ಸಿಂಧನೂರು— ಕೊಡಗು ಜಿಲ್ಲೆಯಲ್ಲಿ ನಿರಂತರ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹಲವಾರು ಜನಪರ ಸಮಾಜಪರ ಕಾರ್ಯಗಳನ್ನು ಮಾಡುತ್ತಾ ಮನೆ ಮನೆ ಮಾತಾಗಿರುವ ಅವಿನಾ ಸ್ ಡ್ರೀಮ್ಸ್ ವರ್ಲ್ಡ್ ನ ಸಂಸ್ಥಾಪಕರಾದ ಅಮೀನಾ ಎಂ. ಎಂ. ಚನ್ನಂಕೊಲ್ಲಿ ಇವರನ್ನು ಸಿಂಧನೂರಿನ ಕಾರುಣ್ಯಾಶ್ರಮದ ಕೊಡಗು ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿಗಳನ್ನಾಗಿ ಇಂದು ನೇಮಿಸಲಾಗಿದೆ ಎಂದು ಕಾರುಣ್ಯ ಸಂಸ್ಥೆಯ ಸಂಸ್ಥಾಪಕರಾದ ಅಮರಯ್ಯ ಸ್ವಾಮಿ ಹಿರೇಮಠ ಹರೇಟನೂರು ಇವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಇವರ ನಿರಂತರ ಸಮಾಜ ಸೇವೆ ಮತ್ತು ಅನಾಥರ ಬಗ್ಗೆ ಕಾಳಜಿ ವಹಿಸಿ ಆ ಭಾಗದಲ್ಲಿನ ಅನಾಥರಿಗೆ ಕಾರುಣ್ಯ ಆಶ್ರಮದಲ್ಲಿ ಆಶ್ರಯ ಕೊಡಿಸಿ ಕಾರುಣ್ಯ ಆಶ್ರಮದ ಪ್ರತಿಯೊಂದು ಸೇವೆಯಲ್ಲಿ ಭಾಗಿಯಾಗುತ್ತೇನೆ ಎನ್ನುವ ಪ್ರಾಮಾಣಿಕ ನುಡಿಗಳನ್ನಾಧರಿಸಿ ಅವರನ್ನು ಕೊಡಗು ಜಿಲ್ಲೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ ಎಂದು ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ ಅವರು ಪತ್ರಿಕಾ ಬಳಗಕ್ಕೆ ಮಾಹಿತಿ ನೀಡಿದ್ದಾರೆ
