ಲಿಂಗಸಗೂರ, ನ.14 –
ಲಿಂಗಸಗೂರಿನ ಮಾಜಿ ಶಾಸಕ ಹಾಗೂ ಕೆಪಿಸಿಸಿ ರಾಜ್ಯ ಉಪಾಧ್ಯ ಕ್ಷರಾದ ಡಿ ಎಸ್ ಹೂಲಗೇರಿ ಅವರಿಗೆ ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಸ್ಥಾನ ಹಾಗೂ ಮಾವಿನಬಾವಿ
ಗ್ರಾಮಕ್ಕೆ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಂಜೂರು ಮಾಡುವಂತೆ ಎಪಿಎಂಸಿ ನಿರ್ದೇಶಕ ರುದ್ರಗೌಡ ಪಾಟೀಲ್ ಅವರು ಮುಖ್ಯಮಂತ್ರಿ ಡಿ ಕೆ ಶಿವುಕುಮಾರ ಅವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದರು.
ಮಾಜಿ ಶಾಸಕರಾದ ಡಿ ಎಸ್ ಹೂಲಗೇರಿ ಯವರು ಶಾಸಕರಾಗಿದ್ದ ಸಂದರ್ಭದಲ್ಲಿಲಿಂಗಸಗೂರು ಕ್ಷೇತ್ರ ಹಲವು ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಶ್ರಮ ವಹಿಸಿದ್ದು ಅಲ್ಲದೆ ಪಕ್ಷ ಸಂಘಟನೆಯಲ್ಲಿ ಅವಿರತ ಶ್ರಮವಹಿಸುತ್ತಿದ್ದು ಅವರಿಗೆ ಹಟ್ಟಿ ಚಿನ್ನದ ಗಣಿ ಕಂಪನಿಯ ಅಧ್ಯಕ್ಷ ಸ್ಥಾನ ನೀಡಿದರೆ ಲಿಂಗಸಗೂರ ಕ್ಷೇತ್ರ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದು ಕ್ಷೇತ್ರದ ಅಭಿವೃದ್ಧಿ ಹಿತ ದೃಷ್ಟಿಯಿಂದ ನಿಗಮ ಮಂಡಳಿ ನೇಮಕಾತಿಯಲ್ಲಿ
ಅವರಿಗೆ ಹಟ್ಟಿ ಚಿನ್ನದ ಗಣಿ ಅಧ್ಯಕ್ಷಸ್ಥಾನ ನೀಡುವಂತೆ ಅವರು ಮನವಿ ಮಾಡಿದರು.
ಮಾವಿನಭಾವಿ ಕೃಷಿ ಉಪ ಮಾರುಕಟ್ಟೆ ನಿರ್ಮಾಣಕ್ಕೆ ಸೂಕ್ತ ಗ್ರಾಮವಾಗಿದ್ದು.
ಮಾವಿನಭಾವಿ ಗ್ರಾಮವು ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ್, ಎಪಿಎಂಸಿ ಕ್ಷೇತ್ರ, ಮತ್ತು ಪಿ ಎಲ್ ಡಿ ಬ್ಯಾಟಕ್, ವ್ಯವಸಾಯ ಸೇವಾ ಸಹಕಾರ ಸಂಘ ಸೇರಿದಂತೆ.ಹಲವು ರೀತಿಯ ಭೌಗೋಳಿಕವಾಗಿ ಹಾಗೂ ವಿಸ್ತೀ ರ್ಣದಲ್ಲಿ ದೊಡ್ಡ ಗ್ರಾಮವಾಗಿದ್ದು. ರೈತರ ತಮ್ಮ ಜಮೀನುಗಳಲ್ಲಿ ಬೆಳೆದ (ಬೆಳೆಗಳನ್ನು) ಉತ್ಪನ್ನಗ ಳನ್ನು ಮಾರಾಟ ಮಾಡಲು
ಪಟ್ಟಣದ ಮುದುಗಲ್, ಅಥವಾ ಲಿಂಗಸಗೂರ, ರಾಯಚೂರು, ಅಂತಹ ದೊಡ್ಡ ಪಟ್ಟಣಕ್ಕೆ.
ರೈತರು ತಮ್ಮ ಮಾರಾಟ ದಾಸ್ತಾನುಗಳನ್ನು ಮಾರಲು ಹೋಗುತ್ತಿದ್ದು. ರೈತರಹಿತ ದೃಷ್ಟಿಯಿಂದ ರೈತರ ಅನುಕೂಲಕ್ಕಾಗಿ ಗ್ರಾಮಕ್ಕೆ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಸಮಿತಿ ಮಂಜೂರು ಮಾಡುವಂತೆ ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಧವೀಧರ ವಿಭಾಗದ ಜಿಲ್ಲಾಧ್ಯಕ್ಷ ಸಂಜೀವಪ್ಪ ಹುನುಕುಂಟಿ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಶರಣಗೌಡ ಹುನಕುಂಟಿ ಉಪಸ್ಥಿತರಿದ್ದರು.
