ಇಂದು ರಾಯಚೂರು ತಾಲೂಕು ರಾಯಚೂರು ನಗರದ ಅರಬ್ ಮೋಹಲ್ಲಾದ ಅಂಗನವಾಡಿ ಕೇಂದ್ರದಲ್ಲಿ ಲಸಿಕಾ ಸತ್ರಕ್ಕೆ ಆಗಮಿಸಿದ ಫಲಾನುಭವಿಗಳಿಗೆ ಶ್ರೀಮತಿ ಸರೋಜ.ಕೆ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳು ಪೋಲಿಯೊ ರೋಗ ಅಂಗವಿಕಲತೆಯನ್ನು ತರುವಂತಹದ್ದು ಪೋಲಿಯೋ ರೋಗ ವಿರುದ್ದ ಹೋರಾಡುವ ಶಕ್ತಿ ಎರಡು ಹನಿ ಪೋಲಿಯೋ ಲಸಿಕೆಯಿಂದ ಮಾತ್ರ ಸಾಧ್ಯ . ಪ್ರತಿಯೊಬ್ಬ ತಾಯಂದಿರು ಡಿಸೆಂಬರ್ 21 ರಂದು ಭಾನುವಾರ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಹತ್ತಿರದ ಬೂತ್ಗಳಿಗೆ ತೆರಳಿ ೦-೫ ವರ್ಷದ ಒಳಗಿನ ಮಕ್ಕಳಿಗೆ ತಪ್ಪದೆ ಎರಡು ಹನಿ ಪೋಲಿಯೊ ಲಸಿಕೆ ಹಾಕಿಸಿ ಪೋಲಿಯೋ ಮುಕ್ತರನ್ನಾಗಿಸಿ ಮಕ್ಕಳು ದೇಶದ ಬೆನ್ನೆಲುಬು ಪೋಲಿಯೊ ಮುಕ್ತ ಭಾರತಕ್ಕೆ ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ಸುನೀತ ಪ್ರಾಥಮಿಕ ಆರೋಗ್ಯ ಸುರಕ್ಷಧಿಕಾರಿಗಳು, ಹಂಪಮ್ಮ , ವಿಜಯಲಕ್ಷ್ಮಿ ಆಶಾ ಕಾರ್ಯಕರ್ತೆಯರು, ಶಾಹೀಸುಲ್ತಾನ, ಶಮ್ ಶಾದ್ ಅಂಗನವಾಡಿ ಕಾರ್ಯ ಕರ್ತೆಯರು ತಾಯಂದಿರು ಹಾಜರಿದ್ದರು

