ಬೆಳಗಾವಿಯಲ್ಲಿ ನಡೆಯುತ್ತಿರುವ ಎರಡನೇ ದಿನದ ಚಳಿಗಾಲದ ಅಧಿವೇಶನದಲ್ಲಿ ಸಿಂಧನೂರಿನಲ್ಲಿರುವ ತೋಟಗಾರಿಕೆ ಇಲಾಖೆ ಕಚೇರಿಗೆ ಹೊಂದಿಕೊಂಡಿರುವ 22 ಎಕರೆ ಜಮೀನಿನಲ್ಲಿ ತೋಟಗಾರಿಕೆ ವಿ.ವಿದ್ಯಾಲಯ ನಿರ್ಮಾಣ ಮಾಡಿ, ಸಾರ್ವಜನಿಕರಿಗೆ ನಡೆದಾಡಲು ಪಾರ್ಕ್ ನಿರ್ಮಾಣ ಮಾಡಿ, ತೋಟಗಾರಿಕೆ ಇಲಾಖೆಯ ಜಮೀನನ್ನು ಅಭಿವೃದ್ದಿ ಪಡಿಸಲು ಸಚಿವರಿಗೆ ಪ್ರಸ್ತಾವನೆಯನ್ನು ಎಂಎಲ್ಸಿ ಬಸನಗೌಡ ಬಾದರ್ಲಿ ಸಲ್ಲಿಸಿದರು.

ಈ ಕುರಿತು ಉತ್ತರ ನೀಡಿದ ಕೃಷಿ ಸಚಿವರು, 8 ಕೋಟಿ ರೂಪಾಯಿಯಲ್ಲಿ ನಡೆದಾಡುವ ಪಾರ್ಕ್ ಕುರಿತು ಕಾರ್ಯಕ್ಕೆ ಕೆಕೆಆರ್ ಡಿಬಿಗೆ ಸಲ್ಲಿಸಲಾಗಿದೆ. ಅದನ್ನ ಮಾಡಬಹದು. ಆದರೆ ವಿ.ವಿದ್ಯಾಲಯ ಸಂಬಂಧ ಪ್ರಾರಂಭಕ್ಕೆ ಯಾವುದೇ ಪ್ರಸ್ತಪವು ಈಗ ಇಲ್ಲ ಮುಂದೆ ಬಂದಾಗ ನೋಡೋಣ ಎಂದರು.

ಸೋಮವಾರವು ಕೂಡಾ ಸಿಂಧನೂರಿನ ಹೃದಯ ಭಾಗದಲ್ಲಿರುವ ಆಹಾರ ನಾಗರಿಕ ಸರಬರಾಜು ಇಲಾಖೆಗೆ ಸಂಬಂಧಿಸಿದ ಒಟ್ಟು 1ಎಕರೆ 1 ಗುಂಟೆ ಜಾಗದಲ್ಲಿರುವ ಗೋದಾಮು ಸಿತಿಲ ಅವಸ್ಥೆಯಲ್ಲಿದೆ. ಈ ಸದರಿ ಜಾಗವನ್ನು ಸಂರಕ್ಷಣೆ ಮಾಡಿ, ಸರ್ಕಾರದ ಇನ್ನಿತರೆ ಅಗತ್ಯ ವೈಜ್ಞಾನಿಕ ಕಟ್ಟಡಗಳ ನಿರ್ಮಾಣಕ್ಕಾಗಿ ಬಳಸಿಕೊಳ್ಳಲು ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಸಚಿವರಲ್ಲಿ ಗಮನ ಸೆಳೆದರು.

Leave a Reply

Your email address will not be published. Required fields are marked *