ಮಾನ್ವಿ:ಪಟ್ಟಣದಲ್ಲಿ ಪ್ರಗತಿಪರ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಯೂನಿಯನ್ ತಾಲೂಕು ಘಟಕದಿಂದ ಶಾಸಕ ಹಂಪಯ್ಯನಾಯಕ ರವರಿಗೆ ರಾಜ್ಯ ಸಮಿತಿ ಸದಸ್ಯರಾದ ಸದಾನಂದ ಮನವಿ ಸಲ್ಲಿಸಿ ಮಾತನಾಡಿ ಮಾನ್ವಿ ಪಟ್ಟಣದಲ್ಲಿ 10 ಸಾವಿರ ಕ್ಕೂ ಹೆಚ್ಚು ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿದ್ದಾರೆ ಇವರುಗಳು .ಅಸಂಘಟಿತ ವಲಯದಲ್ಲಿ ಕೆಲಸ ನಿರ್ವಿಹಿಸುವ ಕಾರ್ಮಿಕರಾಗಿದ್ದಾರೆ ಹೆಚ್ಚಿನ ಕಾರ್ಮಿಕರು ವಾಸಮಾಡುವುದಕ್ಕೆ ಮನೆಗಳು ಇಲ್ಲದೆ ,ಮನೆ ಕಟ್ಟಿಕೊಳ್ಳುವುದಕ್ಕೆ ನಿವೇಶನ ಇಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಕೊಳೆಗೆರಿ ಪ್ರದೇಶಗಳಲ್ಲಿ ವಾಸಮಾಡುತ್ತಿದ್ದಾರೆ.ಇವರಿಗೆ ಕೂಲಿ ಹಾಗೂ ಕೆಲಸದ ಭದ್ರತೆಕೂಡ ಇಲ್ಲದೆ ಇರುವುದರಿಂದ ಇಂತಹ ಕಾರ್ಮಿಕರನ್ನು ಗುರುತಿಸಿ ಪಟ್ಟಣದಲ್ಲಿ ಸೂಕ್ತವಾದ ನಿವೇಶನವನ್ನು ನೀಡಿದಲ್ಲಿ ಅವರುಗಳು ಕೇಂದ್ರ ಮತ್ತು ರಾಜ್ಯಗಳಿಂದ ಜಾರಿಯಾಗುವ ಪ್ರಧಾನಮಂತ್ರಿ ಆವಾಸ್ ಯೋಜನೆ ಆಶ್ರಯ ಯೋಜನೆ,ಹಾಗೂ ಕೊಳಗೇರಿ ನಿರ್ಮೂಲನ ಅಭಿವೃದಿ ಮಂಡಳಿಗಳ ವಿವಿಧ ಯೋಜನೆಗಳಡಿಯಲ್ಲಿ ಮನೆಗಳನ್ನು ಕಟ್ಟಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದು ಒತ್ತಾಯಿಸಿದರು.
ತಾಲೂಕ ಉಪಾಧ್ಯಕ್ಷ ಅಮರೇಶ, ಸಂ.ಕಾ.ಕಾಶೀಂ, ರಮೇಶ ಕವಿತಾಳ, ಭೀಮಣ್ಣಕಲ್ಲೂರ, ರಮೇಶ ಸಿರವಾರ,ಸೀತಾರಾಮ,ಆದೆಪ್ಪ,ಮುತ್ತಯ್ಯ,ಬಾಲರಾಜ,ಮಹಮ್ಮದ್‌ಸಾಬ್, ಮಂಜುನಾಥ ಮುಂತಾದವರು ಇದ್ದರು.

