ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಸಿಂಧನೂರು ವಲಯದಲ್ಲಿ ಖಾಲಿ ಇರುವ 1 ಅಂಗನವಾಡಿ ಕಾರ್ಯಕರ್ತೆ, 7 ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, 7 ಜನವರಿ 2026 ರೊಳಗೆ ಅರ್ಜಿ ಸಲ್ಲಿಸಲು ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಲಿಂಗನಗೌಡ ಪತ್ರಿಕೆ ಪ್ರಕಟಣೆ ಹೊರಡಿಸಿದ್ದಾರೆ.

ತಾಲೂಕಿನ ಸಿಂಧನೂರು ವಲಯದ ಸತ್ಯವತಿಕ್ಯಾಂಪಿನ 1 ಅಂಗನವಾಡಿ ಕಾರ್ಯಕರ್ತೆ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಪರಿಶಿಷ್ಟ ಜಾತಿಯ ಅಭ್ಯರ್ಥಿ ಅರ್ಜಿ ಸಲ್ಲಿಸಬಹುದು. ಸತ್ಯವತಿ ಕ್ಯಾಂಪ್, ಸಿದ್ರಾಂಪೂರ ಅಂಗನವಾಡಿ ಸಹಾಯಕಿಯರ ಹುದ್ದೆ ಖಾಲಿ ಇದ್ದು, ಪರಿಶಿಷ್ಟ ಜಾತಿಯ ಅಭ್ಯರ್ಥಿ ಅರ್ಜಿ ಸಲ್ಲಿಸಬಹುದು.
ಈರಣ್ಣ ಕ್ಯಾಂಪ್, ಇಂದಿರಾ ಕಾಲೋನಿ ವಾರ್ಡ್ ನಂ 12, ಸಿಂಗಾಪೂರ, ಗಾಂಧಿನಗರ, ಅಂಭಾನಗರ ಕ್ಯಾಂಪ್ ನಲ್ಲಿ ಅಂಗನವಾಡಿ ಸಹಾಯಕಿಯರ ಹುದ್ದೆ ಖಾಲಿ ಇದ್ದು, ಇತರೆ ಜಾತಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 2026 ಜನವರಿ 7 ರವರೆಗೆ ಅರ್ಜಿ ಸಲ್ಲಿಸಬಹದು. ಹೆಚ್ಚಿನ ಮಾಹಿತಿಗಾಗಿ ಇಲಾಖೆ ವೆಬ್ ಸೈಟ್ ನೋಡಬಹುದು ಎಂದು ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಲಿಂಗನಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *