ಸಿಂಧನೂರು. –
ತಾಲ್ಲೂಕಿನ ಗೋಮರ್ಸಿ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಂಕೇತವಾದ ಹಜರತ್ ಮೀರಾಂ ಸೈಯದ್ ಶಾಹ ಶಂಶುದ್ದೀನ್ ಖಾದ್ರಿ ಅವರ ಉರುಸು ಸೋಮವಾರ ಅದ್ದೂರಿಯಾಗಿ ನಡೆಯಿತು.
ಉರುಸಿನ ಪ್ರಯುಕ್ತ ಧ್ವಜಾರೋಹಣ ನೆರವೇರಿಸುವ ಕಾರ್ಯಕ್ರಮ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಳಗಿನ ಜಾವ ೫ಗಂಟೆಯಿಂದ ಸೈಯದ್ ಖಾಸೀಂ ಖಾದ್ರಿ ಉರ್ಪ್ ಸರ್ಕಾರ್ ಪಾಷಾ ಸಾಹೇಬ್ ನೇತೃತ್ವದಲ್ಲಿ ಗಂಧ ಮೆರವಣಿಗೆ ನಡೆಯಿತು. ಬಳಿಕ ಧಾರ್ಮಿಕ ವಿಧಾನಗಳ ಪ್ರಕಾರ ಪೂಜಾ-ಪ್ರಾರ್ಥನೆಗಳು ನಡೆದವು. ಗೋಮರ್ಸಿ ಸೇರಿ ಸುತ್ತಮುತ್ತಲಿನ ಹಳ್ಳಿಗಳಿಂದ ಎಲ್ಲಾ ಜಾತಿ ಜನಾಂಗದ ಜನರು ದರ್ಗಾದಲ್ಲಿ ಸಕ್ಕರೆ ಒದಿಸಿ, ಭಕ್ತಿ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಸೈಯದ್ ಇಸ್ಮಾಯಿಲ್ ಖಾದ್ರಿ ಅತರ್‌ಬಾಬಾ ಜಾಗೀರ್‌ದಾರ್ ಗೋಮರ್ಸಿ, ಸೈಯದ್ ಮೈನುದ್ದೀನ್ ಖಾದ್ರಿ ತೆಕ್ಕಲಕೋಟೆ, ಸೈಯದ್ ಷಾ ತಾಹೇರ್‌ಖಾದ್ರಿ ಜಂತಕಲ್, ಸೈಯದ್ ಹಾಜಂಖಾದ್ರಿ ಕಂಪ್ಲಿ, ಸೈಯದ್ ತುರಾಬ್ ಖಾದ್ರಿ ಕಂಪ್ಲಿ, ಸೈಯದ್ ಮತೀನ್ ಖಾದ್ರಿ ಕಂಪ್ಲಿ, ಖಾದರ್‌ಭಾಷಾ ತಾತನವರು ಗೋಮರ್ಸಿ, ಸೈಯದ್ ಸಜ್ಜಾದ್ ಖಾದ್ರಿ, ಸೈಯದ್ ಬಾಬಾ ಖಾದ್ರಿ, ಮುಖಂಡರಾದ ಸೈಯದ್ ಸಜ್ಜಾದ್‌ಖಾದ್ರಿ, ಸೈಯದ್ ಯುನೂಸ್‌ಪಾಷಾ ಖಾದ್ರಿ, ಮರೇಗೌಡ, ಬಸನಗೌಡ, ದೊಡ್ಡಬಸನಗೌಡ, ಶ್ರೀನಿವಾಸ, ಖಲೀಲ್‌ಪಾಷಾ, ಮಹ್ಮದ್‌ಸಾಬ್, ರಸೂಲ್‌ಸಾಬ್, ಬುಡ್ಡಾಸಾಬ್ ಮುಜಾವಾರ್, ಶಾಮೀದ್, ಶಾಹೀದ್ ಸೇರಿದಂತೆ ಮಾಡಶಿರವಾರ ಹಾಗೂ ಗೋಮರ್ಸಿ ಗ್ರಾ.ಪಂ. ಸದಸ್ಯರು, ಗ್ರಾಮಸ್ಥರು ಇತರರು ಇದ್ದರು. ಉರುಸಿನ ಅಂಗವಾಗಿ ರಾತ್ರಿ ಖವ್ವಾಲಿ ಕಾರ್ಯಕ್ರಮದಲ್ಲಿ ಭಕ್ತರ ಮನಸೂರೆಗೊಂಡಿತು.

Leave a Reply

Your email address will not be published. Required fields are marked *