ಮಾನ್ವಿ: ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಡಿ.5 ರಂದು ಬೆ.10ಕ್ಕೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ , ಹಾಗೂ ಮಾಧ್ಯಮ ಸಮಿತಿ, ಸೈಜನಾ ಫೌಂಡೇಶನ್ – ಭಾರತೀಯ ವೈದ್ಯಕೀಯ ಸಂಘ ಸಿರುಗುಪ್ಪ, ಸಂಯುಕ್ತಾಶ್ರಯದಲ್ಲಿ ನೆನಪಿಗೆ ವ್ಯಾಯಾಮ ಮತ್ತು ಸೋತು ಗೆದ್ದ ಸಾಧಕರಿವರು ವಿದ್ಯಾರ್ಥಿಗಳಿಗೆ ಪ್ರೇರಣಾ ತರಗತಿಯ ಕಾರ್ಯಕ್ರಮದ ದಿವ್ಯಾಸಾನಿಧ್ಯವನ್ನು ಕಲ್ಮಠ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದು ಡಾ. ಮಧುಸೂಧನ್ ಕಾರಿಗನೂರು ಶಸ್ತçವೈದ್ಯರು ಸಿರುಗುಪ್ಪ, ನರಸಿಂಹ ಮೂರ್ತಿ ಹಾಸ್ಯ ಕಲಾವಿದರು, ಎಸ್.ಎಂ.ಹಿರೇಮಠ ವಿಜ್ಞಾನ ಶಿಕ್ಷಕರು ಬಳ್ಳಾರಿ, ಪಕ್ಷಿಗಳ ಕುರಿತು ಸಲ್ಲಾವುದಿನ್ ಪಕ್ಷಿ ಪ್ರೇಮಿ ರವರು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ.ಕಾರ್ಯಕ್ರಮವನ್ನು ಕೆ.ಪಿ.ಎಸ್.ವಿ.ಎಸ್.ಅಯುರ್ವೇದಿಕ್ ಮೆಡಿಕಲ್ ಕಾಲೇಜಿನ ಮತ್ತು ಆಸ್ಪತ್ರೆಯ ಪ್ರಾಚಾರ್ಯರಾದ ಡಾ.ಜೀವನೇಶ್ವರಯ್ಯ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ನೇತಾಜಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಕೆ ವಿಜಯಲಕ್ಷ್ಮಿ ವಹಿಸಲಿದ್ದಾರೆ. ಪ್ರಾಸ್ಥವಿಕ ನುಡಿ ತಾಯಪ್ಪ ಬಿ.ಹೊಸುರುರವರಿಂದ ಮುಖ್ಯ ಅತಿಥಿಗಳಾಗಿ ತಾಲೂಕು ಕ.ಸಾ.ಪ.ಅಧ್ಯಕ್ಷರಾದ ಶರಣಬಸವ ನೀರಮಾನ್ವಿ, ಕೆ.ರಾಜ ರವಿವರ್ಮ, ಅ.ಖಿ.ಭಾ.ವೀ.ಲಿಂ.ಮಹಾಸಭಾ ಮಾನ್ವಿ ತಾ.ಅಧ್ಯಕ್ಷರಾದ ಅರುಣ್ ಚಂದಾ ಹಾಗೂ ಮಾಧ್ಯಮ ಸಮಿತಿಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಅ.ಖಿ.ಭಾ.ವೀ.ಲಿಂ.ಮಹಾಸಭಾ ಮಾಧ್ಯಮ ಸಮಿತಿಯ ತಾ.ಅಧ್ಯಕ್ಷರಾದ ರಾಜಶೇಖರಸ್ವಾಮಿ ಪ್ರಕಟಣೆಯಲ್ಲಿ ಕೋರಿದ್ದಾರೆ.

