ತಲೇಖಾನ ಗ್ರಾಪಂ ಅಧ್ಯಕ್ಷೆ ವಿರುದ್ಧ ದುರುದ್ದೇಶದಿಂದ ನಕಲಿ ದಾಖಲಾತಿಗಳ್ನು ಸೃಷ್ಠಿಸಿ ದೂರು ಅನರ್ಹ ಆದೇಶಕ್ಕೆ ಕಲಬುರಗಿ ಹೈಕೋರ್ಟ್ ತಡೆಯಾಜ್ಞೆ- ದೇವಪ್ಪ ರಾಥೋಡ್
ಮಸ್ಕಿ: ತಾಲ್ಲೂಕಿನ ತಲೇಖಾನ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಉಮ್ಮವ್ವ ಗ್ಯಾನಪ್ಪ ಸದಸ್ಯತ್ವವನ್ನು ರದ್ದುಗೊಳಿಸಿ ೬ ವರ್ಷ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪೀಠಾಧಿಕಾರಿ (ಗ್ರಾ.ಪಂ) ಶಿವಕುಮಾರ ಆದೇಶ ಹೊರಡಿಸಿದ್ದರಿಂದ ಕಲಬುರಗಿ ಹೈಕೋರ್ಟ್ ಮೇಟ್ಟಿಲೇರಿದ್ದರಿಂದ ಹೈಕೋರ್ಟ್ ಅನರ್ಹ ಆದೇಶಕ್ಕೆ ತಡೆಯಾಜ್ಞೆ ನೀಡಿ ಅಧ್ಯಕ್ಷೆ ಸ್ಥಾನದಲ್ಲಿ ಮುಂದುವರೆಯುವಂತೆ ಹೈ ಕೋರ್ಟ್ ಆದೇಶ ನೀಡಿದೆ ಎಂದು ಕಾಂಗ್ರೆಸ್ ಪಕ್ಷದ ಹಾಗೂ ಕೆಡಿಪಿ ಸದಸ್ಯ ದೇವಪ್ಪ ರಾಥೋಡ್ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾಮ ಪಂಚಾಯತಿಯಲ್ಲಿ ಉಮವ್ವ ಗ್ಯಾನಪ್ಪ ಅಧಿಕಾರದ ಅವಧಿಯಲ್ಲಿ ಗ್ರಾಮ ಪಂಚಾಯಿತಿಯಲ್ಲಿ 2023-24 ಮತ್ತು 2024-25ನೇ ಸಾಲಿನಲ್ಲಿ ಎಂಜಿಎನ್‌ಆರ್‌ಇಜಿಎ (ನರೇಗಾ) ಯೋಜನೆಯಡಿಯಲ್ಲಿ ಚೆಕ್ ಮೆಷರಮೆಂಟ್ ಇಲ್ಲದ 22 ಪ್ರಕರಣಗಳಲ್ಲಿ ನಿಯಮ ಬಾಹಿರವಾಗಿ ಹಣ ಪಾವತಿಸಿದ್ದು, ಮತ್ತು 15ನೇ ಹಣಕಾಸು ಯೋಜನೆಯಡಿ ನಿರ್ವಹಿಸಿದ ಕಾಮಗಾರಿಗಳನ್ನು ಸರ್ಕಾರದ ಮಾರ್ಗಸೂಚಿ ಹಾಗೂ ನಿಯಮಗಳನ್ನು ಪಾಲಿಸದೇ ಅನುದಾನವನ್ನು ಖರ್ಚು ಮಾಡಿ ಅಧಿಕಾರ ದುರುಪಯೋಗ ಪಡೆಸಿಕೊಂಡಿದ್ದಾರೆಂದು ಆರೋಪಿಸಿದ್ದರಿಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಗ್ರಾಮ ಪಂಚಾಯತ್ ರಾಜ್ ಅಧಿನಿಯಮ-1993ರ ಪ್ರಕರಣ-43(J) ಮತ್ತು 48(4)ರನ್ವಯ ಗ್ರಾಮ ಪಂಚಾಯಿತಿ ಸದಸ್ಯತ್ವ ರದ್ದುಗೊಳಿಸಿ43(J)(2)ರನ್ವಯ ಮುಂದಿನ ಆರು ವರ್ಷಗಳ ಕಾಲ ಯಾವುದೇ ಚುನಾವಣೆಗೆ ನಿಲ್ಲದಂತೆ ಆದೇಶ ಹೊರಡಿಸಿಲಾಗಿತ್ತು. ದುರುದ್ದೇಶದಿಂದ ನಕಲಿ ದಾಖಲಾತಿಗಳ್ನು ಸೃಷ್ಠಿಸಿ ದೂರು ನೀಡಿದ್ದರೂ. ನಾವು ಸೂಕ್ತ ದಾಖಾಲೆಗಳನ್ನು ಹೈಕೋರ್ಟ್ಗೆ ಸಲ್ಲಿಸಿದ್ದರಿಂದ ದಾಖಲಾತಿಗಳನ್ನು ಪರಿಶೀಲಿಸಿ ವಾದ-ವಿವಾದಗಳನ್ನು ಆಲಿಸಿದ ನಂತರ ಉಮವ್ವ ಗ್ಯಾನಪ್ಪ ಸದಸ್ಯತ್ವ ರದ್ದು ಆದೇಶಕ್ಕೆ ತಡೆಯಾಜ್ಞೆ ನೀಡಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವಂತೆ ಹೈಕೋರ್ಟ್ ಆದೇಶ ನೀಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನಕಪ್ಪ ಗುಡಿಹಾಳ, ವೀರನಗೌಡ, ದುರಗಪ್ಪ ಕಟ್ಟಿಮನಿ, ಹನುಂತ ಘಂಟಿ, ಮೌನೇಶ ರಾಥೋಡ್, ಮಾನಸಿಂಗ್ ರಾಥೋಡ್, ಶರಣಪ್ಪ ತಗ್ಲಿ ಸೇರಿದಂತೆ ಇನ್ನಿತರರಿದ್ದರು

