ತಾಳಿಕೋಟೆ :ಜ್ಞಾನ ಶಾರದೆ ಅಕಾಡೆಮಿಯ ಅಧ್ಯಕ್ಷರು ಮತ್ತು” ಭಾರತೀಯ ಶಿಕ್ಷಣ ರತ್ನ ರಾಷ್ಟ್ರ ಪ್ರಶಸ್ತಿ ” ವಿಜೇತರಾದ ಡಾ ಪ್ರವೀಣ್ ಬಿರಾದಾರ ಅವರಿಗೆ ಬೆಂಗಳೂರಿನ ಅನ್ವೇಷಣೆ ಸಾಂಸ್ಕೃತಿಕ ಪ್ರತಿಷ್ಠಾನದ” ಶಿಕ್ಷಣ ಸಿರಿ ರಾಜ್ಯೋತ್ಸವ ” ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮೂಲತ: ತಾಳಿಕೋಟಿ ತಾಲೂಕಿನ ಬೆಕಿನಾಳ ಗ್ರಾಮದ ದಿ. ಬಸನಗೌಡ ಹಾಗೂ ಶರಣಮ್ಮ ಬಿರಾದಾರ್ ದಂಪತಿಯ ಪುತ್ರರು ಮತ್ತು ದಿ ಭಾಗ್ಯಶ್ರೀ ಪ್ರವೀಣ್ ಬಿರಾದರ್ ಅವರ ತಂದೆ ಯಾದ ಇವರು, ಪ್ರಸ್ತುತ ಕಲ್ಬುರ್ಗಿ ನಿವಾಸಿಯಾಗಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಚಾಪು ಮೂಡಿಸಿರುವ ಇವರು, ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸೇವೆ ಪರಿಗಣಿಸಿ ” ಶಿಕ್ಷಣ ಸಿರಿ ” ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಇವರ ಶೈಕ್ಷಣಿಕ ಸೇವೆಗೆ ಇಂಟರ್ನ್ಯಾಷನಲ್ ಹ್ಯೂಮನ್ ಡೆವಲಪ್ಮೆಂಟ್ (USA) ವಿವಿ ಯಿಂದ ಡಾಕ್ಟರೇಟ್ ಪಡೆದಿದ್ದಾರೆ. ಇನ್ನೂ ಅನೇಕ ರಾಜ್ಯ, ರಾಷ್ಟ್ರಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳು ಇವರಿಗೆ ಲಭಿಸಿರುತ್ತದೆ.

ಪ್ರಸ್ತುತ ಕಲ್ಬುರ್ಗಿಯ ಜ್ಞಾನ ಶಾರದೆ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರ ಈ ಸಾಧನೆಗೆ ಬೆಕ್ಕಿನಾಳ ಗ್ರಾಮಸ್ಥರು, ಆಕ್ಸ್ಫರ್ಡ್ ಪಾಟೀಲ್ ಇಂಗ್ಲಿಷ್ ಮೀಡಿಯಂ ಶಾಲೆ ನಾಗರಭಟ್ಟ ಅಧ್ಯಕ್ಷರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಮತ್ತು ಬ್ರಿಲಿಯಂಟ್ ಇಂಗ್ಲಿಷ್ ಮೀಡಿಯಂ ಶಾಲೆ ಮೈಲೇಶ್ವರ ತಾಳಿಕೋಟಿ ಅಧ್ಯಕ್ಷರು ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *