ಮಸ್ಕಿ* : ಗ್ರಾಮೀಣ ಮಣ್ಣಿನಲ್ಲಿ ಅರಳಿದ ಪ್ರತಿಭೆಯೊಂದು ಇಂದು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವ ಮೂಲಕ ತನ್ನೂರಿನ ಕೀರ್ತಿಯನ್ನು ಹೆಚ್ಚಿಸಿದೆ.ಮಟ್ಟೂರು ಗ್ರಾಮದ ಮಾನಯ್ಯ ಅವರ ಪುತ್ರ,ಪ್ರಸ್ತುತ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಯುವ ಕಬಡ್ಡಿ ಆಟಗಾರ ಬೀರ್ಲಿಂಗ್ ಅವರು ತಮ್ಮ ಕಠಿಣ ಪರಿಶ್ರಮ,ನಿರಂತರ ಅಭ್ಯಾಸ ಹಾಗೂ ಕ್ರೀಡಾ ಬದ್ಧತೆಯಿಂದ ರಾಜ್ಯಮಟ್ಟದ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ.

 

ಬಾಲ್ಯದಿಂದಲೇ ಕಬಡ್ಡಿ ಆಟದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಬೀರ್ಲಿಂಗ್,ಮೈದಾನವನ್ನೇ ತಮ್ಮ ಸಾಧನೆಯ ವೇದಿಕೆಯನ್ನಾಗಿಸಿಕೊಂಡಿದ್ದಾರೆ.ಗೆಲುವಿನ ಕನಸು ಹೊತ್ತು ಪ್ರತಿದಿನ ಅಭ್ಯಾಸದಲ್ಲಿ ತೊಡಗಿಸಿಕೊಂಡು,ಸೋಲನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯುತ್ತಿರುವ ಅವರು ಶಾಲಾ ಹಾಗೂ ಕಾಲೇಜು ಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.ಇದೀಗ ರಾಜ್ಯಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಗ್ರಾಮೀಣ ಪ್ರತಿಭೆಯ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಪ್ರತಿಭೆಗಳು ಸೂಕ್ತ ಅವಕಾಶ,ತರಬೇತಿ ಹಾಗೂ ಪ್ರೋತ್ಸಾಹದ ಕೊರತೆಯಿಂದ ಬೆಳಕಿಗೆ ಬರದೆ ಉಳಿಯುತ್ತವೆ.ಅಂತಹ ಪರಿಸ್ಥಿತಿಯಲ್ಲಿಯೂ ತಮ್ಮ ಪರಿಶ್ರಮದಿಂದ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಬೀರ್ಲಿಂಗ್ ಅವರ ಸಾಧನೆ ಇತರ ಯುವಕರಿಗೆ ಸ್ಫೂರ್ತಿಯಾಗಿದೆ.ಇಂತಹ ಪ್ರತಿಭೆಗಳಿಗೆ ಸರ್ಕಾರ,ಕ್ರೀಡಾ ಇಲಾಖೆ ಹಾಗೂ ದಾನಿಗಳು ಸೂಕ್ತ ಪ್ರೋತ್ಸಾಹ ನೀಡಿದರೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಇನ್ನಷ್ಟು ಎತ್ತರದ ಸಾಧನೆ ಮಾಡಲು ಸಾಧ್ಯವಾಗಲಿ.

Leave a Reply

Your email address will not be published. Required fields are marked *