ರಾಷ್ಟ್ರೀಯ ವಕೀಲರ ದಿನದ ಅಂಗವಾಗಿ ಇಂದು ಸಿಂಧನೂರು ತಾಲೂಕು ನ್ಯಾಯವಾದಿಗಳ ಸಂಘದ ಗೌರವಾನ್ವಿತ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಸನ್‌ರೈಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಡಿ ಫಾರ್ಮಸಿ ನರ್ಸಿಂಗ್ ಪ್ಯಾರ ಮೆಡಿಕಲ್ ಕಾಲೇಜು ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮಕ್ಕೆ ನ್ಯಾಯಾಂಗ ಕ್ಷೇತ್ರದ ಗಣ್ಯರು ಹಾಗೂ ಶಿಕ್ಷಣ ವಲಯದ ಪ್ರತಿನಿಧಿಗಳು ಭಾಗಿಯಾಗಿ ಕಾರ್ಯಕ್ರಮವನ್ನು ಸುಂದರಗೊಳಿಸಿದರು. ಶ್ರೀ ಭೀಮನಗೌಡ, ಹಿರಿಯ ವಕೀಲರು – ಅಧ್ಯಕ್ಷರು, ತಾಲೂಕು ನ್ಯಾಯವಾದಿಗಳ ಸಂಘ, ಸಿಂಧನೂರು ಜಗದೀಶ್ ಕುಮಾರ್, ನ್ಯಾಯವಾದಿಗಳು – ಉಪಾಧ್ಯಕ್ಷರು, ಸಿಂಧನೂರು ದುರ್ಗೇಶ್ ತುರುವಿಹಾಳ, ಕಾರ್ಯದರ್ಶಿ, ತಾಲೂಕು ನ್ಯಾಯವಾದಿಗಳ ಸಂಘ , ಕುಮಾರಿ ಹೀನಾ ಅಮ್ರೀನ್, ಜಂಟಿ ಕಾರ್ಯದರ್ಶಿ, ನ್ಯಾಯವಾದಿಗಳ ಸಂಘ, ಸಿಂಧನೂರು ಚಂದ್ರಶೇಖರ್ ತುರುವಿಹಾಳ, ಜಂಟಿ ಕಾರ್ಯದರ್ಶಿ, ಸಿಂಧನೂರಿನಾ ಎಲ್ಲಾ ವಕೀಲರ ಪರವಾಗಿ ಸನ್‌ರೈಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ವತಿಯಿಂದ ಗೌರವಪೂರ್ವಕ ಸನ್ಮಾನ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸನ್‌ರೈಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಅಧ್ಯಕ್ಷರಾದ ಇರ್ಫಾನ್ ಕೆ ಅತ್ತರ್ ಮಾತನಾಡಿ, ಸಮಾಜದಲ್ಲಿ ವಕೀಲರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹಮ್ಮಿಕೊಂಡರು. ನ್ಯಾಯ ಮತ್ತು ಮೂಲಭೂತ ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ ವಕೀಲರು ತೋರಿಸುವ ನಿಷ್ಠೆ, ಧೈರ್ಯ ಮತ್ತು ತ್ಯಾಗವನ್ನು ಮೆಚ್ಚುವುದರೊಂದಿಗೆ, ಸಮಾಜದಲ್ಲಿ ಕಾನೂನು ಜಾಗೃತಿ ಮೂಡಿಸುವುದು, ವಿಧಿ ವೃತ್ತಿಯ ಗೌರವವನ್ನು ಕಾಯ್ದುಕೊಳ್ಳುವುದು ಮತ್ತು ನ್ಯಾಯ ಎಲ್ಲರಿಗೂ ಲಭ್ಯವಾಗುವಂತೆ ಮಾಡುವಲ್ಲಿ ವಕೀಲರ ಪಾತ್ರ ಅಮೂಲ್ಯವಾಗಿದೆ ಎಂದು ಹೇಳಿದರು. ಅವರು ಎಲ್ಲಾ ವಕೀಲರಿಗೆ ವಕೀಲರ ದಿನದ ಹಾರ್ದಿಕ ಶುಭಾಶಯ ಹಾಗೂ ಧನ್ಯವಾದವನ್ನು ಸಲ್ಲಿಸಿದರು. ಈ ವೇಳೆ ಸನ್‌ರೈಸ್ ಸ್ಕೂಲ್ ಆಫ್ ನರ್ಸಿಂಗ್ ಪ್ರಾಚಾರ್ಯರಾದ ಲಾಜರ್ ಸಿರಿಲ್ ಜಿ ಮಾತನಾಡಿ: ಭಾರತದಲ್ಲಿ ಪ್ರತಿವರ್ಷ ಡಿಸೆಂಬರ್ 3 ರಂದು ರಾಷ್ಟ್ರೀಯ ವಕೀಲರ ದಿನ ಆಚರಿಸಲಾಗುತ್ತದೆ. ಈ ದಿನವು ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರ ಜನ್ಮದಿನವಾಗಿದ್ದು, ಅವರು ಒಬ್ಬ ಪ್ರತಿಷ್ಟಿತ ವಕೀಲರು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಂವಿಧಾನ ತಜ್ಞರಾಗಿದ್ದರು. ನ್ಯಾಯ, ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ನಾಗರಿಕರ ಹಕ್ಕುಗಳ ರಕ್ಷಣೆಗೆ ಅವರು ನೀಡಿದ ಸೇವೆ ಅತ್ಯುನ್ನತ ಮತ್ತು ಆದರ್ಶಪ್ರಾಯವಾಗಿದೆ ಎಂದು ತಿಳಿಸಿದರು. ಅವರು ಎಲ್ಲಾ ವಕೀಲರಿಗೆ ಹೃತ್ಪೂರ್ವಕ ವಕೀಲರ ದಿನದ ಶುಭಾಶಯವನ್ನು ಕೋರಿದರು ಇದೇ ಸಂದರ್ಭದಲ್ಲಿ ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಪದಾಧಿಕಾರಿಗಳು ಸರ್ವ ಸದಸ್ಯರು ವಕೀಲರ ಬಳಗ , ಸನ್ ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಉಪನ್ಯಾಸಕರುಗಳು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪಸ್ಥಿತರಿದ್ದು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *