ಮಾನ್ವಿ: ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಹಾಗೂ ತಾಲೂಕು ಘಟಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ , ಹಾಗೂ ಮಾಧ್ಯಮ ಸಮಿತಿ, ಸೈಜನಾ ಫೌಂಡೇಶನ್ – ಭಾರತೀಯ ವೈದ್ಯಕೀಯ ಸಂಘ ಸಿರುಗುಪ್ಪ, ಸಂಯುಕ್ತಾಶ್ರಯದಲ್ಲಿ ನಡೆದ ನೆನಪಿಗೆ ವ್ಯಾಯಾಮ ಮತ್ತು ಸೋತು ಗೆದ್ದ ಸಾಧಕರಿವರು ವಿದ್ಯಾರ್ಥಿಗಳಿಗೆ ಪ್ರೇರಣಾ ತರಗತಿಯ ಕಾರ್ಯಕ್ರಮದಲ್ಲಿ ಡಾ. ಮಧುಸೂಧನ್ ಕಾರಿಗನೂರು ಶಸ್ತçವೈದ್ಯರು ಸಿರುಗುಪ್ಪ ಉಪನ್ಯಾಸ ನೀಡಿ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಶೇ 80 ರಷ್ಟು ಅಂಕಗಳನ್ನು ಪಡೆಯುವ ಸಾಮರ್ಥ್ಯ ಇದ್ದರು ಕೂಡ ಅವರು ಸರಿಯಾದ ರೀತಿಯಲ್ಲಿ ಓದುವ ಅಭ್ಯಾಸವನ್ನು ರೂಡಿಸಿಕೊಳ್ಳದೆ ಇರುವುದರಿಂದ ಅತ್ಯಂತ ಕಡಿಮೆ ಅಂಕಗಳನ್ನು ಪಡೆಯುತ್ತಿದ್ದಾರೆ ಪ್ರತಿ ವಿದ್ಯಾರ್ಥಿ ಕೂಡ ವೈಜ್ಞಾನಿಕ ಅಭ್ಯಾಸ ಕ್ರಮವನ್ನು ಅಳವಡಿಸಿಕೊಳ್ಳಬೇಕು ಪ್ರತಿ ಅಭ್ಯಾಸದ ನಡುವೆ ವಿಶ್ರಾಂತಿಯನ್ನು ಪಡೆದು ಕೊಂಡು ಅಸಮಯದಲ್ಲಿ ಇತರ ಚಟುವಟಿಕೆಗಳನ್ನು ,ನಡೆಸುವುದರಿಂದ ನಾವು ಅಭ್ಯಾಸ ನಡೆಸಿದ ವಿಷಯಗಳು ನೆನಪಿನಲ್ಲಿ ಉಳಿಯುವುದಕ್ಕೆ ಸಾಧ್ಯವಾಗುತ್ತದೆ ಕೇವಲ ಓದುವುದರ ಜೋತೆಗೆ ಪುನರ ನಮನ ಹಾಗೂ ನಮ್ಮಲಿನ ಎಡ ಮೆದುಳನ್ನು ಬಳಸುವ ಕುರಿತು ವ್ಯಾಯಮ ಮಾಡಿದಲ್ಲಿ ಹೆಚ್ಚು ಸಮಯದವರೆಗೆ ವಿಷಯ ನೆನಪಿನಲ್ಲಿ ಉಳಿಯುವುದಕ್ಕೆ ಸಾಧ್ಯವಾಗುತ್ತದೆ. ಪರಿಕ್ಷೇ ಸಮಯದಲ್ಲಿ ಅತಂಕಕ್ಕೆ ಒಳಗಾಗದೆ ಶಾಂತ ರೀತಿಯಿಂದ ಉತ್ತರಗಳನ್ನು ಬರೆಯುವ ಮೂಲಕ ಹೆಚ್ಚು ಅಂಕಗಳನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಕ.ಸಾ.ಪ.ಗೌರವ ಕಾರ್ಯದರ್ಶಿಗಳಾದ ತಾಯಪ್ಪ ಬಿ.ಹೊಸೂರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯ ಕ್ಷೇತ್ರದ ಅಭಿವೃದ್ದಿಯ ಜೋತೆಗೆ ನಾಡಿನ ನೆಲ,ಜಲ,ಭಾಷೆ, ರಕ್ಷಣೆಗಾಗಿ ನಿರಂತರವಾಗಿ ಹೋರಾಟ ಮಾಡುತ್ತ ಬಂದಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗಾಗಿ ವಿವಿಧ ಶೈಕ್ಷಣಿಕ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದರಾದ ನರಸಿಂಹ ಮೂರ್ತಿ ಹಾಸ್ಯ ಪ್ರಸಂಗಗಳ ಮೂಲಕ ನಗೆಗಡಲಿನಲ್ಲಿ ತೇಲಿಸಿದರು. ಬಳ್ಳಾರಿಯ ವಿಜ್ಞಾನ ಶಿಕ್ಷಕರಾದ ಎಸ್.ಎಂ.ಹಿರೇಮಠ ವಿಜ್ಞಾನ ಗೀತೆಗಳನ್ನು ಹಾಡಿದರು. ಪಕ್ಷಿ ಪ್ರೇಮಿ ಸಲ್ಲಾವುದಿನ್ ಪಕ್ಷಿಗಳ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕೆ.ಪಿ.ಎಸ್.ವಿ.ಎಸ್.ಅಯುರ್ವೇದಿಕ್ ಮೆಡಿಕಲ್ ಕಾಲೇಜಿನ ಮತ್ತು ಆಸ್ಪತ್ರೆಯ ಪ್ರಾಚಾರ್ಯರಾದ ಡಾ.ಜೀವನೇಶ್ವರಯ್ಯ, ನೇತಾಜಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಕೆ.ವಿಜಯಲಕ್ಷಿ ತಾಲೂಕು ಕ.ಸಾ.ಪ.ಅಧ್ಯಕ್ಷರಾದ ಶರಣಬಸವ ನೀರಮಾನ್ವಿ, ಕೆ.ರಾಜರವಿವರ್ಮ, ಕೆ.ಇ. ನರಸಿಂಹ,ಅ.ಖಿ.ಭಾ.ವೀ.ಲಿ.ಮಹಾಸಭಾ ಮಾನ್ವಿ ತಾ.ಅಧ್ಯಕ್ಷರಾದ ಅರುಣ್ ಚಂದಾ ಹಾಗೂ ಮಾಧ್ಯಮ ಸಮಿತಿಯ ಅಧ್ಯಕ್ಷರಾದ ರಾಜಶೇಖರಸ್ವಾಮಿ , ಸಿದ್ದಾರಾಮಯ್ಯಸ್ವಾಮಿ,ಕಿಡಿಗಣಯ್ಯಸ್ವಾಮಿ,ಚನ್ನಬಸವಸ್ವಾಮಿ, ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ಮಾನ್ವಿ: ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಕೆ.ಪಿ.ಎಸ್.ವಿ.ಎಸ್.ಅಯುರ್ವೇದಿಕ್ ಮೆಡಿಕಲ್ ಕಾಲೇಜಿನ ಮತ್ತು ಆಸ್ಪತ್ರೆಯ ಪ್ರಾಚಾರ್ಯರಾದ ಡಾ.ಜೀವನೇಶ್ವರಯ್ಯ, ಉದ್ಘಾಟಿಸಿದರು.

Leave a Reply

Your email address will not be published. Required fields are marked *