ, ಲಿಂಗಸಗೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಪದವೀಧರ ವಿಭಾಗ ಅದ್ಯಕ್ಷರಾದ ಪೂಲಪ್ಪ ಪವಾರ, ರೋಡಲಬಂಡಾ ಯುಕೆಪಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ನಾಗರಾಜ ರಬ್ಲರ್,
ಸಾರಿಗೆ ಇಲಾಖೆಯ ನಿರ್ವಾಹಕ ಮಾಹಾಂತೇಶ ಚಿತ್ರನಾಳ,
ಚಾಲಕ ಬಸವರಾಜ ಬೆಂಡೋಣಿ, ಮುಖಂಡರಾದ ಯಾಕೂಬ ಸಾಬ್, ಗಂಗಾಧರ ಮೇಟಿ, ರಾಮಣ್ಣ ವಂದಲಿ, ದಾವಲಸಾಬ ಹುಡೇದ, ಹುಸೇನಬಾಷ, ಸೇರಿದಂತೆ ಸುತ್ತಮುತ್ತಲಿನ
ಗ್ರಾಮಸ್ಥರು, ಗ್ರಾಮದ ಮುಖಂಡರು, ಹಲವಾರು ಮಹಿಳೆಯರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *