ಲಿಂಗಸಗೂರು : ನ 10 –

ತಾಲೂಕಿನ

ಹಿರೇಉಪ್ಪೇರಿ ಗ್ರಾಮದಲ್ಲಿ ಸಾಗವಾನಿ ಮರ ಕಡಿದು ದೇವದುರ್ಗ ತಾಲೂಕಿನ ಊಟಿ ಗ್ರಾಮಕ್ಕೆ ಅಕ್ರಮವಾಗಿ ಸಾಗುತ್ತಿದ್ದ ವೇಳೆ ಖಚಿತ ಮಾಹಿತಿಯ ಮೇರೆಗೆ ಪಟ್ಟಣದ ಬಸವಸಾಗರ ವೃತ್ತದಲ್ಲಿ ಪೊಲೀಸರು ದಾಳಿ ನಡೆಸಿ ಮಾಲು ಸಮೇತ ಜಪ್ತಿ ಮಾಡಿದ್ದಾರೆ.

 

ಮೂರು ಬೊಲೆರೋ ಗೂಡ್ಸ್‌ ವಾಹನದಲ್ಲಿ 3.874 ಮೀಟ‌ರ್ ಅಳತೆಯ 119 ಘನ ಸಾಗುವಾನಿ ಮರದ ತುಂಡುಗಳನ್ನು ಯಾವುದೇ ದಾಖಲಾತಿ ಇಲ್ಲದೆ ಅಕ್ರಮವಾಗಿ ದೇವದುರ್ಗ ತಾಲೂಕಿನ

ಊಟಿ ಗ್ರಾಮಕ್ಕೆ ಸಾಗಿಸುತ್ತಿದ್ದ ವೇಳೆಯಲ್ಲಿ ಪಟ್ಟಣದ ಬಸವಸಾಗರ ವೃತ್ತದಲ್ಲಿ ಪಿ ಐ ಹೊಸಕೇರಪ್ಪ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ದಾಳಿ ನಡೆಸಿ 4.82.761 ರೂ. ಮೌಲ್ಯದ ಸಾಗುವಾನಿ ಮರದ ತುಂಡುಗಳು ಹಾಗೂ ಮೂರು ಬೊಲೆರೋ ಗ್ರೂಡ್ಸ್ ವಾಹನಗಳನ್ನು ಜಪ್ತಿ ಮಾಡಿ ಗ್ರೂಡ್ಸ್ ವಾಹನಗಳ ಚಾಲಕರಾದ ಮಲ್ಲೇಶ ಹುಣಸಿಗಿಡದ, ಅಭಿಜಿತ, ಫಕ್ರುದ್ದೀನ್ ಮುಲ್ಲಾ, ಆಂಜನೇಯ ಮ್ಯಾಕಲ‌ರ್ ಹಾಗೂ ಜಮೀನು ಮಾಲಿಕನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ .

Leave a Reply

Your email address will not be published. Required fields are marked *