ಲಿಂಗಸಗೂರು ಡಿ 6 , ತಾಲೂಕಿನಲ್ಲಿ ಈಗಾಗಲೇ ಕಳೆದ 12 ದಿನಗಳಿಂದ ತಾಲೂಕಿನ ಎಲ್ಲಾ ಸಂಘಟನೆಗಳ ನೆತೃತ್ವದಲ್ಲಿ ಲಿಂಗಸಗೂರಿನ ಉಪ ಕೃಷಿ ನಿರ್ದೆಶಕರ ಇಲಾಖೆ-2 ಅನ್ನು ಲಿಂಗಸಗೂರಿನಿಂದ ಸಿಂಧನೂರು ತಾಲೂಕ ಸ್ಥಳಾಂತರಗೊಳಿಸ ಬಾರದೆಂದು ವಿರೋಧಿಸಿ ಇಲ್ಲಿಯವೆರೆಗೆ ಹೊರಾಟ ಮಾಡುತ್ತಿದ್ದೇವೆ. ಇಲ್ಲಿಯವೆರೆಗೆ ಸರ್ಕಾರದಿಂದ ಯಾವುದೇ ಸಂದೇಶ ಬಾರದೆ ಇರುವ ಕಾರಣ ಕೃಷಿ ಇಲಾಖೆಯ ಸ್ಥಳಾಂತರವನ್ನು ವಿರೋಧಿಸಿ ಉಪವಾಸ ಸತ್ಯಗ್ರಹದ ಹೆಜ್ಜೆ ಇಡುತಿದ್ದೇವೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶಿವಪುತ್ರ ನಂದಿಹಾಳ್ ಸಹಾಯಕ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದರು .
ದಿನಾಂಕ: 06-12-2025 ರ ನಾಳೆಯಿಂದ ಲಿಂಗಸಗೂರು ಅಭಿವೃದ್ಧಿ ಸಮೀತಿಗೆ ಬೆಂಬಲವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ರಾಯಚೂರು ಜಿಲ್ಲಾ ಘಟಕದ ನಮ್ಮ ಕಾರ್ಯಕರ್ತರು ಉಪವಾಸ ಸತ್ಯಗ್ರಹ ಮಾಡುವ ಮೂಲಕ ಬೆಂಬಲ ಸೂಚಿಸುತ್ತಿದ್ದಾರೆ , ಈ ಉಪವಾಸ ಸತ್ಯಾಗ್ರಹದಲ್ಲಿ ನಮ್ಮ ಕಾರ್ಯಕರ್ತರಿಗೆ ಏನಾದರೂ ತೊಂದರೆ ಉಂಟಾದರೆ ಇದಕ್ಕೆ ಸರಕಾರವೇ ನೇರ ಹೊಣೆಯಾಗುತ್ತದೆಂದು ತಿಳಿಸಿದರು . ಈ ಸಂದರ್ಭದಲ್ಲಿ ಶಿವಪುತ್ರ ಗೌಡ ನಂದಿಹಾಳ್ , ವಿಜಯ್ ಕುಮಾರ್ ಪೋಳ್ , ಬಸವರಾಜ್ , ಸೇರಿದಂತೆ ಇತರರು ಇದ್ದರು .

