ಅರಕೇರಾ ಡಿ 09 –
ಮಕ್ಕಳಲ್ಲಿ ಪ್ರತಿಭೆಯೆನ್ನುವುದು ಪಠ್ಯವಿಷಯವನ್ನು ಹೊರತು ಪಡಿಸಿಯು ಸೂಕ್ತವಾಗಿ ಅಡಗಿರಬಹುದು. ಅದು ಸಂಗೀತ, ಚಿತ್ರಕಲೆ, ನೃತ್ಯ, ಮಿಮಿಕ್ರಿ, ಭಾಷಣ, ಹೀಗೆ ಯಾವುದೇ ರೂಪದಲ್ಲಿಯೂ ಮಕ್ಕಳ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸುವುದೇ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ದೇಶ ಮತ್ತು ಸರ್ಕಾರದ ಘನ ಉದ್ದೇಶವಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ ಪೂಜಾರಿ ಹೇಳಿದ್ದರು.
ಸಮುದ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬಿ.ಗಣೇಕಲ್ ವಲಯದಲ್ಲಿ ಒಂದು ಪ್ರೌಢ ಶಾಲೆ, ನಾಲ್ಕು ಹಿರಿಯ ಪ್ರಾಥಮಿಕ, ಹತ್ತು ಕಿರಿಯ ಪ್ರಾಥಮಿಕ ಶಾಲೆ ಒಟ್ಟು 15 ಶಾಲೆಯ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದರು. ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಸಮಾರಂಭ ಅಧ್ಯಕ್ಷತೆಯನ್ನು ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಅಂಬಣ್ಣ ಗೌಡ ಅವರು ವಹಿಸಿದ್ದರು, ವೆಂಕೋಬ ನಾಯಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಶಿವಕುಮಾರ್ ಕರಿಗುಡ್ಡ, ಬಸವರಾಜ ಹುಲಿಗುಡ್ಡ ಎಸ್.ಡಿ.ಎಮ್.ಸಿ. ಸದಸ್ಯರು, ಮನೋಹರ್ ಶಾಸ್ತ್ರೀ ತಾಲೂಕು ಸಂಪನ್ಮೂಲ ವ್ಯಕ್ತಿಗಳು, ಬಸಯ್ಯ ಸಾತಲ್ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು,ಹನುಮಂತ ದೊಡ್ಡಮನಿ ಗ್ರಾಮ ಪಂಚಾಯಿತಿ ಸದಸ್ಯರು, ಅಕ್ಕನಾಗಮ್ಮ ನಿವೃತ್ತಿ ಶಿಕ್ಷಕಿ, ಸಿದ್ದಮ್ಮ ಮುಖ್ಯಗುರು, ಬಸವರಾಜ ಸ್ವಾಮಿ, ನಾಗರೆಡ್ಡಿ, ರಾಮನಗೌಡ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಶಿವಪ್ಪ, ಸವಿತಾ, ಹನುಮಂತ ಪೂಜಾರಿ, ವೆಂಕಟೇಶ ಯಾದವ್, ಮಹೇಶ್, ಪ್ರಿಯಾಂಕ, ವೆಂಕಟೇಶ, ಸದ್ದಾಂ ಹುಸೇನ್, ಮಣಿಕಂಠ, ಮಾಳಪ್ಪ, ದೇವರಾಜ್, ಸೇರಿದಂತೆ ಮುಂತಾದವರು ಇದ್ದರು.

