ಸಿಂಧನೂರು: ಇದೆ ಡಿ. 20, 21ರಂದು ಎರಡು ದಿನಗಳ ಕಾಲ ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಎಂದು ಸಿಂಧನೂರು ತಾಲೂಕು ದಲಿತ ಸಾಹಿತ್ಯ ಪರಿಷತ್ತ ಅಧ್ಯಕ್ಷ ಹಾಗೂ ಸಮ್ಮೇಳನದ ಸಂಯೋಜಕ
ಡಾ. ಹುಸೇನಪ್ಪ ಅಮರಾಪುರ ಹಾಗೂ ಪ್ರಧಾನ ಕಾರ್ಯದರ್ಶಿ ರಾಮಣ್ಣ ಹಿರೇಬೇರ್ಗಿ ರವರು ಜಂಟಿ ಸುದ್ದಿ ಗೋಷ್ಟಿ ಯಲ್ಲಿ ಮಾತನಾಡಿದ ಅವರು,

ದಲಿತ ಸಾಹಿತ್ಯ ಸಿರಿ ರಾಷ್ಟ್ರೀಯ ಪ್ರಶಸ್ತಿಗೆ ಹಿರಿಯ ಕವಿ ಹಾಗೂ ಹೋರಾಟಗಾರ ನರಸಿಂಹಪ್ಪ ರಾಮತ್ನಾಳ, ರಾಷ್ಟ್ರೀಯ ಪುಸ್ತಕ ಪ್ರಶಸ್ತಿಗೆ ಕಥೆಗಾರ ಅಮರೇಶ ಗಿಣಿವಾರ ಅವರ ಪೋಸ್ಟ್ ಆಫೀಸನಲ್ಲಿ ಅಕ್ಕನ ಜಡ್ಜಮೆಂಟ್ ಗಳು ಪ್ರಬಂಧ ಕೃತಿ ಆಯ್ಕೆಯಾಗಿರುತ್ತದೆ.

ಸಮ್ಮೇಳನದ ಕವಿಗೋಷ್ಠಿಗೆ ಡಾ.ಶರೀಫ್ ಹಸಮಕಲ್, ದುರ್ಗಪ್ಪ ಗುಡದೂರು ಮತ್ತು ವೆಂಕಟೇಶ್ ಬಕ್ಕನಟ್ಟಿ ಮೂರು ಜನ ಕವಿಗಳು ಆಯ್ಕೆಯಾಗಿರುತ್ತಾರೆ.

ಸಾಧಕರ ಸನ್ಮಾನಕ್ಕೆ ಅಂತರಾಷ್ಟ್ರೀಯ ಒಂಟಿ ಕೈ ಕ್ರಿಕೆಟ್ ಆಟಗಾರ ಸಣ್ಣ ಮಾರೇಶ ಅರಳಹಳ್ಳಿ, ಎಂಬಿಬಿಎಸ್ ಪದವೀಧರ ಡಾ. ಗಣೇಶ್ ಕುಮಾರ ಮುನಿಸ್ವಾಮಿ, ತತ್ವಪದಕಾರ ಹಾಗೂ ನಾರಾಯಣಪ್ಪ ಮಾಡಸಿರವಾರ, ದಲಿತ ಮುಖಂಡ ಮಂಜುನಾಥ ಗಾಂಧಿನಗರ, ಹೋರಾಟಗಾರರಾದ ಬಿ.ಎನ್ ಯರದಿಹಾಳ, ಚಿತ್ರಕಲಾವಿದ ಡಾ.ಮಲ್ಲಿಕಾರ್ಜುನ ಕಮತಗಿ, ಉನ್ನತ ಶಿಕ್ಷಣವನ್ನು ಪಡೆದ ಡಾ. ಲಕ್ಷ್ಮಣ ಅಮರಾಪುರ, ಡಾ.ರಾಮಕೃಷ್ಣ ಭಂಡಾರಿ ಡಾ.ಶಾಮಣ್ಣ ಚಿಕ್ಕಭೇರಿಗಿ ಮೊದಲಾದವರು ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಆಗಿದೆ ಎಂದರು.

ಸಿಂಧನೂರಿನಿಂದ ಸಮ್ಮೇಳನಕ್ಕೆ ನೂರಕ್ಕಿಂತ ಅಧಿಕ ಜನ ಸಾಹಿತಿಗಳು, ಹೋರಾಟಗಾರರು, ಪ್ರಗತಿಪರ ಚಿಂತಕರು, ಬುದ್ದಿಜೀವಿಗಳು ಹಾಗೂ ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಒಪ್ಪುವವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *