ದೇವದುರ್ಗ ತಾಲೂಕಿನ ಗಬ್ಬೂರು ವಿದ್ಯಾಜ್ಯೋತಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಇತ್ತೀಚಿಗೆ ಮನವಿ ತಾಲೂಕಿನ ಬಲ್ಲಟಗಿ ಬಸವೇಶ್ವರ ಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಜಂಪ್ ರೋಪ್ ಸ್ಪರ್ಧೆಯಲ್ಲಿ ಭಾಗವಹಿಸಿದ 25 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಬಂಗಾರದ ಪದಕ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಾದ ಭವಾನಿ ಅಗ್ರಹಾರ, ಶ್ರಾವಣಿ ಮಾಡೇರಿ, ಹರ್ಷಿತ ಬೇವಿನಬೆಂಚಿ, ಶಾಂತಲಾ ನಾಗಡದಿನ್ನಿ, ರಾಜೇಶ್ವರಿ ಖಾನಾಪುರ, ವಿಕಾಸ್ ಕಡದಿನ್ನಿ, ವಿನೋದ್ ಶಹಪುರ, ವಿನಯ್ ಕುಮಾರ್ ಬೇವಿನಬೆಂಚಿ, ನವ್ಯ ಗುತ್ತೇದಾರ್ ಕೊಂಗಂಡಿ, ಅನುಷ್ಕಾ ಪಾಣಿ ರಾಮದುರ್ಗ, ಜ್ಯೋತಿ ಶಕ್ತಿನಗರ, ಬಿ.ಆರ್ ಮಲ್ಲಿಕಾರ್ಜುನ್ , ಬಿ.ತರುಣ್
ಕುಮಾರ್ ಸುರಪುರ, ಮಲ್ಲಿಕಾರ್ಜುನ್ ಎನ್. ಹೆಚ್.ತಿಮ್ಮಾಪುರ್, ಹನುಮಂತ ಸುರಪುರ ಹಾಗೂ 14 ವರ್ಷದ ಒಳಗಿನ ಮಕ್ಕಳಾದ ಬಿ.ಶಶಾಂಕ್ ಗಬ್ಬೂರು , ಬಿಂದುಶ್ರೀ ಹಾಲುಗೇರಾ, ಶ್ರೀಕಾಂತ್ ಗಟ್ಟೂರು, ಶ್ರವಂತಿ ಮಾಡಗೇರ, ವಿಷ್ಣು ಯಾದವ್ ಗಟ್ಟೂರು, ಮೊಹಮ್ಮದ್ ಸುಲೇಖ ಗಟ್ಟೂರು, ಸೃಜನಕುಮಾರ್ ಹೊಸಮನಿ ಮಲದಕಲ್, ಶಶಾಂಕ್ ಎನ್. ಗಣೇಕಲ್, ಶ್ರೇಯಸ್ ಗೋಪಾಳಾಪುರ, ಜಿ.ಭರತ್ ಗಬ್ಬರು ಈ ಎಲ್ಲಾ ಮಕ್ಕಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಮುಖ್ಯಸ್ಥ ಚನ್ನಪ್ಪ ಬಿ ಹಾಗೂ ಕಾರ್ಯದರ್ಶಿ ವಾಣಿ ಚನ್ನಪ್ಪ ಬಿ ಮುಖ್ಯ ಗುರುಗಳಾದ ಬಸವಲಿಂಗಪ್ಪ ಖಾನಾಪುರ ದೈಹಿಕ ಶಿಕ್ಷಣ ಶಿಕ್ಷಕ ಅಂಬರೀಶ್ ಚೌವ್ಹಾಣ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಮಕ್ಕಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

