ರಾಯಚೂರು ಡಿಸೆಂಬರ್ 05 (ಕರ್ನಾಟಕ ವಾರ್ತೆ): ಇಲ್ಲಿನ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯ ಠಾಣಾಗುಂದಿ ಮತ್ತು ಯಾದಗಿರಿ ರೈಲು ನಿಲ್ದಾಣಗಳ ಮಧ್ಯೆ ರೈಲ್ವೇ ಕಿ.ಮೀ ನಂ: 638/3-1ರಲ್ಲಿ 30 ರಿಂದ 35 ವಯೋಮಾನದ ಒಬ್ಬ ಅಪರಿಚಿತ ಪುರುಷನು ಯಾವುದೋ ಚಲಿಸುವ ರೈಲು ಗಾಡಿಯಿಂದ ಆಯಾತಪ್ಪಿ ಕೆಳಗಡೆ ಬಿದ್ದು ಗಾಯಗೊಂಡು ಆಕಸ್ಮಿಕವಾಗಿ ಮೃತಪಟ್ಟಿದ್ದು, ಠಾಣೆಯಲ್ಲಿ ಯು.ಡಿ.ಆರ್ ನಂ: 64/2025 ಯು/ಎಸ್ 194 ಬಿ.ಎನ್.ಎಸ್.ಎಸ್. ರಿತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪರಿಚಿತ ಗಂಡಸು ಸುಮಾರು 5.6 ಅಡಿ ಎತ್ತರ, ದುಂಡು ಮುಖ, ಉದ್ದನೆಯ ಮೂಗು, ಕಪ್ಪು ಕಣ್ಣುಗಳು, ತಲೆಯಲ್ಲಿ 3 ಇಂಚು ಕಪ್ಪು ಕೂದಲು, ಗಡ್ಡ ಮೀಸೆ ಬಿಟ್ಟಿರುತ್ತಾನೆ. ಸಾಧಾರಣ ಶರೀರ ಹೊಂದಿರುತ್ತಾನೆ.
ಒAದು ಕಂದು ಬಣ್ಣದ ಹೂವಿನ ಡಿಸೈನ್ ಇರುವ ರೆಡಿಮೇಡ್ ಶರ್ಟ, ಒಂದು ಹಸಿರು ಬಣ್ಣದ ಮಿಲ್ಟನ್ ಕಂಪನಿ ಚಡ್ಡಿ, ಒಂದು ನೀಲಿ ಬಣ್ಣದ ಜೀನ್ಸ್ ಪ್ಯಾಂಟು ಧರಿಸಿದ್ದಾನೆ.
ಮೃತದೇಹ ದೊರೆತ ಘಟನಾ ಸ್ಥಳದಲ್ಲಿ ಮೃತನ ವಾರಸುದಾರರು ಪತ್ತೆಯಾಗಿರುವುದಿಲ್ಲ. ಆದ್ದರಿಂದ ಮೃತನ ವಾರಸುದಾರರ ಪತ್ತೆ ಹಾಗೂ
ಪಿ.ಎಂ.ಇ. ಸಲುವಾಗಿ ಮೃತದೇಹವನ್ನು ಯಾದಗಿರಿ ಜಿಲ್ಲಾ ಸರಕಾರಿ ಯೀಮ್ಸ್ ಆಸ್ಪತ್ರೆಯ ಶೀತಲಶವಗಾರದಲ್ಲಿಟ್ಟಿರುತ್ತದೆ.
ಮೃತನ ವಾರಸುದಾರರು ಪತ್ತೆಯಾದಲ್ಲಿ ಅಥವಾ ಮೃತನ ಹೋಲಿಕೆಯ ಪುರುಷ ಕಾಣೆಯಾದ ಪ್ರಕರಣ ದಾಖಲಾಗಿದ್ದಲ್ಲಿ ರಾಯಚೂರು ರೈಲ್ವೇ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08532-231716 ಅಥವಾ ಮೊಬೈಲ್ ನಂಬರ್:9480802111 ಅಥವಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ: 080-2287129ಗೆ ಸಂಪರ್ಕ ಮಾಡಬಹುದಾಗಿದೆ ಎಂದು ರಾಯಚೂರು ರೈಲ್ವೆ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

