ಮಾನ್ವಿ: ಪಟ್ಟಣದ ಲೊಯೋಲ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ‘ಜಾನಪದ ಜಾತ್ರೆ ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಚಾರ್ಯರಾದ ಫಾ.ವಿನೋದ್ ಪೌಲ್ ಚಾಲನೆ ನೀಡಿ ಮಾತನಾಡಿ ಜನಪದರ ಮೌಖಿಕ ಸಾಹಿತ್ಯ ಇಂದಿಗೂ ಕೂಡ ಗ್ರಾಮೀಣರಲ್ಲಿ ಜೀವಂತವಾಗಿ ಉಳಿದಿರುವುದಕ್ಕೆ ಅವರ ಜೀವನ, ಪ್ರೀತಿ, ನಡೆ, ನುಡಿ, ತ್ಯಾಗ, ಬಲಿದಾನ ಆದರ್ಶ ಪ್ರಾಯವಾಗಿದೆ.ಹಾಗೂ ಇಂದಿನ ಅಧುನಿಕ ಕಾಲದಲ್ಲಿಯು ಕೂಡ ದಿನನಿತ್ಯದ ಚಟುವಟಿಕೆಗಳು, ಕೌಟುಂಬಿಕ ಸಂಬಂಧಗಳು, ದೇವರುಗಳ ಉಪಾಸನೆ ಜಗತ್ತಿಗೆ ಮಾದರಿಯಾಗಿವೆ. ಜನಪದರು ಅಕ್ಷರ ಲೋಕದ ಬಗ್ಗೆ ಅರಿವಿರದ ನಕ್ಷತ್ರಗಳಾಗಿ ಬೆಳಗುತ್ತಿದ್ದಾರೆ ಎಂದು ತಿಳಿಸಿದರು.
ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಕಾಲೇಜಿನ ಉಪನ್ಯಾಸಕರಾದ ಭಾಗ್ಯ ಮಾತನಾಡಿ ನಮ್ಮ ಜನಪದರ ಆಚರಣೆಗಳು ಮತ್ತು ಅವರ ಸಂಸ್ಕೃತಿಗಳನ್ನು ಕಾಲೇಜು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ‘ಜಾನಪದ ಜಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜನಪದ ಕಲೆಗಳು ನಶಿಸಬಾರದು ಮತ್ತು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ತಿಳಿಸಿದರು.
ಲೊಯೋಲ ಕಾಲೇಜಿನ ಎಲ್ಲಾ ವಿಭಾಗಗಳ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಜನಪದ ಗೀತೆಗಳನ್ನು ಹಾಡಿ, ಗ್ರಾಮೀಣ ಭಾಗದ ಉಡುಗೆ ತೋಡುಗೆಗಳನ್ನು ಧರಿಸಿ ಜಾನಪದ ಹಾಡುಗಳಿಗೆ ಉತ್ಸಾಹದಿಂದ ನೃತ್ಯ ಪ್ರದರ್ಶನ ನೀಡಿ ಗಮನ ಸೇಳೆದರು ಕಾಲೇಜಿನ ಒಳಾಂಗಣದಲ್ಲಿ ಗ್ರಾಮೀಣ ಸೊಗಡನ್ನು ಪ್ರತಿಬಿಂಬಿಸುವ ಮಾದರಿಗಳನ್ನು ಪ್ರದರ್ಶಸಲಾಯಿತು. ಹಾಗೂ ಪ್ರತಿಕೃತಿಗಳನ್ನು ಸೃಷ್ಟಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪದವಿಯ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು ಹಾಗೂ ಕಾಲೇಜಿನ ಅಧಿಕೃತ ಮಾಧ್ಯಮ ತಂಡದವರ ಟೀ ಶರ್ಟಗಳನ್ನು ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಲೊಯೋಲ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿಗಳು .ಗುರುಗಳು ಮತ್ತು ಕನ್ಯಾಸ್ತ್ರೀಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *