ಲಿಂಗಸುಗೂರು : ಡಿ 08
ಕುಲತಿಲಕ ಶಿವಶರಣ ಮಾದರ ಚೆನ್ನಯ್ಯ ಜಯಂತಿ ಅಂಗವಾಗಿ ಡಿ.14 ರಂದು ಬೆಳಿಗ್ಗೆ 11.00 ಘಂಟೆಗೆ ಪ್ರತಿಭಾ ಪುರಸ್ಕಾರ ಹಾಗೂ ಅಭಿವಂದನಾ ಸಮಾರಂಭವನ್ನು ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನೌಕರರ ಸಂಘದ ಅಧ್ಯಕ್ಷ ಬಸವರಾಜ ಕೆ.ಇ.ಬಿ. ತಿಳಿಸಿದರು.
ಪಟ್ಟಣ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಸಮಾರಂಭದಲ್ಲಿ ಸಮಾಜದ ಗುರುಗಳು ಹಾಗೂ ಜನಪ್ರತಿನಿಧಿಗಳು ಅಧಿಕಾರಿಗಳು ಆಗಮಿಸಲ್ಲಿದ್ದಾರೆ.
ಎಸ್.ಎಸ್.ಎಲ್.ಸಿ, ಪಿಯುಸಿ ದ್ವೀತಿಯ ವರ್ಷದಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳು ಹಾಗೂ ಎ.ಬಿ.ಬಿ.ಎಸ್. ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು ಅರ್ಹ ವಿದ್ಯಾರ್ಥಿಗಳು ಡಿ.10ರ ಒಳಗಾಗಿ ಅಂಕಪಟ್ಟಿ ಜಾತಿ ಪ್ರಮಾಣ ಪತ್ರ ಅಗತ್ಯ ದಾಖಲೆಗಳನ್ನು ಬಸವಲಿಂಗಪ್ಪ ಉಪನ್ಯಾಸಕರು 9740338346 ಹಾಗೂ ಬಸವರಾಜ.ಕೆ 9449688895 ಇವರಲ್ಲಿ ಸಲ್ಲಿಸಿಬೇಕು. ಹೆಚ್ಚಿನ ಮಾಹಿತಿಗಾಗಿ ಸದರಿ ನಂಬರ್ ಗಳಿಗೆ ಕರೆ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಬಸವರಾಜ ಮ್ಯಾಗೇರಿ, ಗ್ಯಾನಪ್ಪ ಕಟ್ಟಿಮನಿ, ಕೆಂಚಪ್ಪ, ರಮೇಶ ಗೋಸ್ಲೆ, ಮೋಹನ್ ಗೋಸ್ಲೆ, ಅಮರೇಶ ಮ್ಯಾಗೇರಿ ಸೇರಿ ಇತರರು ಇದ್ದರು.

