ಪಟ್ಟಣದ ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಶಿವರಾಜ .ವಿ. ಸಿದ್ದೇಶ್ವರ ಉದ್ಘಾಟಿಸಿ ಮಾತನಾಡಿ ಭಾರತ ದೇಶದ ಪ್ರಥಮ ರಾಷ್ಟçಪತಿಗಳಾದ ಡಾ.ರಾಜೇಂದ್ರ ಪ್ರಸಾದ್ ರವರು ವಕೀಲರಾಗಿದ್ದರು ಅದ್ದರಿಂದ ಅವರ ಜನ್ಮದಿನವನ್ನು ವಕೀಲರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ವಕೀಲರು ಹಾಗೂ ನ್ಯಾಯಾಧೀಶರು ದೇಶದ ಕಾನೂನು ಹಾಗೂ ಸಂವಿಧಾನದ ಜ್ಞಾನವನ್ನು ಹೊಂದುವುದು ಅಗತ್ಯವಾಗಿದೆ. ಜಗತ್ತಿನಲ್ಲಿ ಜ್ಞಾನ ಕಿಂತಲು ಮಿಗಿಲಾದದು ಯಾವುದು ಇಲ್ಲ ನ್ಯಾಯವಾದಿಗಳು ಕಾನೂನಿನ ಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮಲ್ಲಿಗೆ ಬರುವ ಕಾಕ್ಷಿದರರಿಗೆ ನ್ಯಾಯವನ್ನು ಸಿಗುವಂತೆ ಮಾಡಿದಲ್ಲಿ ನಿಮ್ಮ ಹೇಸರು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ವಕೀಲರು ಕಾನೂನಿನ ಜ್ಞಾನದ ಜೋತೆಗೆ ಬದುಕಿನ ಜ್ಞಾನವನ್ನು ಪಡೆದುಕೊಂಡಲ್ಲಿ ಜೀವನದಲ್ಲಿ ಪ್ರಬುದ್ದರಾಗಿ ಬದುಕುವುದಕ್ಕೆ ಸಾಧ್ಯವಾಗುತ್ತದೆ. ಎಂದು ತಿಳಿಸಿದರು.
ಸಿವಿಲ್ ನ್ಯಾಯಾಧೀಶರಾದ ಆನಂದ ಹೆಚ್.ಕಣ್ಣೂರ್ ಮಾತನಾಡಿ. ವಕೀಲ ವೃತ್ತಿ ಅತ್ಯಂತ ಶ್ರೇಷ್ಟವಾದ ವೃತ್ತಿಯಾಗಿದ್ದು .ದೇಶವನ್ನು ಕಟ್ಟುವಲ್ಲಿ ವಕೀಲರ ಪಾತ್ರ ಮಹಾತ್ವದಾಗಿದೆ ಸ್ವತಂತ್ರö್ಯ ದೋರಕಿಸುವುದಕ್ಕೆ ನಡೆದ ಹೋರಾಟದಲ್ಲಿ ಹಾಗೂ ನಂತರದಲ್ಲಿ ಜನರ ಹಕ್ಕುಗಳಿಗೆ ಹಾಗೂ ಸಮಸ್ಯೆಗಳಿಗೆ ನಿರಂತರವಾಗಿ ನ್ಯಾಯವಾಧಿಗಳು ಪ್ರಮುಖ ಪಾತ್ರವನ್ನು ವಹಿಸಿದ್ದರೆ. ಅದ್ದರಿಂದ ಕಿರಿಯ ವಕೀಲರು ಹಿರಿಯ ವಕೀಲರಿಂದ ಕಾನೂನಿನ ಜ್ಞಾನವನ್ನು ಪಡೆದುಕೊಂಡು ನಿರಂತರವಾಗಿ ಅಧ್ಯಯನ ಶೀಲರಾಗಿ ,ಪ್ರಮಾಣಿಕತೆ ,ಶಿಸ್ತುಬದ್ದವಾದ ವಕೀಲ ವೃತ್ತಿಯನ್ನು ನಡೆಸಬೇಕು ಎಂದು ತಿಳಿಸಿದರು.
ವಕೀಲ ವೃತ್ತಿಯಲ್ಲಿ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಿರಿಯ ವಕೀಲರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾನ್ವಿ ವಕೀಲರ ಸಂಘದ ಅಧ್ಯಕ್ಷರಾದ ರವಿಕುಮಾರ ಪಾಟೀಲ್, ಸಹಾಯಕ ಸರ್ಕಾರಿ ಅಭಿಯೋಜಕರಾದ ಅರ್ಚನಾ ಹನುಮೇಶ, ವಕೀಲರ ಸಂಘದ ಉಪಾಧ್ಯಕ್ಷರಾದ ವಿಶ್ವನಾಥ ರಾಯಪ್ಪ ,ಶಿವಪ್ಪ ನಾಯಕ ಸುಂಕನೂರು, ಪ್ರ,ಕಾರ್ಯದರ್ಶಿ ಯಲ್ಲಪ್ಪ ಹಿರೇಬಾದರದಿನ್ನಿ, ಚಂದ್ರಕಲಾ, ಗೂಗಲ್ ನಾಗರಾಜ, ಸ್ಟೆಲ್ಲಾ ಶಾರ್ಲೆಟ್, ಹಿರಿಯ ನ್ಯಾಯವಾದಿಗಳಾದ ಎ.ಬಿ.ಉಪ್ಪಳಮಠ ವಕೀಲರು, ಶೇಖರಪ್ಪ ಪಾಟೀಲ್, ಬಿ.ಚನ್ನನಗೌಡ ಪಾಟೀಲ್, ಬಿ.ಕೆ.ಅಮರೇಶಪ್ಪ, ಮಲ್ಲಿಕಾರ್ಜುನ ಪಾಟೀಲ್, ಸೇರಿದಂತೆ ಇನ್ನಿತರರು ಇದ್ದರು. 3-ಮಾನ್ವಿ-2:
ಮಾನ್ವಿ: ಪಟ್ಟಣದ ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಶಿವರಾಜ .ವಿ. ಸಿದ್ದೇಶ್ವರ ಉದ್ಘಾಟಿಸಿದರು.
ಮಾನ್ವಿ: ಪಟ್ಟಣದ ಸಿವೀಲ್ ಮತ್ತು ಜೆ.ಎಂ,ಎಫ್.ಸಿ, ನ್ಯಾಯಾಲಯದ ಆವರಣದಲ್ಲಿ ವಕೀಲರ ದಿನಾಚರಣೆ ಅಂಗವಾಗಿ ವಕೀಲರ ಸಂಘದಿAದ ನಡೆದ ಅನ್ನದಾನ ಕಾರ್ಯಕ್ರಮಕ್ಕೆ ನ್ಯಾಯಾಧೀಶರಾದ ಶಿವರಾಜ .ವಿ. ಸಿದ್ದೇಶ್ವರ ಚಾಲನೆ ನೀಡಿದರು.
ಮಾನ್ವಿ: ಪಟ್ಟಣದ ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ವಕೀಲ ವೃತ್ತಿಯಲ್ಲಿ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಿರಿಯ ವಕೀಲರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *