ಸಿಂಧನೂರು : ತಾಲೂಕು ನ್ಯಾಯವಾದಿಗಳ ಸಂಘ ಸಿಂಧನೂರು ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ವಕೀಲರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೂರನೆಯ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಬಿ.ಬಿ ಜಕಾತಿ ರವರು ನ್ಯಾಯಾಧೀಶರ ನೇಮವಳಿಗಳನ್ನು ಪ್ರತಿಯೊಬ್ಬರು ಪಾಲಿಸಬೇಕು, ಕಾನೂನು ನೇಮದ ಅಡಿಯಲ್ಲಿ ಪ್ರತಿಯೊಬ್ಬರು ಕೆಲಸ ಮಾಡಬೇಕು, ಕಿರಿಯ ವಕೀಲರು ಹಿರಿಯರನ್ನು ಗೌರವಿಸುವ ಕೆಲಸ ಆದಾಗ ಮಾತ್ರ ಮತ್ತಷ್ಟು ಎತ್ತರ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದರು. ವಕೀಲರ ಸಂಘದ ತಾಲೂಕು ಅಧ್ಯಕ್ಷ ಕೆ.ಭೀಮನಗೌಡ ಮಾತನಾಡಿ ವಕೀಲರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ನಮ್ಮ ತಂಡದಿಂದ ಆಗುತ್ತದೆ, ನಮ್ಮನ್ನು ನಂಬಿ ಬಂದ ಕಕ್ಷಿದಾರರ ಪರ ನಾವು ನಿಲ್ಲಬೇಕು, ಅವರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಲಕ್ಷ್ಮಿಕಾಂತ್ ಜಾನಕಿರಾಮ,ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ರೂಪ ವಗ್ಗನವರ, ಹೆಚ್ಚುವರಿ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಸರಸ್ವತಿ, ಹೋಟೆಕರ್, ಸಂಘದ ಉಪಾಧ್ಯಕ್ಷ ಜಗದೀಶ, ಕೋಶ್ಯಾಧ್ಯಕ್ಷ ಶೇಖರಪ್ಪ ಗಡಾದ, ಜಂಟಿ ಕಾರ್ಯದರ್ಶಿ ಹೀನಾ ದೇಸಾಯಿ ಸಿಂಧನೂರು ತಾಲೂಕಿನ ಎಲ್ಲಾ ವಕೀಲರು ಹಾಗೂ ಕೋರ್ಟ್ನ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು

